More

    ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳಿಗೆ ದಿನಾಂಕ ನಿಗದಿಗೊಳಿಸಿದ ಬಿಸಿಸಿಐ

    ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಸ್ಥಗಿತಗೊಂಡಿರುವ ಐಪಿಎಲ್ 14ನೇ ಆವೃತ್ತಿಯನ್ನು ಟಿ20 ವಿಶ್ವಕಪ್‌ಗೆ ಮುನ್ನ ಆಯೋಜಿಸಲು ಬಿಸಿಸಿಐ ಯೋಜನೆ ಸಿದ್ಧಪಡಿಸಿದೆ. ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ನಡುವಿನ ಒಂದು ತಿಂಗಳ ಕಾಲಾವಕಾಶದಲ್ಲಿ ಐಪಿಎಲ್ ಪೂರ್ಣಗೊಳಿಸಲು ಬಿಸಿಸಿಐ ರೂಪುರೇಷೆ ರೂಪಿಸುತ್ತಿದೆ.

    ಐಪಿಎಲ್‌ನಲ್ಲಿ ಸದ್ಯ 29 ಪಂದ್ಯ ನಡೆದಿದ್ದು, ಇನ್ನು 31 ಪಂದ್ಯ ಬಾಕಿ ಉಳಿದಿವೆ. 8 ಡಬಲ್ ಹೆಡರ್‌ಗಳ (ಒಂದೇ ದಿನ 2 ಪಂದ್ಯ) ಸಹಿತ 4 ವಾರಗಳಲ್ಲಿ 31 ಪಂದ್ಯ ಮುಗಿಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ಮೇ 29ರಂದು ನಡೆಯಲಿರುವ ಬಿಸಿಸಿಐ ಎಸ್‌ಎಂಜಿಯಲ್ಲಿ ಈ ಯೋಜನೆ ಅಂತಿಮಗೊಳ್ಳುವ ನಿರೀಕ್ಷೆ ಇದೆ.

    ಟಿ20 ವಿಶ್ವಕಪ್ ಅಕ್ಟೋಬರ್ 18ರಂದು ಆರಂಭಗೊಳ್ಳಲಿದೆ. ಭಾರತದಲ್ಲಿ ನಿಗದಿಯಾಗಿರುವ ಈ ಟೂರ್ನಿಯ ಭವಿಷ್ಯ ಜೂನ್ 2ರಂದು ನಡೆಯುವ ಐಸಿಸಿ ಸಭೆಯಲ್ಲಿ ನಿರ್ಧಾರವಾಗಲಿದೆ. ಕರೊನಾದಿಂದಾಗಿ ಭಾರತದಲ್ಲಿ ಟೂರ್ನಿ ನಡೆಯದಿದ್ದರೆ ಯುಎಇಗೆ ಸ್ಥಳಾಂತರವಾಗಲಿದೆ. ಐಪಿಎಲ್ ಟೂರ್ನಿಯನ್ನೂ ಯುಎಇಯಲ್ಲೇ ನಡೆಸಲು ಬಿಸಿಸಿಐ ಸದ್ಯ ಒಲವು ತೋರಿದೆ.

    ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಒಟ್ಟಾರೆ 41 ದಿನಗಳ ಕಾಲ ಸಾಗಲಿದೆ. 2 ಮತ್ತು 3ನೇ ಪಂದ್ಯದ ನಡುವೆ 9 ದಿನಗಳ ಅಂತರವಿದ್ದು, ಇದನ್ನು ಕಡಿಮೆ ಮಾಡುವ ಮೂಲಕ ಸರಣಿಯನ್ನು ಬೇಗನೆ ಮುಗಿಸುವಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಮನವಿ ಸಲ್ಲಿಸಿದೆ.

    ಭಾರತ-ಲಂಕಾ ಪಂದ್ಯ ಹೆಚ್ಚಳ?
    ಕೊಲಂಬೊ: ಜುಲೈನಲ್ಲಿ ನಡೆಯಲಿರುವ ಭಾರತ ತಂಡದ ಶ್ರೀಲಂಕಾ ಪ್ರವಾಸದಲ್ಲಿ ನಿಗದಿಗಿಂತ ಹೆಚ್ಚು ಪಂದ್ಯಗಳು ಆಯೋಜನೆಗೊಳ್ಳುವ ಸಾಧ್ಯತೆಗಳಿವೆ. ಕರೊನಾ ಕಾಲದಲ್ಲಿ ಆರ್ಥಿಕ ಸಂಕಷ್ಟದಿಂದ ಇಕ್ಕಟ್ಟಿನಲ್ಲಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ನೆರವಾಗುವ ಸಲುವಾಗಿ ಬಿಸಿಸಿಐ, ಹೆಚ್ಚಿನ ಪಂದ್ಯಗಳನ್ನು ಆಡಲು ಸಮ್ಮತಿಸುವ ನಿರೀಕ್ಷೆ ಇದೆ.

    ಹಾಲಿ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ಪ್ರವಾಸದಲ್ಲಿ ತಲಾ 3 ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಬೇಕಾಗಿದೆ. ಆದರೆ 3ಕ್ಕೆ ಬದಲಾಗಿ 5 ಟಿ20 ಪಂದ್ಯಗಳು ಆಯೋಜನೆಗೊಳ್ಳುವ ಸಾಧ್ಯತೆ ಇದೆ. ಇದರಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಟಿವಿ ಪ್ರಸಾರ ಹಕ್ಕಿನಿಂದ ಹೆಚ್ಚಿನ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.

    ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ಬಿಸಿಸಿಐ, ಲಂಕೆಗೆ 2ನೇ ಸ್ತರದ ತಂಡವನ್ನು ಕಳುಹಿಸಲು ಬಯಸಿದೆ. ಹೀಗಾಗಿ ಪ್ರಮುಖ ಆಟಗಾರರ ಗೈರಿನಿಂದ ಶ್ರೀಲಂಕಾದಲ್ಲಿ ಪಂದ್ಯ ಆಯೋಜನೆಗೆ ಉಂಟಾಗುವ ಹಿನ್ನಡೆಯನ್ನು ತಪ್ಪಿಸಲು ಕೂಡ ಬಿಸಿಸಿಐ, ಹೆಚ್ಚಿನ ಪಂದ್ಯ ಆಡಲು ಸಮ್ಮತಿಸುವುದು ಅನಿವಾರ‌್ಯವೆನಿಸಿದೆ.

    ಅನುಷ್ಕಾಗೆ ಮುನ್ನ ಈ ಹುಡುಗಿಯೊಂದಿಗೆ ಡೇಟಿಂಗ್ ಮಾಡಿದ್ದರು ವಿರಾಟ್ ಕೊಹ್ಲಿ!

    ಪತ್ನಿ ನತಾಶಾ ಈಜುಡುಗೆ ಫೋಟೋಗೆ ಪಾಂಡ್ಯ ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

    ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಪುತ್ರಿಯರು ಈಗ ಟೆನಿಸ್ ಆಟಗಾರ್ತಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts