More

    ವಿಕ್ರಮನ ಸಾಹಸಗಳು; ಇನ್​ಸ್ಪೆಕ್ಟರ್ ವಿಕ್ರಂ ಸಿನಿಮಾ ವಿಮರ್ಶೆ

    | ಚೇತನ್ ನಾಡಿಗೇರ್ ಬೆಂಗಳೂರು

    ‘ಬುಲೆಟ್ ತಡೀತೀಯೋ, ಬುಲೆಟಿನ್ ತಡೀತೀಯೋ, ಆಯ್ಕೆ ನಿನಗೆ ಬಿಟ್ಟಿದ್ದು …’ ಎಂಬ ಎರಡು ಆಪ್ಶನ್​ಗಳನ್ನು ಕೊಡುತ್ತಾನೆ ಆತ. ಅದಕ್ಕೆ ಪತ್ರಕರ್ತ ಆರಾಧ್ಯ ಒಪು್ಪವುದಿಲ್ಲ. ತಕ್ಷಣವೇ ಅವನ ದೇಹದೊಳಗೊಂದು ಬುಲೆಟ್ ನುಗ್ಗುತ್ತದೆ. ಅವನಷ್ಟೇ ಅಲ್ಲ, ಈ ಕೊಲೆಯನ್ನು ನೋಡಿದ ಹೆಂಡತಿ-ಮಗಳು ಸಹ ದುಷ್ಟರ ಬುಲೆಟ್​ಗೆ ಪ್ರಾಣ ಬಿಡುತ್ತಾರೆ. ಕೊಲೆ ಯಾರು ಮಾಡಿರಬಹುದು ಎಂಬ ಒಂದೇ ಒಂದು ಸಣ್ಣ ಕುರುಹು ಸಹ ಪೊಲೀಸ್ ಇಲಾಖೆಗೆ ಸಿಗುವುದಿಲ್ಲ. ಇನ್ನೇನು ಆ ಕೇಸ್ ಕ್ಲೋಸ್ ಮಾಡಬೇಕು ಎನ್ನುವಷ್ಟರಲ್ಲಿ, ಕಮಿಷನರ್​ಗೆ ಇನ್​ಸ್ಪೆಕ್ಟರ್ ವಿಕ್ರಂ ನೆನಪಾಗುತ್ತಾನೆ.

    ಬಹುಶಃ ವಿಕ್ರಂಗೆ ಈ ಕೇಸ್ ಕೊಡದಿದ್ದರೆ, ಆತ ಜಾಲಿಯಾಗಿ ಹಾಡುತ್ತಾ, ದುಷ್ಟರನ್ನು ಮಟ್ಟ ಹಾಕುತ್ತಾ, ನಾಯಕಿಗೆ ಕಾಳು ಹಾಕುವುದನ್ನು ಮುಂದುವರೆಸಿರುತ್ತಿದ್ದನೇನೋ? ಅಷ್ಟರಲ್ಲಿ ಈ ಕಠಿಣವಾದ ಕೇಸ್ ಅವನಿಗೆ ಒಪ್ಪಿಸಲಾಗುತ್ತದೆ. ಅಲ್ಲಿಂದ ಚಿತ್ರಕ್ಕೊಂದು ಟ್ವಿಸ್ಟ್ ಸಿಕ್ಕಿ, ಗಂಭೀರವಾಗುತ್ತಾ ಹೋಗುತ್ತದೆ. ವಿಕ್ರಮ್ ಆ ಕೇಸ್ ಬಗೆಹರಿಸುತ್ತಾನೆ ಎನ್ನುವುದು ಗೊತ್ತೇ ಇದೆ. ಆದರೆ, ಹೇಗೆ? ಅದನ್ನು ಚಿತ್ರಮಂದಿರದಲ್ಲೇ ನೋಡಬೇಕು.

    ‘ಇನ್​ಸ್ಪೆಕ್ಟರ್ ವಿಕ್ರಂ’ ಚಿತ್ರವನ್ನು ಬರೆದು-ನಿರ್ದೇಶಿಸಿರುವುದು ನರಸಿಂಹ. ಚಿತ್ರಮಂದಿರಕ್ಕೆ ಬಂದ ಜನರನ್ನು ಮನರಂಜಿಸಿ, ಖುಷಿಯಿಂದ ಕಳಿಸಬೇಕು ಎಂಬುದು ಅವರ ಸ್ಪಷ್ಟ ಉದ್ದೇಶ. ಅದಕ್ಕೆ ಏನೆಲ್ಲ ಬೇಕೋ, ಅವೆಲ್ಲವನ್ನೂ ಚೆನ್ನಾಗಿ ಪೋಣಿಸಿ ಅವರು ಚಿತ್ರ ಮಾಡಿದ್ದಾರೆ. ಇಲ್ಲಿ ಹಾಡಿದೆ, ಫೈಟಿದೆ, ಸಸ್ಪೆನ್ಸ್ ಇದೆ, ಪಂಚಿಂಗ್ ಸಂಭಾಷಣೆಗಳಿವೆ, ಜತೆಗೆ ಸಂದೇಶಗಳೂ ಇವೆ. ಹಾಗೆ ನೋಡಿದರೆ, ಮೊದಲಾರ್ಧ ಹಾಡು, ಫೈಟು, ಪಂಚಿಂಗ್ ಡೈಲಾಗ್​ಗಳೇ ಹೆಚ್ಚು. ಬರೀ ಇಷ್ಟೆನಾ, ಇನ್ನೇನು ಇಲ್ಲವಾ ಎಂಬ ಪ್ರಶ್ನೆ ಪ್ರೇಕ್ಷಕರಿಗೆ ಬರುವಷ್ಟರಲ್ಲಿ ದ್ವಿತೀಯಾರ್ಧದಲ್ಲಿ ಅವರು ಮತ್ತೆ ಚಿತ್ರವನ್ನು ಹಾದಿಗೆ ತರುತ್ತಾರೆ. ಚಿತ್ರದ ಆರಂಭದಲ್ಲಿನ ಮರ್ಡರ್ ಕೇಸಿಗೆ, ದ್ವಿತೀಯಾರ್ಧದಲ್ಲಿ ತನಿಖೆ ಪ್ರಾರಂಭಿಸುತ್ತಾರೆ. ಅಲ್ಲಿಯವರೆಗೂ ಆಟಾಡಿಕೊಂಡಿದ್ದ ವಿಕ್ರಂ ಅಷ್ಟೇ ಅಲ್ಲ, ಪ್ರೇಕ್ಷಕರನ್ನೂ ಕೊಲೆ ಕೇಸ್​ನಲ್ಲಿ ತಲ್ಲೀನಗೊಳಿಸುತ್ತಾರೆ.

    ಚಿತ್ರವನ್ನು ನೋಡಿಸಿಕೊಂಡು ಹೋಗುವಲ್ಲಿ ನರಸಿಂಹ ಜತೆಗೆ ಹಲವರು ಕೈಜೋಡಿಸಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣದಲ್ಲಿ ಪ್ರತಿ ಫ್ರೇಮ್ ಸಹ ವರ್ಣಮಯ. ಅನೂಪ್ ಸೀಳಿನ್ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಪ್ರಜ್ವಲ್ ಲವಲವಿಕೆಯ ಅಭಿನಯ, ಗುರು ಸಂಭಾಷಣೆಗಳು ಎಲ್ಲವೂ ಸೇರಿಕೊಂಡು ಚಿತ್ರ ನೋಡುವಂತಾಗಿದೆ. ಭಾವನಾ, ಧರ್ಮಣ್ಣ, ಅವಿನಾಶ್, ರಘು ಮುಖರ್ಜಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅತಿಥಿ ಪಾತ್ರದಲ್ಲಿ ಬರುವ ದರ್ಶನ್ ಒಮ್ಮೆ ಸಂದೇಶ ಹೇಳಿ, ಇನ್ನೊಮ್ಮೆ ಭರ್ಜರಿಯಾಗಿ ಹೊಡೆದಾಡಿ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಮೊದಲೇ ಹೇಳಿದಂತೆ, ‘ಇನ್​ಸ್ಪೆಕ್ಟರ್ ವಿಕ್ರಂ’ ಒಂದು ಮನರಂಜನಾತ್ಮಕ ಚಿತ್ರ. ಹಲವು ಜಂಜಡಗಳ ಮಧ್ಯೆ ತಲೆ ಹಗುರಾಗಿಸಿಕೊಳ್ಳಬೇಕು ಎನ್ನುವವರು ಖುಷಿಯಿಂದ ಚಿತ್ರವನ್ನು ನೋಡಬಹುದು.

    ಚಿತ್ರ: ಇನ್​ಸ್ಪೆಕ್ಟರ್ ವಿಕ್ರಂ

    ನಿರ್ಮಾಣ: ವಿಖ್ಯಾತ್

    ನಿರ್ದೇಶನ: ನರಸಿಂಹ

    ತಾರಾಗಣ: ಪ್ರಜ್ವಲ್ ದೇವರಾಜ್, ಭಾವನಾ ಮೆನನ್, ದರ್ಶನ್, ಧರ್ಮಣ್ಣ, ರಘು ಮುಖರ್ಜಿ ಮುಂತಾದವರು

    ಮನೆಗೆ ಬಂದ ಮಹಾಲಕ್ಷ್ಮೀ… ಕಳೆದ 30 ವರ್ಷ ಎಲ್ಲಿದ್ದರು? ನಟಿ ಬಾಯ್ಬಿಟ್ಟ ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ

    ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts