More

    ಈ ಕೀಟ ಕಚ್ಚಿದ್ರೆ ಸ್ಥಳದಲ್ಲೇ ಸಾಯ್ತಾರಾ? ವೈರಲ್​ ಫೋಟೋದಲ್ಲಿರುವ ಕೀಟದ ಅಸಲಿ ಸಂಗತಿ ಇಲ್ಲಿದೆ…

    ಕಲಬುರಗಿ: ಇಂದಿನ ಸಾಮಾಜಿಕ ಜಾಲತಾಣ ಯುಗದಲ್ಲಿ ಸುದ್ದಿಗಳಿಗೇನು ಕೊರತೆ ಇಲ್ಲ. ಸಾವಿರಾರು ಸುದ್ದಿಗಳು ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಆದರೆ, ಸುದ್ದಿಯ ಅಧಿಕೃತತೆ ಬಗ್ಗೆ ತುಂಬಾ ಎಚ್ಚರದಿಂದ ಇರಬೇಕಿದೆ. ಏಕೆಂದರೆ, ಪ್ರತಿದಿನ ಸಾಕಷ್ಟು ಸುಳ್ಳು ಸುದ್ದಿಗಳು, ವದಂತಿಗಳು ಹರಡುತ್ತಲೇ ಇರುತ್ತವೆ. ಓದುಗರು ಸುದ್ದಿಯ ಸತ್ಯಶೋಧನೆ ಮಾಡಬೇಕು. ಇಲ್ಲವಾದಲ್ಲಿ ವದಂತಿಗಳು ಕಾಡ್ಗಿಚ್ಚಿನಂತೆ ಹರಡುತ್ತದೆ.

    ಇದೀಗ ಕಲಬುರಗಿಯಲ್ಲಿ ಸಾವಿನ ಕೀಟದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕಳೆದ ಮೂರು ದಿನಗಳಿಂದ ಕಲಬುರಗಿಯಲ್ಲಿ ನಿರಂತರ ಮಳೆಯಾದ ಹಿನ್ನಲೆಯಲ್ಲಿ ರೈತರು ಕಂಗಾಲಾಗಿದ್ದು, ಜನರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಚಿಂಚೋಳಿ ತಾಲ್ಲೂಕಿನಾದ್ಯಂತ ಸಾವಿನ ಕೀಟದ್ದೆ ಚರ್ಚೆಯಾಗುತ್ತಿದೆ.

    ಇದನ್ನೂ ಓದಿ: ಬಸ್‌ನಲ್ಲಿಯೇ ಹೃದಯಾಘಾತದಿಂದ ಕುಸಿದ ಬಿದ್ದ ಪ್ರಯಾಣಿಕ; ಚಾಲಕ, ನಿರ್ವಾಹಕಿ ಮಾಡಿದ್ದೇನು?

    ನೀವು ಮೇಲೆ ನೋಡುತ್ತಿರುವ ಕೀಟ ಕಚ್ಚಿದರೆ ಸ್ಥಳದಲ್ಲೇ ಸಾಯುತ್ತಿರಿ, ಹುಷಾರಾಗಿರಿ ಎಂಬ ಧ್ವನಿ ಸಂದೇಶ ಸಾಮಾಜಿಕ ಜಾಲತಾಣ ಮತ್ತು ವಾಟ್ಸ್​ಆ್ಯಪ್​ಗಳಲ್ಲಿ ಹರಿದಾಡುತ್ತಿದೆ. ಕೀಟದ ಪೋಟೋ ಜತೆಗೆ ಇಬ್ಬರು ಯುವಕರು ಸಾವನ್ನಪ್ಪಿರುವ ಪೋಟೋ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಕೀಟದ ಬಗ್ಗೆ ಹರಿದಾಡುತ್ತಿರುವು ಸುದ್ದಿ ಕೇಳಿ ಜನರು ಭಯಭೀತರಾಗಿದ್ದು, ಹೊಲ ಗದ್ದೆಗಳಿಗೆ ತೆರಳಲು ರೈತರು ಭಯ ಪಡುವಂತಾಗಿದೆ.

    ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿರುವ ಹಸಿರು ಬಣ್ಣದ ಕೀಟದ ಹೆಸರು ಕ್ಯಾಟರ್ ಪಿಲ್ಲರ್. ಈ ಸಸ್ಯ ಯಾವುದೇ ಕೀಟ ಅಥವಾ ಪ್ರಾಣಿಗಾಗಲಿ ಹಾನಿ ಮಾಡುವುದಿಲ್ಲ. ಇದು ಕಚ್ಚಿದರೆ ಸಾವು ಸಂಭವಿಸುವುದಿಲ್ಲ. ಹೀಗಾಗಿ ಯಾರೂ ಕೂಡ ಆತಂಕ ಪಡಬೇಡಿ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮಹಾರಾಜ ಟ್ರೋಫಿ ಹರಾಜು ಪ್ರಕ್ರಿಯೆ: ದಾಖಲೆ ಮೊತ್ತಕ್ಕೆ ಬಿಕರಿಯಾದ ಅಭಿನವ್​, ಮಯಾಂಕ್​!

    ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹಿನ್ನಲೆ: ಸಚಿವ ಬಿ. ನಾಗೇಂದ್ರ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts