More

    ಮೊದಲ ಗೆಲುವಿನ ಕನಸಿನಲ್ಲಿ ಸಿಎಸ್‌ಕೆ-ಸನ್‌ರೈಸರ್ಸ್‌

    ಮುಂಬೈ: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸತತ 2 ಸೋಲಿನಿಂದ ಕುಗ್ಗಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-15ರಲ್ಲಿ ಶನಿವಾರದ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಒಂದು ತಂಡ ಗೆಲುವಿನ ಖಾತೆ ತೆರೆಯುವುದು ನಿಶ್ಚಿತವೆನಿಸಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ನಾಯಕತ್ವ ವಹಿಸಿಕೊಂಡ ಬಳಿಕ ಆಡಿದ 3 ಪಂದ್ಯಗಳಲ್ಲೂ ನಿರಾಸೆ ಕಂಡಿರುವ ಸಿಎಸ್‌ಕೆ, ಟೂರ್ನಿ ಇತಿಹಾಸದಲ್ಲಿ ಮೊದಲ ಬಾರಿಗೆ ಆರಂಭದಲ್ಲೇ ಹ್ಯಾಟ್ರಿಕ್ ಸೋಲಿನ ರುಚಿ ಕಂಡಿದೆ. ಜಡೇಜಾ ಹೊಸ ನಾಯಕರಾಗಿದ್ದರೂ, ತಂಡ ಇನ್ನೂ ಎಂಎಸ್ ಧೋನಿ ನೆರಳಿನಲ್ಲೇ ಇರುವುದು ಸಾಕಷ್ಟು ಟೀಕೆ ಎದುರಿಸಿದೆ. ನಾಯಕತ್ವದ ಒತ್ತಡದಿಂದ ಜಡೇಜಾರ ವೈಯಕ್ತಿಕ ಫಾರ್ಮ್ ಕೂಡ ಕುಸಿದಿರುವುದು ಕಳವಳಕಾರಿಯಾಗಿದೆ.

    ಮತ್ತೊಂದೆಡೆ, ಸನ್‌ರೈಸರ್ಸ್‌ ತಂಡವೂ ದುಸ್ಥಿತಿಯಲ್ಲಿದೆ. ಬೌಲರ್‌ಗಳು ಗಮನಸೆಳೆಯುತ್ತಿದ್ದರೂ ಬ್ಯಾಟರ್‌ಗಳಿಂದ ನಿರೀಕ್ಷಿತ ನಿರ್ವಹಣೆ ಕಂಡುಬರುತ್ತಿಲ್ಲ. ಆಡಿರುವ ಎರಡೂ ಪಂದ್ಯಗಳಲ್ಲಿ ಸೋತಿರುವ ಕೇನ್ ವಿಲಿಯಮ್ಸನ್ ಬಳಗಕ್ಕೂ ಗೆಲುವಿನ ಅವಶ್ಯಕತೆಯಿದೆ. ರಾಜಸ್ಥಾನ ಎದುರು 61 ಹಾಗೂ ಎಲ್‌ಎಸ್‌ಜಿ ವಿರುದ್ಧ 12 ರನ್‌ಗಳಿಂದ ಸೋಲು ಕಂಡಿದ್ದ ಸನ್‌ರೈಸರ್ಸ್‌, ಚೇಸಿಂಗ್‌ನಲ್ಲೇ ವಿಲವಾಗುತ್ತಿದೆ.

    ಟೀಮ್ ನ್ಯೂಸ್:
    ಚೆನ್ನೈ ಸೂಪರ್‌ಕಿಂಗ್ಸ್: ಸತತ ಸೋಲಿನ ನಡುವೆಯೂ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ. ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯಬಹುದು.

    ಸನ್‌ರೈಸರ್ಸ್‌: ನಿರೀಕ್ಷಿತ ನಿರ್ವಹಣೆ ತೋರಲು ವಿಫಲರಾಗಿರುವ ವೇಗಿ ಉಮರ್ ಮಲಿಕ್ ಬದಲಿಗೆ ಕನ್ನಡಿಗ ಶ್ರೇಯಸ್ ಗೋಪಾಲ್‌ಗೆ ಅವಕಾಶ ಒಲಿಯುವ ಸಾಧ್ಯತೆಗಳಿವೆ. ಮಾರ್ಕೋ ಜಾನ್ಸೆನ್, ಕಾರ್ತಿಕ್ ತ್ಯಾಗಿ, ಪ್ರಿಯಂ ಗಾರ್ಗ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ವಿಲಿಯಮ್ಸನ್ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ರಾಹುಲ್ ತ್ರಿಪಾಠಿಗೆ ಬಿಟ್ಟುಕೊಡಬಹುದು.

    ಪಂದ್ಯ ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 16, ಸಿಎಸ್‌ಕೆ : 12, ಸನ್‌ರೈಸರ್ಸ್‌: 4

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts