More

    ಐಪಿಎಲ್‌ಗೆ ಕೆಲ ಇಂಗ್ಲೆಂಡ್ ಆಟಗಾರರ ಅಲಭ್ಯ, ಫ್ರಾಂಚೈಸಿಗಳ ಅಸಮಾಧಾನ

    ದುಬೈ: ಐಪಿಎಲ್‌ಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕೆಲ ಇಂಗ್ಲೆಂಡ್ ಆಟಗಾರರು ಲೀಗ್‌ನಿಂದ ಹಿಂದೆ ಸರಿದಿದ್ದಕ್ಕೆ ಕೆಲ ಫ್ರಾಂಚೈಸಿಗಳು ಅಸಮಾಧಾನ ಹೊರಹಾಕಿವೆ. ಕಡೇ ಕ್ಷಣದಲ್ಲಿ ಇಂಗ್ಲೆಂಡ್‌ನ ಮೂವರು ಆಟಗಾರರಾದ ಜಾನಿ ಬೇರ್‌ಸ್ಟೋ (ಸನ್‌ರೈಸರ್ಸ್‌), ಕ್ರಿಸ್ ವೋಕ್ಸ್ (ಡೆಲ್ಲಿ) ಹಾಗೂ ಡೇವಿಡ್ ಮಲನ್ (ಪಂಜಾಬ್) ಶನಿವಾರ ಲೀಗ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದರು. ಈ ಕುರಿತು ಬಿಸಿಸಿಐಗೆ ಇ-ಮೇಲ್ ಕಳುಹಿಸಿರುವ ಕೆಲ ಫ್ರಾಂಚೈಸಿಗಳು, ಕ್ವಾರಂಟೈನ್ ಅವಧಿಗೆ ಕುರಿತಂತೆ ಆಟಗಾರರ ಮನಸ್ಥಿತಿಯನ್ನು ಅರ್ಥೈಸಿಕೊಳ್ಳಬಲ್ಲೆವು, ಆಟಗಾರರು ಕೂಡ ಫ್ರಾಂಚೈಸಿಗಳ ಬಗ್ಗೆ ಗಮನಹರಿಸಬೇಕಿತ್ತು. ಕಡೇ ಕ್ಷಣದಲ್ಲಿ ಹೀಗೆ ಹಿಂದೆ ಸರಿದರೆ ತಂಡದ ಸಂಯೋಜನೆ ಹೇಗೆ ಸಾಧ್ಯ’ ಎಂದು ದೂರಿವೆ. ಐಪಿಎಲ್‌ನ ಭಾಗ-2ರಿಂದ ಒಟ್ಟಾರೆ 6 ಇಂಗ್ಲೆಂಡ್ ಆಟಗಾರರು ಹಿಂದೆ ಸರಿದಂತಾಗಿದೆ.

    ಮ್ಯಾಚೆಂಸ್ಟರ್‌ನಲ್ಲಿ ನಿಗದಿಯಾಗಿದ್ದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾದ ಬೆನ್ನಲ್ಲೇ ಉಭಯ ತಂಡಗಳ ಐಪಿಎಲ್ ಆಟಗಾರರು ಯುಎಇಗೆ ಬಂದಿಳಿದರು. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮದ್ ಸಿರಾಜ್ ಭಾನುವಾರ ಬೆಳಗ್ಗೆ ದುಬೈಗೆ ಬಂದಿಳಿದರು. ವಿರಾಟ್ ಕೊಹ್ಲಿ ಕುಟುಂಬ ಹಾಗೂ ಸಿರಾಜ್‌ಗಾಗಿ ಶನಿವಾರ ತಡರಾತ್ರಿ ಆರ್‌ಸಿಬಿ ಫ್ರಾಂಚೈಸಿ ಶನಿವಾರ ತಡರಾತ್ರಿ ಮ್ಯಾಂಚೆಸ್ಟರ್‌ನಿಂದ ದುಬೈಗೆ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮಾಡಿತ್ತು. ಕೊಹ್ಲಿ ಹಾಗೂ ಸಿರಾಜ್ ಯುಎಇಗೆ ಬಂದಿಳಿದ ಫೋಟೋವನ್ನು ಆರ್‌ಸಿಬಿ ಟ್ವೀಟ್ ಮಾಡಿದೆ. ಸಿಎಸ್‌ಕೆ ತಂಡದ ಆಟಗಾರರಾದ ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ, ಇಂಗ್ಲೆಂಡ್ ಸ್ಯಾಮ್ ಕರ‌್ರನ್ ಹಾಗೂ ಮೊಯಿನ್ ಅಲಿ ದುಬೈಗೆ ಬಂದರೆ, ಸನ್‌ರೈಸರ್ಸ್‌ ತಂಡದ ವೃದ್ಧಿಮಾನ್ ಸಾಹ ಹಾಗೂ ಕೆಕೆಆರ್ ತಂಡದ ವೇಗಿ, ಕನ್ನಡಿಗ ಪ್ರಸಿದ್ಧ ಕೃಷ್ಣ ಭಾನುವಾರ ಯುಎಇಗೆ ಬಂದಿಳಿದರು.

    ಇಂಗ್ಲೆಂಡ್ ಪ್ರವಾಸದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ 7 ಆಟಗಾರರು ಭಾನುವಾರ ದುಬೈಗೆ ಬಂದಿಳಿದರು ಎಂದು ಡೆಲ್ಲಿ ಫ್ರಾಂಚೈಸಿ ತಿಳಿಸಿದೆ. ರಿಷಭ್ ಪಂತ್, ಆರ್.ಅಶ್ವಿನ್, ಅಜಿಂಕ್ಯ ರಹಾನೆ, ಇಶಾಂತ್ ಶರ್ಮ, ಅಕ್ಷರ್ ಪಟೇಲ್, ಪೃಥ್ವಿ ಷಾ, ಉಮೇಶ್ ಯಾದವ್ ಮ್ಯಾಂಚೆಸ್ಟರ್‌ನಿಂದ ವಾಪಸಾಗಿ 6 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾದರು. ಕ್ವಾರಂಟೈನ್ ಅವಧಿಯಲ್ಲಿ ಆಟಗಾರರಿಗೆ ಮೂರು ಕೋವಿಡ್-19 ಟೆಸ್ಟ್ ನಡೆಯಲಿದೆ. ಮೂರು ಟೆಸ್ಟ್ ನೆಗೆಟಿವ್ ಬಂದ ಬಳಿಕವಷ್ಟೇ ಆಟಗಾರರು ತಂಡದ ಬಯೋಬಬಲ್ ವ್ಯಾಪ್ತಿಗೆ ಪ್ರವೇಶ ಪಡೆಯಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts