More

    5.5 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ರು ಹೂಡಿಕೆದಾರರು!

    ಮುಂಬೈ: ಕರೊನಾ ಕರಿಛಾಯೆ ಜಗತ್ತಿನ ಆರ್ಥಿಕತೆಯನ್ನು ವ್ಯಾಪಿಸಿದ್ದು, ಷೇರುಪೇಟೆಯ ವಹಿವಾಟಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಸೋಮವಾರ ಬೆಳಗ್ಗೆ ಭಾರತೀಯ ಷೇರುಪೇಟೆ ಆರಂಭಿಕ ವಹಿವಾಟಿನಲ್ಲೇ ಭಾರಿ ಆಘಾತ ಅನುಭವಿಸಿದೆ. ಬಾಂಬೆ ಸ್ಟಾಕ್​​ ಎಕ್ಸ್​ಚೇಂಜ್​ನ ಸೂಚ್ಯಂಕ ಸೆನ್ಸೆಕ್ಸ್​ 1,700ಕ್ಕೂ ಹೆಚ್ಚು ಅಂಶ ಕುಸಿದ ಕಾರಣ ಷೇರುಪೇಟೆಯಲ್ಲಿನ ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ. ಇದೇ ವೇಳೆ ನಿಫ್ಟಿ ಕೂಡ ಕುಸಿತ ದಾಖಲಿಸಿದ್ದು, 9,500 ಅಂಶದ ಕೆಳಕ್ಕೆ ಕುಸಿದು ವಹಿವಾಟು ಮುಂದುವರಿಸಿತ್ತು.

    ಇದನ್ನೂ ಓದಿ: ಕವುಚಿ ಬಿದ್ದ ಸೆನ್ಸೆಕ್ಸ್​- ಆರಂಭಿಕ ವಹಿವಾಟಿನಲ್ಲಿ 1,500ಕ್ಕೂ ಹೆಚ್ಚು ಅಂಶ ಕುಸಿತ, ನಿಫ್ಟಿ 9,500ರ ಕೆಳಕ್ಕೆ…

    ಆರಂಭಿಕ ವಹಿವಾಟಿನ ಈ ಆಘಾತದ ಪರಿಣಾಮ ಹೂಡಿಕೆದಾರರು ಬರೋಬ್ಬರ 5.5 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ ಪಟ್ಟಿಯಲ್ಲಿ ಬಹುತೇಕ ಷೇರುಗಳು ನಷ್ಟವನ್ನೇ ತೋರಿಸಿದ್ದವು. ಈ ಅವಧಿಯಲ್ಲಿ ಸೆನ್ಸೆಕ್ಸ್​ 1,752.55 ಅಂಶ ಕುಸಿದು 31,965.07 ಅಂಶ ತಲುಪಿತ್ತು. ಈಕ್ವಿಟಿ ಮಾರುಕಟ್ಟೆಯ ಬಿಎಸ್​ಇ ಲಿಸ್ಟೆಡ್ ಕಂಪನಿಗಳ ಷೇರುಗಳ ಮೌಲ್ಯ 5,15,308.99 ಕೋಟಿ ರೂಪಾಯಿಯಿಂದ 1,24,26,311.83 ಕೋಟಿ ರೂಪಾಯಿಗೆ ಕುಸಿದಿದೆ.

    ಇದನ್ನೂ ಓದಿ: ವಲಸೆ ಕಾರ್ಮಿಕರಿಗೊಂದು ಗುಡ್​ನ್ಯೂಸ್​: ಉಚಿತ ಬಸ್​ ಪ್ರಯಾಣದ ಸೌಲಭ್ಯ ಇನ್ನೂ ಎರಡು ದಿನ ವಿಸ್ತರಣೆ

    ಸೆನ್ಸೆಕ್ಸ್​ ಪಟ್ಟಿಯಲ್ಲಿ ಮೂವತ್ತು ಷೇರುಗಳ ಪೈಕಿ ಐಸಿಐಸಿಐ ಬ್ಯಾಂಕ್ ಷೇರು ಶೇಕಡ 9 ಕುಸಿತ ಕಂಡರೆ, ನಂತರದ ಸ್ಥಾನದಲ್ಲಿ ಇಂಡಸ್​ಇಂಡ್​ ಬ್ಯಾಂಕ್​, ಬಜಾಜ್ ಫೈನಾನ್ಸ್​, ಟಾಟಾ ಸ್ಟೀಲ್​, ಎಚ್​ಡಿಎಫ್​ಸಿ ಕಂಪನಿಗಳ ಷೇರುಗಳು ನಷ್ಟ ಅನುಭವಿಸಿವೆ. ಕಳೆದ ವಾರದ ಅವಧಿಯಲ್ಲಿ ರಜೆ ಬಂದ ಕಾರಣ ವಹಿವಾಟಿನ ದಿನ ಕಡಿತವಾಗಿತ್ತು. ಆದರೂ, ಸೆನ್ಸೆಕ್ಸ್​ 2,390.40 ಅಂಶ ಏರಿಕೆ ದಾಖಲಿಸಿದೆ. (ಏಜೆನ್ಸೀಸ್​)

    VIDEO: ಹನುಮ ದೇವರಿಗೆ ಮದ್ಯಪ್ರಿಯ ಸಲ್ಲಿಸಿದ ಪೂಜೆ ಇದೀಗ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts