More

    ಐಪಿಎಲ್​​​ ಇತಿಹಾಸದಲ್ಲೇ ಗರಿಷ್ಠ ಸ್ಕೋರ್​ ಗಳಿಸಿದ ಎಸ್​ಆರ್​ಎಚ್​​ ತಂಡದಿಂದಲೇ ಅತ್ಯಂತ ಕೆಟ್ಟ ದಾಖಲೆ!

    ಚೆನ್ನೈ: ನಿನ್ನೆಯಷ್ಟೇ (ಮೇ 26) ಮುಕ್ತಾಯಗೊಂಡ 17ನೇ ಐಪಿಎಲ್​ ಆವೃತ್ತಿಯಲ್ಲಿ ಲೀಗ್​ ಹಂತದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ವಿರುದ್ಧ 287 ರನ್​ ಬಾರಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್​ ಮಾಡಿದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡ ಇದೀಗ ಐಪಿಎಲ್​ನಲ್ಲೇ ಕೆಟ್ಟ ದಾಖಲೆಯನ್ನು ದಾಖಲಿಸಿದೆ. ಐಪಿಎಲ್ ಫೈನಲ್‌ನಲ್ಲಿ ಅತಿ ಕಡಿಮೆ ಸ್ಕೋರ್​ ಗಳಿಸಿದ ತಂಡ ಎಂಬ ಅಪಖ್ಯಾತಿಯನ್ನು ಹೊತ್ತುಕೊಂಡಿದೆ.

    ಭಾನುವಾರ (ಮೇ 26) ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಎಸ್‌ಆರ್‌ಹೆಚ್ ತಂಡ ಕೇವಲ 113 ರನ್‌ಗಳಿಗೆ ಆಲೌಟ್​ ಆಗುವ ಮೂಲಕ ಈ ಕೆಟ್ಟ ದಾಖಲೆಗೆ ಕಾರಣವಾಯಿತು. ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿತ್ತು. 2013ರ ಐಪಿಎಲ್​ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ತಂಡ 9 ವಿಕೆಟ್​ ಕಳೆದುಕೊಂಡು ಕೇವಲ 125 ರನ್​ ಗಳಿಸಿತ್ತು.

    ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಂತರ ಮುಂಬೈ ಇಂಡಿಯನ್ಸ್ ಮೂರನೇ ಸ್ಥಾನದಲ್ಲಿದೆ. 2017ರ ಐಪಿಎಲ್​ ಫೈನಲ್‌ನಲ್ಲಿ ಮುಂಬೈ ತಂಡ 8 ವಿಕೆಟ್​ ನಷ್ಟಕ್ಕೆ 129 ರನ್​ ಗಳಿಸಿತ್ತು. ಇದೇ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ 128 ರನ್​ ಗಳಿಸಿ ಒಂದು ರನ್‌ನಿಂದ ಸೋತಿತು. ಇದಿಷ್ಟು ಐಪಿಎಲ್ ಫೈನಲ್‌ನಲ್ಲಿ ಇದುವರೆಗಿನ ಅತ್ಯಂತ ಕಡಿಮೆ ಸ್ಕೋರ್‌ಗಳು. ಈಗ ಆ ಸಾಲಿಗೆ ಎಸ್​ಆರ್​ಎಚ್​ ಸೇರಿಕೊಂಡಿದೆ. ಈ ಸೀಸನ್​ನಲ್ಲಿ 287/3 ಮತ್ತು 277/3 ಸ್ಕೋರ್‌ಗಳೊಂದಿಗೆ ಟಿ20 ಇತಿಹಾಸದಲ್ಲಿ ಬೃಹತ್ ಸ್ಕೋರ್‌ಗಳನ್ನು ದಾಖಲಿಸಿದ ಸನ್‌ರೈಸರ್ಸ್ ಹೈದರಾಬಾದ್​ ತಂಡ ಫೈನಲ್‌ನಲ್ಲಿ ದಯನೀಯವಾಗಿ ವಿಫಲವಾಯಿತು.

    ಪಂದ್ಯ ವಿಚಾರಕ್ಕೆ ಬರುವುದಾದರೆ, ನಿನ್ನೆ (ಮೇ 26) ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್​ ಕೇವಲ 18.3 ಓವರ್​ಗಳಲ್ಲಿ 113 ರನ್ ಗಳಿಗೆ ಆಲೌಟಾಯಿತು. ಯಾವುದೇ ಹಂತದಲ್ಲೂ ಬ್ಯಾಟಿಂಗ್‌ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಐಪಿಎಲ್​ ಹರಾಜಿನಲ್ಲಿ 24.75 ಕೋಟಿ ರೂ.ಗೆ ಕೋಲ್ಕತ್ತ ಪಾಲಾದ ವೇಗಿ ಮಿಚೆಲ್ ಸ್ಟಾರ್ಕ್ ಆರಂಭಿಕ ದಾಳಿ ನಡೆಸಿದರು. ಮೊದಲ ಓವರ್‌ನಲ್ಲಿ ಅಭಿಷೇಕ್ ಶರ್ಮಾ (2) ಅವರನ್ನು ಔಟ್ ಮಾಡಿದರು. ನಂತರದ ಓವರ್‌ನಲ್ಲಿ ವೈಭವ್ ಅರೋರಾ, ಟ್ರಾವಿಸ್​ ಹೆಡ್ ಡಕ್ ಔಟ್ ಮಾಡಿದರು. ಇದಾದ ಬಳಿಕ ಸ್ಟಾರ್ಕ್ ತ್ರಿಪಾಠಿ ಅವರನ್ನು ಔಟ್ ಮಾಡಿದರು. ಆ ನಂತರ ಎಸ್​ಆರ್​ಎಚ್​ ತಂಡ ಯಾವ ಹಂತದಲ್ಲೂ ಚೇತರಿಕೆ ಕಾಣಲಿಲ್ಲ. ನಾಯಕ ಪ್ಯಾಟ್ ಕಮ್ಮಿನ್ಸ್ (24) ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್​ ಆಯಿತು. ಮಾರ್ಕ್ರಾಮ್ 20ರನ್ ಗಳಿಸಿದರು. ಕೋಲ್ಕತ್ತ ಬೌಲರ್‌ಗಳು ಎಲ್ಲಾ ವಿಕೆಟ್‌ಗಳನ್ನು ಪಡೆದರು. ಆಂಡ್ರೆ ರಸೆಲ್ 3 ವಿಕೆಟ್ ಪಡೆದರೆ, ಸ್ಟಾರ್ಕ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್​ ಪಡೆದರು. ಉಳಿದಂತೆ ವರುಣ್ ಚಕ್ರವರ್ತಿ, ನರೈನ್ ಮತ್ತು ಅರೋರಾ ಒಂದು ವಿಕೆಟ್ ಪಡೆದರು.

    ಹೈದರಾಬಾದ್​​ ನೀಡಿದ 114ರನ್​ಗಳ ಗುರಿ ಬೆನ್ನತ್ತಿದ ಕೆಕೆಆರ್​, 10.3 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 114 ರನ್​ ಕಲೆಹಾಕಿ ವಿಜಯೋತ್ಸವ ಆಚರಿಸಿತು. ಕೆಕೆಆರ್​ ಪರ ವೆಂಕಟೇಶ್​ ಅಯ್ಯರ್​ (52) ಅತ್ಯುತ್ತಮ ಆಟವಾಡಿದರು. (ಏಜೆನ್ಸೀಸ್​)

    ನತಾಶಾ ಜತೆ ಡಿವೋರ್ಸ್ ಆಗುತ್ತೆ ಅಂತ ಮದ್ವೆಗೂ ಮೊದಲೇ ಹಾರ್ದಿಕ್​ಗೆ ಗೊತ್ತಿತ್ತು! ವೈರಲ್​ ಆಗ್ತಿದೆ ಹಳೆಯ ವಿಡಿಯೋ

    ಕ್ಯಾಶ್‌ ರಿಚ್‌ ಲೀಗ್​ನಲ್ಲಿ ಕ್ರೇಜಿ ದಾಖಲೆ ಬರೆದ ವಿರಾಟ್​ ಕೊಹ್ಲಿ: ಐಪಿಎಲ್​ ಇತಿಹಾಸದಲ್ಲೇ ಇದು ಮೊದಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts