More

    ನೂತನವಾಗಿ ಸೇವೆಗೆ ಸೇರ್ಪಡೆಗೊಂಡ ಐಎಸಿ ವಿಕ್ರಾಂತ್‌ಗೆ ಬಲ ನೀಡುತ್ತಿದೆ ಜಿಇ ಎಲ್ಎಂ2500

    | ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
    ಭಾರತೀಯ ನೌಕಾಪಡೆಗೆ 2022ರ ಸೆಪ್ಟೆಂಬರ್ 2ರಂದು ಸೇರ್ಪಡೆಗೊಂಡ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್‌ಗೆ ನಾಲ್ಕು ಎಲ್ಎಂ2500 ಇಂಜಿನ್‌ಗಳು ಶಕ್ತಿ ನೀಡುತ್ತಿವೆ. ಇವುಗಳು ವಿಕ್ರಾಂತ್‌ಗೆ 88 ಮೆಗಾವ್ಯಾಟ್ ಸಾಮರ್ಥ್ಯ ಮತ್ತು 28 ನಾಟ್‌ಗಳ ಗರಿಷ್ಠ ವೇಗ ಒದಗಿಸುತ್ತಿದೆ. ಐಎನ್ಎಸ್ ವಿಕ್ರಾಂತ್ ಸೇವೆಗೆ ಸೇರ್ಪಡೆಗೊಂಡ ಬಳಿಕ ಭಾರತೀಯ ನೌಕಾಪಡೆಯ ಬಳಿ ಈಗ 18 ಜಿಇ ಮರೀನ್ ಇಂಜಿನ್‌ಗಳು ಚಾಲ್ತಿಯಲ್ಲಿವೆ. ಅದರೊಡನೆ, ಪ್ರಸ್ತುತ ನಿರ್ಮಾಣದಲ್ಲಿರುವ ಪ್ರಾಜೆಕ್ಟ್ 17ಎ ನೌಕೆಗಾಗಿ ಹೊಸ ಇಂಜಿನ್‌ಗಳು ಸಿದ್ಧವಾಗುತ್ತಿವೆ.

    ನೂತನವಾಗಿ ಸೇವೆಗೆ ಸೇರ್ಪಡೆಗೊಂಡ ಐಎಸಿ ವಿಕ್ರಾಂತ್‌ಗೆ ಬಲ ನೀಡುತ್ತಿದೆ ಜಿಇ ಎಲ್ಎಂ2500

    ಐಎಸಿ ಯೋಜನೆ 2007ರಲ್ಲಿ ಆರಂಭಗೊಂಡಿತು. ಇದಕ್ಕೆ ಇಂಜಿನ್ ಪೂರೈಸಲು ಆಯ್ಕೆಗೊಂಡಾಗ ಜಿಇ ಮರೀನ್ ತನ್ನ ಹೇಳಿಕೆಯಲ್ಲಿ ಎಲ್ಎಂ2500 ಮರೀನ್ ಗ್ಯಾಸ್ ಟರ್ಬೈನ್‌ಗಳು ಈ ನೌಕೆಗೆ ಶಕ್ತಿ ನೀಡಲಿವೆ ಮತ್ತು ಅವುಗಳನ್ನು ಭಾರತೀಯ ಸಹಯೋಗಿ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಲಿದೆ ಎಂದಿತ್ತು.

    “ಭಾರತೀಯ ನೌಕಾಪಡೆಯ ಐತಿಹಾಸಿಕ ದಿನವಾದ ಇಂದು, ಭಾರತ ತನ್ನ ಪ್ರಥಮ ದೇಶೀಯ ನಿರ್ಮಿತ ವಿಮಾನವಾಹಕ ನೌಕೆಯನ್ನು ಸೇವೆಗೆ ಸೇರ್ಪಡೆಗೊಳಿಸಿದೆ. ಈ ಸಂದರ್ಭದಲ್ಲಿ ಜಿಇ ಮರೀನ್ ನೌಕೆಯ ಇಂಜಿನ್‌ ಹಿಂದಿನ ಶಕ್ತಿಯಾಗಿದೆ ಎನ್ನಲು ಹೆಮ್ಮೆ ಪಡುತ್ತಿದೆ. ನಾವು ಭಾರತದ ಸ್ವದೇಶಿ ರಕ್ಷಣಾ ಉತ್ಪಾದನೆಗೆ ಸದಾ ಬೆಂಬಲವಾಗಿದ್ದೇವೆ” ಎಂದು ಜಿಇ ಮರೀನ್ ಸಂಸ್ಥೆಯ‌ ಉಪಾಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಕ್ರಿಸ್ ಶೆಫರ್ಡ್ ಹೇಳಿಕೆ ನೀಡಿದ್ದರು.

    ನೂತನವಾಗಿ ಸೇವೆಗೆ ಸೇರ್ಪಡೆಗೊಂಡ ಐಎಸಿ ವಿಕ್ರಾಂತ್‌ಗೆ ಬಲ ನೀಡುತ್ತಿದೆ ಜಿಇ ಎಲ್ಎಂ2500

    30 ವರ್ಷಕ್ಕೂ ಹೆಚ್ಚು ಕಾಲ ಎಚ್ಎಎಲ್ ಜೊತೆ ಜಿಇ ಕಾರ್ಯ ನಿರ್ವಹಿಸಿದೆ. ಎಚ್ಎಎಲ್ ಭಾರತೀಯ ನೌಕಾಪಡೆಗೆ ಬೇಕಾದ ಎಲ್ಎಂ2500 ಗ್ಯಾಸ್ ಟರ್ಬೈನ್‌ಗಳನ್ನು ಜೋಡಿಸಿ, ಪರಿಶೀಲಿಸಿ, ಪರೀಕ್ಷೆಗೊಳಪಡಿಸುತ್ತದೆ. ಎಲ್ಎಂ2500 ಗ್ಯಾಸ್ ಟರ್ಬೈನ್‌ಗಳನ್ನು ಜಿಇಯ ಇವೆಂಡೇಲ್ ಓಹಿಯೋ ಘಟಕದಲ್ಲಿ ನಿರ್ಮಿಸಲಾಗುತ್ತದೆ. ಅವುಗಳನ್ನು ಬೆಂಗಳೂರಿನಲ್ಲಿರುವ ಎಚ್ಎಎಲ್‌ನ ಇಂಡಸ್ಟ್ರಿಯಲ್ ಮತ್ತು ಮರೀನ್ ಗ್ಯಾಸ್ ಟರ್ಬೈನ್ ವಿಭಾಗದಲ್ಲಿ ಜೋಡಿಸಿ ಪರೀಕ್ಷಿಸಲಾಗುತ್ತದೆ. ಎಚ್ಎಎಲ್ ಜಗತ್ತಿನ ಪ್ರಮುಖ ಏರೋಸ್ಪೇಸ್ ಕಂಪನಿಯಾಗಿದ್ದು, ಏರ್‌ಕ್ರಾಫ್ಟ್, ಹೆಲಿಕಾಪ್ಟರ್, ಏವಿಯಾನಿಕ್ಸ್ ಹಾಗೂ ಏರೋಸ್ಪೇಸ್ ರಕ್ಷಣಾ ಉಪಕರಣಗಳ ನಿರ್ಮಾಣ, ನಿರ್ವಹಣೆ ನಡೆಸುತ್ತದೆ.

    ನೂತನವಾಗಿ ಸೇವೆಗೆ ಸೇರ್ಪಡೆಗೊಂಡ ಐಎಸಿ ವಿಕ್ರಾಂತ್‌ಗೆ ಬಲ ನೀಡುತ್ತಿದೆ ಜಿಇ ಎಲ್ಎಂ2500

    ಜಗತ್ತಿನ ಅತ್ಯಂತ ಪ್ರಬಲ, ಮಾರುಕಟ್ಟೆಯನ್ನು ಆಳುತ್ತಿರುವ ಜಿಇ ಗ್ಯಾಸ್ ಟರ್ಬೈನ್ ಭಾರತೀಯ ನೌಕಾಪಡೆ ಮತ್ತು ಜಗತ್ತಿನ 39 ಇತರ ನೌಕಾಪಡೆಗಳಿಗೆ ಜಗತ್ತಿನಾದ್ಯಂತ ಸೇವೆ ಒದಗಿಸುತ್ತದೆ. ದಡದ ಮೇಲಾಗಲಿ ಅಥವಾ ಸಮುದ್ರದಲ್ಲಾಗಲಿ, ಜಿಇ ಸೇವೆಯನ್ನು ಒದಗಿಸುತ್ತದೆ. ಅದರೊಡನೆ ಇತರ ಮಿತ್ರ ನೌಕಾಪಡೆಗಳ ಜೊತೆ ಪರಸ್ಪರ ಸಹಕಾರವೂ ಲಭ್ಯವಾಗುತ್ತದೆ. ಜಿಇ ಜಗತ್ತಿನಾದ್ಯಂತ ಇರುವ 633 ನೌಕಾಪಡೆಯ ನೌಕೆಗಳಿಗೆ ಗ್ಯಾಸ್ ಟರ್ಬೈನ್ ಒದಗಿಸಿದ್ದು, ಯುಎಸ್ ನೌಕಾಪಡೆಯ 95% ನೌಕೆಗಳಿಗೆ ಇಂಜಿನ್ ಒದಗಿಸಿದೆ. ಜಿಇಯ ಎಲ್ಎಂ2500 ಸದಾ ಸಮರ ಸನ್ನದ್ಧವಾಗಿರುವ ಟ್ರ್ಯಾಕ್ ರೆಕಾರ್ಡ್ ಮತ್ತು ಅದರ ಸುಲಭವಾದ ನಿರ್ವಹಣೆ, ಜಾಗತಿಕ ಸೇವೆಯಿಂದಾಗಿ ಎಲ್ಎಂ2500 ಜಗತ್ತಿನ ನೌಕಾಪಡೆಗಳ ಪ್ರಮುಖ ಆಯ್ಕೆಯಾಗಿದೆ.

    ನೂತನವಾಗಿ ಸೇವೆಗೆ ಸೇರ್ಪಡೆಗೊಂಡ ಐಎಸಿ ವಿಕ್ರಾಂತ್‌ಗೆ ಬಲ ನೀಡುತ್ತಿದೆ ಜಿಇ ಎಲ್ಎಂ2500

    ಜಿಇ ಮರೀನ್‌ನ ಗ್ಯಾಸ್ ಟರ್ಬೈನ್ ವ್ಯವಹಾರ ಅದರ ಜಿವಿ ಏವಿಯೇಷನ್‌ನ ಭಾಗವೇ ಆಗಿದೆ. ಅದರ ಪ್ರಧಾನ ಕಚೇರಿ ಸಿನ್ಸಿನಾಟಿ, ಓಹಿಯೋದಲ್ಲಿದೆ. ಜಿಇ ಜಗತ್ತಿನ ಪ್ರಮುಖ ಮರೀನ್ ಪ್ರೊಪಲ್ಷನ್ ಉತ್ಪನ್ನಗಳು, ಸಿಸ್ಟಮ್‌ಗಳು ಮತ್ತು ಸಲ್ಯುಷನ್‌ಗಳ ಪ್ರಮುಖ ಉತ್ಪಾದಕನಾಗಿದ್ದು, ಇದರಲ್ಲಿ 6,100 ರಿಂದ 70,656 ಶಾಫ್ಟ್ ಹಾರ್ಸ್ ಪವರ್ / 4.6 ರಿಂದ 52.7 ಮೆಗಾವ್ಯಾಟ್ ಸಾಮರ್ಥ್ಯದ ಗ್ಯಾಸ್ ಟರ್ಬೈನ್‌ಗಳೂ ಸೇರಿವೆ.

    ಚಿನ್ನದ ವ್ಯಾಮೋಹಕ್ಕೆ ಭೂಮಿ ಹೋಯ್ತು! 20 ಲಕ್ಷ ರೂಪಾಯಿಗೆ 8 ಕೆಜಿ ಚಿನ್ನದ ಆಮಿಷ… ಸಂಕಷ್ಟದಲ್ಲಿ ದಂಪತಿ…

    ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ವೃದ್ಧನ ಮನೆ ಬಾಗಿಲಿಗೇ ತೆರಳಿ ದೂರು ಸ್ವೀಕರಿಸಿದ ನ್ಯಾಯಾಧೀಶರು! ತುಮಕೂರಲ್ಲಿ ಅಪರೂಪದ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts