More

    ಐಪಿಎಲ್ ಬೆಟ್ಟಿಂಗ್ ದಂಧೆಗೆ ದೇವರ ಹೆಸರಿನ ವಾಟ್ಸ್‌ಆ್ಯಪ್ ಗ್ರೂಪ್‌ಗಳ ಬಳಕೆ!

    ಜೈಪುರ: ‘ಜೈ ಮಾತಾ ದಿ’, ‘ಜೈ ಗೋವಿಂದ್ ದೇವ್ ಜೀ’, ‘ಬಾಲಾಜಿ ಮಹಾರಾಜ್ ಕಿ ಜೈ’ ಎಂಬಿತ್ಯಾದಿ ವಾಟ್ಸ್‌ಆ್ಯಪ್ ಗ್ರೂಪ್‌ಗಳ ಹೆಸರುಗಳನ್ನು ಕೇಳಿದಾಗ ಯಾವುದೋ ಧಾರ್ಮಿಕ, ಭಕ್ತಿಪ್ರಧಾನ ಗ್ರೂಪ್‌ಗಳಿರಬಹುದು ಎಂದು ಭಾವಿಸಿಕೊಂಡರೆ ಮೋಸ ಹೋಗಬೇಕಾಗುತ್ತದೆ. ಯಾಕೆಂದರೆ ಇವು ಬುಕ್ಕಿಗಳು, ಐಪಿಎಲ್ ಕ್ರಿಕೆಟ್ ಪಂದ್ಯಗಳ ಬೆಟ್ಟಿಂಗ್ ದಂಧೆಗಾಗಿ ರಚಿಸಿಕೊಂಡಿರುವ ವಾಟ್ಸ್‌ಆ್ಯಪ್ ಗ್ರೂಪ್‌ಗಳ ಹೆಸರುಗಳಾಗಿವೆ!

    ರಾಜಸ್ಥಾನದ ಬುಕ್ಕಿಗಳು ಈ ರೀತಿ ಹಿಂದು ದೇವರ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡು ಬೆಟ್ಟಿಂಗ್ ದಂಧೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಜೈಪುರ ಪೊಲೀಸರು ಅತಿದೊಡ್ಡ ಆನ್‌ಲೈನ್ ಬೆಟ್ಟಿಂಗ್ ಜಾಲವೊಂದನ್ನು ಬೇಧಿಸಿದ್ದು, 4.18 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ದೇವರ ಹೆಸರಿನ ವಾಟ್ಸ್‌ಆ್ಯಪ್ ಮತ್ತು ಸಾಮಾಜಿಕ ಜಾಲತಾಣಗಳ ಗುಂಪುಗಳ ಮೂಲಕ ಬುಕ್ಕಿಗಳು ಬೆಟ್ಟಿಂಗ್ ದಂಧೆಯನ್ನು ನಡೆಸುತ್ತಿದ್ದರು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ದೇವರ ಹೆಸರುಗಳನ್ನೇ ಬುಕ್ಕಿಗಳು ಕೋಡ್ ವರ್ಡ್‌ಗಳಾಗಿ ಬಳಸಿಕೊಳ್ಳುತ್ತಿದ್ದರು. ಈ ಮೂಲಕ ತಮ್ಮ ಗೌಪ್ಯ ಮಾಹಿತಿಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಬುಕ್ಕಿಗಳ ವ್ಯವಹಾರ ಕೋಡ್ ವರ್ಡ್‌ಗಳಲ್ಲೇ ನಡೆಯುತ್ತಿದ್ದವು. ಅವರ ಪ್ರಕಾರ ‘ಕಿಲೋ’ ಎಂದರೆ ಲಕ್ಷ ಮತ್ತು ‘ಚಿಕನ್’ ಎಂದರೆ ಕೋಟಿ ರೂ. ಎಂದಾಗಿರುತ್ತಿತ್ತು. ಅವರು ಅತ್ಯಂತ ರಹಸ್ಯವಾಗಿ ಈ ಗುಂಪುಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದರು ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.

    ಬೆಟ್ಟಿಂಗ್ ದಂಧೆಯ ಬಗ್ಗೆ ಕಳೆದ 2 ವಾರಗಳಿಂದ ಕಣ್ಣಿಡಲಾಗಿತ್ತು. ಸ್ಥಳೀಯ ಪೊಲೀಸರು 2 ಕಡೆಗಳಲ್ಲಿ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಇದು ಅಂತಾರಾಷ್ಟ್ರೀಯ ಬೆಟ್ಟಿಂಗ್ ಜಾಲದ ಅಂಗವಾಗಿದ್ದು, ರಾಕೇಶ್ ರಾಜ್‌ಕೋಟ್ ಎಂಬ ಅಂತಾರಾಷ್ಟ್ರೀಯ ಬುಕ್ಕಿ ದುಬೈನಿಂದಲೇ ವೆಬ್‌ಸೈಟ್ ಒಂದರ ಮೂಲಕ ಈ ಬೆಟ್ಟಿಂಗ್ ದಂಧೆಯನ್ನು ನೋಡಿಕೊಳ್ಳುತ್ತಿದ್ದ ಎಂದು ಜೈಪುರ ಪೊಲೀಸರು ವಿವರಿಸಿದ್ದಾರೆ.

    ಕ್ರಿಕೆಟ್​ ಬೆಟ್ಟಿಂಗ್​ ಸಾಲ ತೀರಿಸಲು ದೊಡ್ಡಮ್ಮನ ಮನೆಗೇ ಕನ್ನ ಹಾಕಿದ; ಆಮೇಲೇನಾಯಿತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts