More

    ಮಹಾರಾಜ ಟ್ರೋಫಿ ಹರಾಜು ಪ್ರಕ್ರಿಯೆ: ದಾಖಲೆ ಮೊತ್ತಕ್ಕೆ ಬಿಕರಿಯಾದ ಅಭಿನವ್​, ಮಯಾಂಕ್​!

    ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ನಿಂದ ಆಯೊಜನೆಗೊಂಡಿರುವ ಎರಡನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್​ಸಿಎ ಟಿ20ಯು ಮುಂದಿನ ತಿಂಗಳು ಆರಂಭವಾಗಲಿದೆ. ಅದಕ್ಕೂ ಮುನ್ನ ಇಂದು ಆಟಗಾರರ ಮೊದಲ ಹರಾಜು ಪ್ರಕ್ರಿಯೆ ನಡೆದಿದೆ. ಮಯಾಂಕ್​ ಅಗರ್ವಾಲ್​ ಮತ್ತು ಅಭಿನವ್​ ಮನೋಹರ್​ ದುಬಾರಿ ಆಟಗಾರರಾಗಿ ಹೊರ ಹೊಮ್ಮಿದ್ದಾರೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಜು.22) ಹರಾಜು ಪ್ರಕ್ರಿಯೆ ನಡೆಯಿತು. ಭಾರತ ತಂಡದ ಪರ ಹಾಗೂ ಐಪಿಎಲ್​ನಲ್ಲಿ ಆಡಿದ ಆಟಗಾರರು ಸೇರಿ ಸುಮಾರು 700ಕ್ಕೂ ಅಧಿಕ ಆಟಗಾರರು ಹರಾಜಿನಲ್ಲಿದ್ದಾರೆ. ಇಡೀ ಟೂರ್ನಿಯು ಒಂದೇ ಸ್ಥಳದಲ್ಲಿ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಗಸ್ಟ್​ 14ರಿಂದ ಆಗಸ್ಟ್​ 30ರವರೆಗೆ ನಡೆಯಲಿದೆ.

    ಇದನ್ನೂ ಓದಿ: ಮಹಿಳೆಯರ ಭದ್ರತೆ ಬಗ್ಗೆ ತಮ್ಮ ಸರ್ಕಾರದ ವಿರುದ್ಧವೇ ಟೀಕೆ: ಸತ್ಯ ಹೇಳಿದ್ದಕ್ಕೆ ನನ್ನನ್ನು ವಜಾ ಮಾಡಿದ್ದಾರೆಂದ ಸಚಿವ

    ಕರ್ನಾಟಕ ಕ್ರಿಕೆಟ್​ನ ಸ್ಟಾರ್​ ಆಟಗಾರರಾದ ಮಯಾಂಕ್​ ಅಗರ್ವಾಲ್, ದೇವದತ್​ ಪಡಿಕ್ಕಲ್​, ಮನೀಶ್​ ಪಾಂಡೆ, ವಿದ್ವತ್​ ಕಾವೇರಪ್ಪ ಮತ್ತು ವೈಶಾಕ್​ ವಿಜಯಕುಮಾರ್​ ಸೇರಿದಂತೆ ಅನೇಕ ಆಟಗಾರರು ಹರಾಜಿನಲ್ಲಿ ಬಿಕರಿಯಾಗಿದ್ದಾರೆ. ಕೆಟಗರಿ ಎ (ಮೂಲ ದರ 2 ಲಕ್ಷ ರೂ.), ಕೆಟಗರಿ ಬಿ (ಮೂಲ ದರ 1 ಲಕ್ಷ ರೂ.) ಹಾಗೂ ಕೆಟಗರಿ ಸಿ ಮತ್ತು ಡಿ ಆಧಾರದಲ್ಲಿ ಆರು ತಂಡಗಳು ಹರಾಜು ಕೂಗಿದವು.

    ಗುಲ್ಬರ್ಗ ಮೈಸ್ಟಿಕ್ಸ್​, ಮಂಗಳೂರು ಡ್ರ್ಯಾಗನ್ಸ್​, ಮೈಸೂರು ವಾರಿಯರ್ಸ್​, ಬೆಂಗಳೂರು ಬ್ಲ್ಯಾಸ್ಟರ್ಸ್​, ಹುಬ್ಬಳ್ಳಿ ಟೈಗರ್ಸ್​ ಮತ್ತು ಶಿವಮೊಗ್ಗ ಲಯನ್ಸ್​ ತಂಡಗಳು ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ.

    ಮಯಾಂಕ್​, ಅಭಿನವ್​ ದುಬಾರಿ

    ಪ್ರತಿ ತಂಡವು ರೂ 50 ಲಕ್ಷ ರೂ. ಹಣದೊಂದಿಗೆ ಹರಾಜು ಪ್ರಾರಂಭಿಸಿತು. ಕನಿಷ್ಠ 16 ಮತ್ತು ಗರಿಷ್ಠ 18 ಆಟಗಾರರನ್ನು ಪ್ರತಿ ತಂಡವು ಒಳಗೊಂಡಿರಬೇಕಿದೆ. ಹಾಗಾಗಿ, 2023ರ ಹರಾಜಿನಲ್ಲಿ ಕನಿಷ್ಠ 80 ಆಟಗಾರರು ಬಿಕರಿಯಾಗುವುದು ಗ್ಯಾರಂಟಿಯಾಗಿದೆ. ಬಿಕರಿಯಾಗಿರುವ ಆಟಗಾರರ ವಿಚಾರಕ್ಕೆ ಬರುವುದಾದರೆ ಅಭಿನವ್​ ಮನೋಹರ್​ 15 ಲಕ್ಷ ರೂ.ಗಳೊಂದಿಗೆ ಶಿವಮೊಗ್ಗ ತಂಡಕ್ಕೆ ಬಿಕರಿಯಾದರೆ, ಮಯಾಂಕ್​ ಅಗರ್ವಾಲ್​ 14 ಲಕ್ಷ ರೂ.ಗೆ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಈ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚಿನ ಮೊತ್ತಕ್ಕೆ ಬಿಕರಿಯಾದ ಆಟಗಾರರು ಎನಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಮೀನುಗಾರರ ಬಾಳಲ್ಲಿ ಭಾಗ್ಯದ ಬಾಗಿಲು ತೆರೆದ ಅಪರೂಪದ ಮೀನು: ಬೆಲೆ ಕೇಳಿದ್ರೆ ಹುಬ್ಬೇರಿಸ್ತೀರಾ!

    ಉಳಿದಂತೆ ಅಪ್ಪಣ್ಣ ಕೆಪಿ 4 ಲಕ್ಷಕ್ಕೆ ಗುಲ್ಬರ್ಗ, ಕರಿಯಪ್ಪ ಕೆಸಿ 7 ಲಕ್ಷಕ್ಕೆ ಹುಬ್ಬಳ್ಳಿ, ದೇವದತ್​ ಪಡಿಕಲ್​ 1.3 ಲಕ್ಷಕ್ಕೆ ಗುಲ್ಬರ್ಗ, ಗೌತಮ್​ ಕೆ 6.6 ಲಕ್ಷಕ್ಕೆ ಮಂಗಳೂರು ಡ್ರ್ಯಾಗನ್​, ಕರುಣ್​ ನಾಯರ್​ 6.8 ಲಕ್ಷಕ್ಕೆ ಬೆಂಗಳೂರು, ಮನೀಶ್​ ಪಾಂಡೆ 1 ಲಕ್ಷಕ್ಕೆ ಹುಬ್ಬಳ್ಳಿ, ಮಿಥುನ್​ ಎ, 5 ಲಕ್ಷಕ್ಕೆ ಬೆಂಗಳೂರು ಹಾಗೂ ವೈಶಾಕ್​ ವಿಜಯ್​ಕುಮಾರ್​ 8.8 ಲಕ್ಷಕ್ಕೆ ಗುಲ್ಬರ್ಗ ತಂಡಕ್ಕೆ ಬಿಕರಿಯಾಗಿದ್ದಾರೆ. (ಏಜೆನ್ಸೀಸ್​)

    Maharaja Trophy KSCA T20 Auction

    ಒಂದು ದಿನವೂ ಶಾಲೆಗೆ ರಜೆ ಹಾಕದೆ 50 ರಾಷ್ಟ್ರಗಳಿಗೆ ಭೇಟಿ: 10ರ ಬಾಲಕಿಯ ಪ್ರವಾಸ ಕತೆ ವೈರಲ್​

    ವಿದ್ಯಾರ್ಥಿಗಳಿಗೆ ‘ಹೆಬ್ಬುಲಿ’ ಹೇರ್ ಸ್ಟೈಲ್ ಮಾಡದಂತೆ ಸಲೂನ್ ಮಾಲೀಕರಿಗೆ ಪತ್ರ ಬರೆದ ಮುಖ್ಯೋಪಾಧ್ಯಾಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts