More

    ಚಿನ್ನದ ವ್ಯಾಮೋಹಕ್ಕೆ ಭೂಮಿ ಹೋಯ್ತು! 20 ಲಕ್ಷ ರೂಪಾಯಿಗೆ 8 ಕೆಜಿ ಚಿನ್ನದ ಆಮಿಷ… ಸಂಕಷ್ಟದಲ್ಲಿ ದಂಪತಿ…

    ಶಿವಮೊಗ್ಗ: ಕೇವಲ 20 ಲಕ್ಷ ರೂಪಾಯಿಗೆ ಬರೋಬ್ಬರಿ 8 ಕೆಜಿ ಚಿನ್ನದ ನಾಣ್ಯ ಕೊಟ್ರೆ ಯಾರಿಗೆ ಬೇಡ? ಎಲ್ಲರೂ ಬೇಕು ಅನ್ನೋದು ಸಹಜ. ಆದರೆ ಇದು ಸಾಧ್ಯವಾ? ಎಂದು ಯೋಚನೆಯನ್ನೂ ಮಾಡದೆ ಚಿನ್ನಕ್ಕೆ ಆಸೆಪಟ್ಟ ದಂಪತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬದುಕಿಗೆ ಆಸರೆಯಾಗಿದ್ದ ಜಮೀನನ್ನೂ ಮಾರಾಟ ಮಾಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ಚಿನ್ನವೂ ಇಲ್ಲದೆ, ಅತ್ತ ಹಣವೂ ಇಲ್ಲದೆ ಕಂಗಾಲಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಮಹಾಲಿಂಗಾಪುರದ ದಂಪತಿ ವಂಚನೆಗೆ ಒಳಗಾದವರು. ಹೊಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಆ.24ರಂದು ಪ್ರಕರಣ ನಡೆದಿದ್ದು, ತಡವಾಗಿ ದೂರು ದಾಖಲಾಗಿದೆ.

    ಮಹಾಲಿಂಗಾಪುರದ ವ್ಯಕ್ತಿಯೊಬ್ಬರು ಸ್ನೇಹಿತರ ಜತೆ ಪ್ರವಾಸಕ್ಕೆ ತೆರಳಿದಾಗ ವಂಚಕನ ಪರಿಚಯವಾಗಿತ್ತು. ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಮಹಾಲಿಂಗಾಪುರದ ವ್ಯಕ್ತಿಗೆ ಕರೆ ಮಾಡಿದ ವಂಚಕ, ನನ್ನ ಅಜ್ಜಿಗೆ 8 ಕೆಜಿ ಚಿನ್ನದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಮಾರಾಟ ಮಾಡುವುವೆ ಎಂದಿದ್ದ. ಅಷ್ಟೇ ಅಲ್ಲ, ನಿಮಗಾದರೆ ಕಡಿಮೆ ಬೆಲೆಗೆ ಕೊಡುತ್ತೇನೆ ಎಂದೂ ಪುಸಲಾಯಿಸಿದ್ದ. ವಂಚಕನ ಮಾತು ನಂಬಿದ ಮಹಾಲಿಂಗಾಪುರದ ವ್ಯಕ್ತಿ, ತನ್ನ ಪತ್ನಿ ಬಳಿ ಹೇಳಿದ್ದ. ದಂಪತಿ ಇಬ್ಬರೂ ತಾವೇ ಚಿನ್ನ ಪಡೆಯುವ ಬಗ್ಗೆ ಯೋಚಿಸಿದ್ದರು.
    ಅಷ್ಟರಲ್ಲಿ ಮತ್ತೆ ಮಾತಿಗೆ ಸಿಕ್ಕ ವಂಚಕ, ನಿಮಗಾದರೆ ಕೇವಲ 20 ಲಕ್ಷ ರೂ.ಗೆ ಎಲ್ಲ ಚಿನ್ನವನ್ನೂ ಕೊಡುವೆ ಎಂದು ನಂಬಿಸಿದ್ದ. ನಯವಂಚಕನ ಮಾತಿಗೆ ಮರುಳಾದ ದಂಪತಿ, ಆ.15ರಂದು ಹೊಳೆಹೊನ್ನೂರು ಠಾಣಾ ವ್ಯಾಪ್ತಿಗೆ ಬಂದಿದ್ದರು. ಎರಡು ಚಿನ್ನದ ನಾಣ್ಯಗಳನ್ನು ಕೊಟ್ಟು ಚಿನ್ನದ ಅಸಲಿತನ ಪರೀಕ್ಷೆ ಮಾಡಿಕೊಳ್ಳಿ ಎಂದು ತಿಳಿಸಿದ್ದ. ದಂಪತಿ ಚಿನ್ನಾಭರಣ ಮಳಿಗೆಗೆ ಹೋಗಿ ಪರೀಕ್ಷಿಸಿದಾಗ ಅವು ಅಸಲಿ ನಾಣ್ಯಗಳಾಗಿದ್ದವು.

    ಹಾಗಾಗಿ ಹೇಗಾದರೂ ಮಾಡಿ ಚಿನ್ನದ ನಾಣ್ಯಗಳನ್ನು ಖರೀದಿಸಬೇಕೆಂದು ಮಹಾಲಿಂಗಾಪುರದಲ್ಲಿದ್ದ ಜಮೀನನ್ನೂ ಮಾರಾಟ ಮಾಡಿ ಆ.24ರಂದು ದಂಪತಿ 20 ಲಕ್ಷ ರೂ.ನೊಂದಿಗೆ ಮತ್ತೆ ವಂಚಕ ಹೇಳಿದ್ದ ಜಾಗಕ್ಕೆ ಹಾಜರಾಗಿದ್ದರು. ಈ ವಂಚಕನೊಂದಿಗೆ ಮತ್ತೊಬ್ಬ ಕೈಜೋಡಿಸಿದ್ದು, ಇಬ್ಬರೂ ನಾಲ್ಕೈದು ನಕಲಿ ನಾಣ್ಯಗಳನ್ನು ದಂಪತಿಗೆ ಕೊಟ್ಟು ಹಣ ಪಡೆದಿದ್ದಾರೆ.

    ಉಳಿದ ನಾಣ್ಯಗಳನ್ನು ತರುತ್ತೇವೆ. ಅಲ್ಲಿವರೆಗೂ ಇಲ್ಲಿಯೇ ಇರಿ ಎಂದು ಹೇಳಿದ್ದರು. ವಂಚಕರು ಬಹಳ ಹೊತ್ತಾದರೂ ಮರಳದ ಹಿನ್ನಲೆಯಲ್ಲಿ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಸ್ವಿಚ್ಡ್​ ಆಫ್ ಆಗಿತ್ತು. ಆಗ ದಂಪತಿಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿದೆ. ಈ ಬಗ್ಗೆ ತಡವಾಗಿ ಅಂದರೆ ನವೆಂಬರ್ ಮೊದಲ ವಾರದಲ್ಲಿ ಹೊಳೆಹೊನ್ನೂರು ಠಾಣೆಗೆ ಮರಳಿ ದೂರು ನೀಡಿದ್ದಾರೆ.

    ದೇವರಿಗೆ ಹರಕೆ ತೀರಿಸಿ ಮನೆಗೆ ತೆರಳುತ್ತಿದ್ದ ಮೂವರು ಮಾರ್ಗಮಧ್ಯೆ ದುರ್ಮರಣ! ಕಲಬುರಗಿಯಲ್ಲಿ ದುರಂತ

    ಅನ್ಯಕೋಮಿನ ಯುವಕನ ಜತೆ ಪ್ರೀತಿ; ಮಗಳನ್ನೇ ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಿದ ತಂದೆ!

    ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದ ವೃದ್ಧನ ಮನೆ ಬಾಗಿಲಿಗೇ ತೆರಳಿ ದೂರು ಸ್ವೀಕರಿಸಿದ ನ್ಯಾಯಾಧೀಶರು! ತುಮಕೂರಲ್ಲಿ ಅಪರೂಪದ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts