More

    IPL 2024: ರವೀಂದ್ರ ಜಡೇಜಾ, ತುಷಾರ್ ಮಿಂಚಿನ ದಾಳಿ:​ ಪಂಜಾಬ್​ಗೆ 28 ರನ್ ಸೋಲು!

    ಧರ್ಮಶಾಲಾ: ರವೀಂದ್ರ ಜಡೇಜಾ ಅಮೋಘ ಆಲ್​ರೌಂಡ್​ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವು 28 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

    ಇದನ್ನೂ ಓದಿ: ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್!

    ಧರ್ಮಶಾಲಾದಲ್ಲಿ ನಡೆದ ಐಪಿಎಲ್ 53ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ 167 ರನ್ ಗಳಿಸಿತ್ತು. ತಂಡದ ಪರ ರವೀಂದ್ರ ಜಡೇಜಾ ಗರಿಷ್ಠ 43 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಇಡೀ ಪಂಜಾಬ್ ತಂಡ ತುಷಾರ್ ದೇಶಪಾಂಡೆ (2/35) ಮತ್ತು ರವೀಂದ್ರ ಜಡೇಜಾ (3/20) ಅವರ ಮಾರಕ ಬೌಲಿಂಗ್ ಮುಂದೆ ಪಂಜಾಬ್​ ಕೇವಲ 139 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಸಿಎಸ್‌ಕೆ ತಂಡವು ಲಖನೌ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

    IPL 2024: ರವೀಂದ್ರ ಜಡೇಜಾ, ತುಷಾರ್ ಮಿಂಚಿನ ದಾಳಿ:​ ಪಂಜಾಬ್​ಗೆ 28 ರನ್ ಸೋಲು!

    168 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಆರಂಭದಲ್ಲೇ ಜಾನಿ ಬೇರ್‌ಸ್ಟೋವ್(7) ಹಾಗೂ ರಿಲೇ ರೂಸ್ಸೌ(0) ವಿಕೆಟ್ ಕಳೆದುಕೊಂಡಿತು. ಸ್ಯಾಮ್ ಕರ್ರಾನ್(7), ಜಿತೇಶ್ ಶರ್ಮಾ(0), ಅಶುತೋಷ್ ಶರ್ಮಾ (3) ಹರ್ಷಲ್ ಪಟೇಲ್ (12) ರಾಹುಲ್ ಚಾಹರ್ (16) ಔಟ್‌ ಆಗುವ ಮೂಲಕ ಪೆವಿಲಿಯನ್‌ ಪರೇಡ್‌‌ ನಡೆಸಿದರು. ಕೊನೆಯಲ್ಲಿ ಪಂಜಾಬ್‌ ಗೆಲುವಿಗೆ ಹೋರಾಟ ನಡೆಸಿದ ಹರ್‌ಪ್ರೀತ್ ಬ್ರಾರ್ ಅಜೇಯ 16 ರನ್‌ ಗಳಿಸದರೆ, ಕಗಿಸೊ ರಬಾಡ 11 ರನ್‌ ಬಾರಿಸಿದರು. ಈ ಮೂಲಕ ಗುರಿ ತಲುವಲ್ಲಿ ಪಂಜಾಬ್‌ ವಿಫಲವಾಗಿ ಸೋಲಿಗೆ ಶರಣಾಯಿತು.

    ಚೆನ್ನೈ ತಂಡದ ಪರ ಸಂಘಟಿತ ಬೌಲಿಂಗ್‌ ಪ್ರದರ್ಶನ ಕಂಡು ಬಂತು. ರವೀಂದ್ರ ಜಡೇಜಾ 3 ವಿಕೆಟ್‌ ಕಬಳಿಸಿದರೆ, ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ 2 ವಿಕೆಟ್‌ ಪಡೆದುಕೊಂಡರು. ಇನ್ನು ಮಿಚೆಲ್ ಸ್ಯಾಂಟ್ನರ್ ಹಾಗು ಶಾರ್ದೂಲ್ ಠಾಕೂರ್ 1 ವಿಕೆಟ್‌ ಪಡೆದು ಚೆನ್ನೈ ಗೆಲುವಿನಲ್ಲಿ ಶ್ರಮವಹಿಸಿದರು.

    ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ: ಬಂಧನದ ಬಳಿಕ ಎಚ್​.ಡಿ.ರೇವಣ್ಣ ಮೊದಲ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts