More

    ಸಾಗರದಾಚೆ ಎಲ್ಲೋ ‘ಟೋಬಿ’; ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿರುವ ಚೈತ್ರಾ

    | ಪ್ರಮೋದ ಮೋಹನ ಹೆಗಡೆ

    ‘ಮಹಿರಾ’ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಚೈತ್ರಾ ಆಚಾರ್. ‘ತಲೆದಂಡ’, ‘ಗಿಲ್ಕಿ’ ಸೇರಿ ಕೆಲವು ಚಿತ್ರಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಸದ್ಯ ‘ಸಪ್ತ ಸಾಗರದಾಚೆ ಎಲ್ಲೋ’ ಹಾಗೂ ‘ಟೋಬಿ’ ಚಿತ್ರಗಳಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ, ಪಾತ್ರಗಳ ಕುರಿತು ಚೈತ್ರಾ ವಿಜಯವಾಣಿ ಜತೆ ಮಾತನಾಡಿದ್ದಾರೆ.

    ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ?
    ನಾನು ಚಿತ್ರರಂಗದ ಹಿನ್ನೆಲೆಯಿಂದ ಬಂದವಳಲ್ಲ. ಅಪ್ಪ ಪ್ರಿನ್ಸಿಪಲ್. ಚಿಕ್ಕ ವಯಸ್ಸಿನಿಂದಲೂ ನಾಟಕ ಎಂದರೆ ಹುಚ್ಚು. ಶಾಲೆ, ಕಾಲೇಜಿನಲ್ಲಿ ನಾಟಕಗಳಲ್ಲಿ ನಟಿಸಿದ್ದೆ. ಆದರೆ, ಚಿತ್ರರಂಗಕ್ಕೆ ಬರ್ತೀನಿ ಅಂತಂದುಕೊಂಡಿರಲಿಲ್ಲ. ಅನೀಶ್ ನಿರ್ದೇಶನದ ‘ಬೆಂಗಳೂರು ಕ್ವೀನ್ಸ್’ ವೆಬ್‌ಸರಣಿಯಲ್ಲಿ ಮೊದಲು ಸೆಲೆಕ್ಟ್ ಆದೆ. ನಂತರ ‘ಮಹಿರಾ’ದಲ್ಲಿ ನಾಯಕಿಯಾಗಿ ಡೆಬ್ಯೂ ಮಾಡಿದೆ.

    ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಿಮ್ಮ ಪಾತ್ರ?
    ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ’ ಅಲ್ಲಿ ಮುಖ್ಯ ಪಾತ್ರದಲ್ಲಿರಲಿದ್ದೇನೆ. ನಿರ್ದೇಶಕ ಹೇಮಂತ್ ರಾವ್ ಕರೆ ಮಾಡಿ ರೋಲ್ ಕೊಟ್ಟಿದ್ದು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ವತಂತ್ರ ಹುಡುಗಿಯ ಪಾತ್ರ. ಆಕೆ ನಾಯಕನನ್ನು ಹೇಗೆ ಭೇಟಿಯಾಗುತ್ತಾಳೆ? ಅವರ ನಡುವೆ ಹೇಗೆ ಬಾಂಡಿಂಗ್ ಆಗುತ್ತೆ? ಅನ್ನೋದೆ ಕಥೆ.

    ಸಾಗರದಾಚೆ ಎಲ್ಲೋ ‘ಟೋಬಿ’; ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿರುವ ಚೈತ್ರಾ

    ‘ಟೋಬಿ’ ಕೂಡ ರಿಲೀಸ್‌ಗೆ ರೆಡಿಯಿದೆ.
    ಈ ಚಿತ್ರದ ಕಥೆ ನಡೆಯೋದು ಕುಮಟಾದ ಸುತ್ತಮುತ್ತ. ಪಕ್ಕಾ ಕಮರ್ಷಿಯಲ್ ಸಿನಿಮಾ. ನಾನಿಲ್ಲಿ ುಲ್ ರೆಬೆಲ್ ಹುಡುಗಿ. ಆದರೆ, ರಾಜ್ ಬಿ. ಶೆಟ್ಟಿ ಪಾತ್ರಕ್ಕೆ ಭಾವನಾತ್ಮಕವಾಗಿ ಕನೆಕ್ಟ್ ಆಗಿರುತ್ತೇನೆ.

    ನಿಮ್ಮ ಮುಂದಿನ ಪ್ರಾಜೆಕ್ಟ್ ?
    -‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ’ ಜತೆ ಮೂರು ಚಿತ್ರಗಳಲ್ಲಿ ಸದ್ಯ ಬಿಜಿಯಿದ್ದೀನಿ. ರಾಕೇಶ್ ಕದ್ರಿ ನಿರ್ದೇಶನದ ‘ಹ್ಯಾಪಿ ಬರ್ತ್‌ಡೇ ಟು ಮೀ’, ಶ್ರೀನಿಧಿ ಬೆಂಗಳೂರು ಮಾಡುತ್ತಿರುವ, ದೀಕ್ಷಿತ್ ಶೆಟ್ಟಿ ಅಭಿನಯದ ‘ಬ್ಲಿಂಕ್’ ಹಾಗೂ ‘ಸ್ಟ್ರಾಬೆರಿ’. ಇನ್ನೂ ಎರಡು ಚಿತ್ರಗಳು ಲೈನಪ್ ಆಗಿವೆ. ಸದ್ಯ ಶೂಟಿಂಗ್ ನಡೆಯುತ್ತಿದ್ದೆ.

    ನಿಮ್ಮ ಕನಸಿನ ಪಾತ್ರ ಯಾವುದು?
    -ನನಗೆ ಕನಸಿನ ಪಾತ್ರ, ಸಿನಿಮಾ ಅಂತಿಲ್ಲ. ಆದರೆ, ಕೆಲವು ನಿರ್ದೇಶಕರ ಜತೆ ಕೆಲಸ ಮಾಡಬೇಕು ಅನ್ನೋ ಆಸೆಯಿದೆ. ರಿಷಭ್ ಶೆಟ್ಟಿ, ಯೋಗರಾಜ್ ಭಟ್, ಪ್ರಶಾಂತ್ ನೀಲ್, ತಮಿಳಿನ ವೆಟ್ರಿಮಾರನ್ ಹಾಗೂ ಲೋಕೇಶ್ ಕನಗರಾಜ್ ಹೀಗೆ ಸುಮಾರು ಜನ ಇದ್ದಾರೆ.

    ‘ತಲೆದಂಡ’ ಚಿತ್ರದಲ್ಲಿ ಸಂಚಾರಿ ವಿಜಯ್ ಜತೆ ಅಭಿನಯಿಸಿದ್ದೀರಿ, ಅವರ ಜತೆ ಒಡನಾಟ ಹೇಗಿತ್ತು?
    -ನಾನೊಬ್ಬ ಅವಾರ್ಡ್ ವಿನ್ನರ್ ಎಂಬ ಯಾವ ಅಹಂಕಾರವೂ ಇರದ ಸರಳ ವ್ಯಕ್ತಿ. ಕ್ಯಾಮರಾ ಹಿಂದೆ ಎಷ್ಟೇ ತರಲೆ ಮಾಡುತ್ತಿದ್ದರೂ ಟಕ್ ಅಂತ ಪಾತ್ರವಾಗಿಬಿಡುತ್ತದ್ದರು. ಅವರ ನೆನಪು, ಶೂಟಿಂಗ್‌ನಲ್ಲಿ ಕಳೆದ ದಿನಗಳು ಇಂದಿಗೂ ಕಾಡುತ್ತವೆ. ‘ಗಿಲ್ಕಿ’ ನೋಡ್ತೀನಿ ಅಂದಿದ್ರು ಆದರೆ ಆಗಲಿಲ್ಲ ಎಂಬ ಕೊರಗಿದೆ.

    ಸಾಗರದಾಚೆ ಎಲ್ಲೋ ‘ಟೋಬಿ’; ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿರುವ ಚೈತ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts