More

    7 ಲಕ್ಷ ಕೋಟಿ ರೂಪಾಯಿ ಕೇವಲ ಎರಡೇ ದಿನದಲ್ಲಿ ಕೈ ಬಿಟ್ಟು ಹೋಯಿತು!

    ನವದೆಹಲಿ: ಕೇವಲ ಎರಡು ದಿನಗಳ ಅವಧಿಯಲ್ಲಿ ಬರೋಬ್ಬರಿ 7 ಲಕ್ಷ ಕೋಟಿ ರೂಪಾಯಿಯನ್ನು ಹೂಡಿಕೆದಾರರು ಷೇರುಪೇಟೆಯಲ್ಲಿ ಕಳೆದುಕೊಂಡಿದ್ದಾರೆ. ಭಾರತೀಯ ಷೇರುಪೇಟೆಯಲ್ಲಿ ಸೋಮವಾರ ಮತ್ತು ಮಂಗಳವಾರದ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಸೇರಿದ ಭಾರಿ ಮೊತ್ತದ ಸಂಪತ್ತು ಕರಗಿ ಹೋಗಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ತೋರಿದರೂ, ನಂತರ ನಷ್ಟದಲ್ಲೇ ವಹಿವಾಟು ಮುಗಿಸಿತ್ತು.

    ಸೆನ್ಸೆಕ್ಸ್​ ಮಂಗಳವಾರ ದಿನದ ವಹಿವಾಟಿನ ಕೊನೆಗೆ 261.84 ಅಂಶ ಕುಸಿದು 31,453.51ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ಸೋಮವಾರ ಸೆನ್ಸೆಕ್ಸ್​ 2,002.27 ಅಂಶ ಕುಸಿತ ಕಂಡಿತ್ತು. ಎರಡು ದಿನಗಳ ಕುಸಿತದ ಪರಿಣಾಮ ಬಿಎಸ್​ಇಯಲ್ಲಿನ ಲಿಸ್ಟೆಡ್ ಕಂಪನಿ ಷೇರುಗಳು 6,98,419.77 ಕೋಟಿ ರೂಪಾಯಿಯಿಂದ 1,22,43,201.05 ಕೋಟಿ ರೂಪಾಯಿಗೆ ಕುಸಿದಿತ್ತು.ಮಿಡ್​ಕ್ಯಾಪ್​, ಸ್ಮಾಲ್​ಕ್ಯಾಪ್​ ಷೇರು ಸೂಚ್ಯಂಕ ಶೇಕಡ 0.97 ಅಂಶ ಕುಸಿದಿದೆ.

    ಇದನ್ನೂ ಓದಿ: ಇ-ಮೇಲ್​, ವಾಟ್ಸ್​ಆ್ಯಪ್​ ಮೂಲಕ ಜನೌಷಧಿ ಕೇಂದ್ರದಿಂದ ಔಷಧ ಖರೀದಿಸಬಹುದು..

    ಜಿಯೋಜಿತ್​ ಫೈನಾನ್ಶಿಯಲ್ ಸರ್ವೀಸಸ್​ನ ರಿಸರ್ಚ್​ ಹೆಡ್​ ವಿನೋದ್ ನಾಯರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಇದ್ದು, ಷೇರುಗಳು ನಷ್ಟ ಅನುಭವಿಸಿವೆ.ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ಆದಾಯದ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದ್ಧಾರೆ.

    ಸೆನ್ಸೆಕ್ಸ್​ ಪಟ್ಟಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಷೇರು ಹೆಚ್ಚಿನ ಅಂದರೆ ಶೇಕಡ 4.64 ನಷ್ಟ ಅನುಭವಿಸಿದೆ. ಇದೇ ರೀತಿ, ಬಜಾಜ್ ಫೈನಾನ್ಸ್​, ಏಷ್ಯನ್​ ಪೇಂಟ್ಸ್​, ಏಕ್ಸಿಸ್ ಬ್ಯಾಂಕ್​, ಕೊಟಾಕ್ ಬ್ಯಾಂಕ್​, ಐಸಿಐಸಿಐ ಬ್ಯಾಂಕ್​ ಷೇರುಗಳೂ ನಷ್ಟ ಅನುಭವಿಸಿವೆ. ಇದೇ ವೇಳೆ, ಎಂಆ್ಯಂಡ್ಎಂ, ಪವರ್​ಗ್ರಿಡ್​, ಒಎನ್​ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್​ ಷೇರುಗಳು ಲಾಭ ಗಳಿಸಿವೆ. (ಏಜೆನ್ಸೀಸ್​)

    ಇದು ಸಸ್ಪೆನ್ಸ್​: ತುರಿದ ಚೀಸ್​ ಬಳಸಿ ಆ ವಿದ್ಯಾರ್ಥನಿಯರು ಹಲ್ಲೆ ನಡೆಸಿದ್ದು ಹೇಗೆ?!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts