More

    ಈ ಬಾರಿಯ ಐಪಿಎಲ್​ ಹೊರದೇಶದಲ್ಲಿ ಆಯೋಜನೆ ಸಾಧ್ಯತೆ

    ನವದೆಹಲಿ: ಕೋವಿಡ್​-19 ಪಿಡುಗಿನ ಅವಾಂತರ ಮುಂದುವರಿದಿರುವಂತೆ 2020ನೇ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಟೂರ್ನಿ ಆಯೋಜನೆ ಕುರಿತ ಗೊಂದಲವೂ ಮುಂದುವರಿದಿದೆ. ಪ್ರಸ್ತಕ ಸಾಲಿನಲ್ಲೇ ಈ ಟೂರ್ನಿಯನ್ನು ಆಯೋಜಿಸಲಾಗುತ್ತದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಆದರೆ, ಟೂರ್ನಿ ಆಯೋಜನೆಗೆ ಇರುವ ಎಲ್ಲ ಅವಕಾಶಗಳನ್ನು ಅವಲೋಕಿಸುತ್ತಿರುವ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ), ಅವಕಾಶ ಸಿಕ್ಕರೆ ಹೊರದೇಶದಲ್ಲಿ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆಸಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಖಚಾಂಚಿ ಅರುಣ್​ ಧುಮಾಲ್​, ಐಪಿಎಲ್​ ಟೂರ್ನಿ ಆಯೋಜನೆಗೆ ಹಾಗೂ ಆಟಗಾರರ ಆರೋಗ್ಯಕ್ಕೆ ಅನುಕೂಲಕರ ವಾತಾವರಣ ಇದೆ ಎನ್ನುವುದಾದರೆ ಭಾರತದಲ್ಲೇ ಟೂರ್ನಿ ಆಯೋಜಿಸಲಾಗುವುದು. ಇಲ್ಲವಾದಲ್ಲಿ, ಅವಕಾಶ ಸಿಕ್ಕಲ್ಲಿ ಹೊರದೇಶದಲ್ಲಿ ಆಯೋಜಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.

    2009ರಲ್ಲಿ ಒಮ್ಮೆ ಹಾಗೂ 2014ರಲ್ಲಿ ಸ್ವಲ್ಪ ಭಾಗದ ಐಪಿಎಲ್​ ಟೂರ್ನಿಯನ್ನು ಕ್ರಮವಾಗಿ ದಕ್ಷಿಣ ಆಫ್ರಿಕಾ ಮತ್ತು ಯುಎಇನಲ್ಲಿ ಆಯೋಜಿಸಲಾಗಿತ್ತು. ಈ ಅನುಭವದ ಪ್ರಯೋಜನ ಪಡೆದು, ಈ ಬಾರಿಯ ಟೂರ್ನಿಯನ್ನು ಹೊರದೇಶದಲ್ಲಿ ಆಯೋಜಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಹಾಗೆ ಮಾಡುವುದು ನಮಗೂ ಇಷ್ಟವಿಲ್ಲವಾದರೂ, ಅನಿವಾರ್ಯ ಎಂದಾದಲ್ಲಿ ಹಾಗೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

    ಇದನ್ನೂ ಓದಿ: ಕೆಫೆ ಡೇ ಸಂಸ್ಥಾಪಕ ಸಿದ್ದಾರ್ಥ್​ ಪುತ್ರ ಅಮಾರ್ತ್ಯರೊಂದಿಗೆ ಡಿಕೆಶಿ ಪುತ್ರಿ ಐಶ್ವರ್ಯಾ ವಿವಾಹ…?!

    ಇಡಿ ವಿಶ್ವದಲ್ಲೇ ಕರೊನಾ ಪಿಡುಗು ಹಬ್ಬಿರುವ ಹಿನ್ನೆಲೆಯಲ್ಲಿ ಐಪಿಎಲ್​ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸುವುದು ಎಷ್ಟು ಸೂಕ್ತ? ಎಲ್ಲ ಆಯೋಜಿಸಲಾಗುತ್ತದೆ ಎಂಬ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಲು ಬಿಸಿಸಿಐ ಪ್ರಯತ್ನಿಸುತ್ತಿದೆ.

    ಜಗತ್ತಿನಲ್ಲಿ ಇಂಥ ದೇಶ ಕೋವಿಡ್​-19ರಿಂದ ಬಾಧಿತವಾಗಿಲ್ಲ ಎಂದು ಹೇಳಲಾಗದು. ಶ್ರೀಲಂಕಾ, ದುಬೈ ಅಥವಾ ದಕ್ಷಿಣ ಆಫ್ರಿಕಾದಲ್ಲೂ ಕರೊನಾ ಸೋಂಕು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ವಿಮಾನಯಾನಕ್ಕೂ ನಿರ್ಬಂಧಗಳು ಇವೆ. ಶ್ರೀಲಂಕಾದಲ್ಲಿ ಇದುವರೆಗೆ ಪರಿಸ್ಥಿತಿ ಹತೋಟಿಯಲ್ಲಿತ್ತು. ಆದರೆ, ಈಗ ಅಲ್ಲಿ ಕೂಡ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ರೀತಿಯ ಎಲ್ಲ ಸಮಸ್ಯೆಗಳನ್ನು ನಾವು ನೀಗಿಸಿಕೊಂಡು ಮುಂದುವರಿಯಬೇಕಾಗುತ್ತದೆ ಎಂದು ಧುಮಾಲ್​ ಹೇಳಿದರು.

    ಪುಟ್ಟ ಮಕ್ಕಳ ಪ್ರಾಣದ ಜತೆ ಚಲ್ಲಾಟ, ಸರ್ಕಾರದ ಆದೇಶಕ್ಕೂ ಮುನ್ನವೇ ಸ್ಕೂಲ್ ಓಪನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts