More

    ಎಚ್‌ಎಎಲ್: 2023-24ರಲ್ಲಿ 29,810 ಕೋಟಿ ರೂ. ಆದಾಯ

    ಬೆಂಗಳೂರು: ದೇಶದ ರಕ್ಷಣಾ ವಲಯದ ಪ್ರಮುಖ ಪಿಎಸ್‌ಯು ಆಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) 2023-24ನೇ ಸಾಲಿನಲ್ಲಿ 29,810 ಕೋಟಿ ರೂ. ಆದಾಯ ಗಳಿಸಿದೆ.

    ಕಳೆದ ಮಾ.31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಶೇ.11ರ ಎರಡಂಕಿ ಬೆಳವಣಿಗೆ ದರವನ್ನು ದಾಖಲಿಸಿದೆ. ಹಿಂದಿನ ಸಾಲಿನಲ್ಲಿ ಶೇ.9ರ ವೃದ್ಧಿ ದರದೊಂದಿಗೆ 26,928 ಕೋಟಿ ರೂ. ಆದಾಯವನ್ನು ಗಳಿಸಿತ್ತು. ಹಿಂದಿನ ಸಾಲಿಗೆ ಹೋಲಿಸಿದರೆ ಹೆಚ್ಚುವರಿಯಾಗಿ 2,882 ಕೋಟಿ ರೂ. ಆದಾಯದವನ್ನು ಸಂಸ್ಥೆಯು ಗಳಿಸಿದೆ.

    2023-24ರ ಅವಧಿಯಲ್ಲಿ ಸಂಸ್ಥೆಯು 19 ಸಾವಿರ ಕೋಟಿ ರೂ. ಮೊತ್ತದ ಹೊಸದಾಗಿ ಉತ್ಪಾದನಾ ಆರ್ಡರ್ ಪಡೆದಿದೆ. ಇದಲ್ಲದೆ 16 ಸಾವಿರ ಕೋಟಿ ರೂ. ಆರ್‌ಒಎಚ್ ಒಪ್ಪಂದ ಏರ್ಪಟ್ಟಿದೆ. ಪ್ರಸ್ತುತ ಕಂಪನಿಯು 94 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆರ್ಡರ್ ಹೊಂದಿದ್ದು, ಈ ಸಾಲಿನಲ್ಲೂ ಹೊಸ ಆರ್ಡರ್ ಸಿಗುವ ವಿಶ್ವಾಸ ಇದೆ ಎಂದು ಸಂಸ್ಥೆಯ ಚೇರ್‌ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್ ತಿಳಿಸಿದ್ದಾರೆ.

    ಗಯಾನಾ ರಕ್ಷಣಾ ಪಡೆಗೆ ‘ಹಿಂದೂಸ್ತಾನ್-228’ ಮಾದರಿಯ ಎರಡು ಯುದ್ಧವಿಮಾನ ಪೂರೈಸಲು ಮಾಡಿಕೊಂಡಿದ್ದ ಒಪ್ಪಂದದನ್ವಯ ಅವಧಿಗೆ ಮುನ್ನವೇ ಹಸ್ತಾಂತರಿಸಲಾಗಿದೆ. ಮಹತಾಕ್ವಾಂಕ್ಷಿ ದೇಶಿ ನಿರ್ಮಿತ ಎಲ್‌ಸಿಎ ಎಂಕೆ1ಎ ಸರಣಿಯ ಫೈಟರ್ ಯುದ್ಧವಿಮಾನದ ಮೊದಲ ಉತ್ಪಾದನಾ ಏರ್‌ಕ್ರ್‌ಟಾಅನ್ನು ಮಾ.28ರಂದು ಯಶಸ್ವಿ ಹಾರಾಟವನ್ನು ಪೂರೈಸಿ ಹೊಸ ಮೈಲಿಗಲ್ಲು ಸಾಧಿಸಲಾಗಿದೆ ಎಂದಿದ್ದಾರೆ.

    ತಂತ್ರಜ್ಞಾನ ವರ್ಗಾವಣೆಗೆ ಒಡಂಬಡಿಕೆ:

    ಬಹುನಿರೀಕ್ಷಿತ ಎಲ್‌ಸಿಎ ಎಂಕೆ2 ಯುದ್ಧವಿಮಾನವನ್ನು ಭಾರತದಲ್ಲೇ ತಯಾರಿಸಲು ನಮ್ಮ ಸಂಸ್ಥೆಯು ಅಮೆರಿಕದ ಜನರಲ್ ಇಲೆಕ್ಟ್ರಿಕ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರನ್ವಯ ಈ ಏರ್‌ಕ್ರಾಫ್ಟ್​​ ಜಿ-414 ಏರೋ ಇಂಜಿನ್ ಹಾಗೂ ತಂತ್ರಜ್ಞಾನ ವರ್ಗಾವಣೆ ಸಹಯೋಗ ಪಡೆಯಲಾಗುತ್ತದೆ. ಇದರಿಂದಾಗಿ ಭಾರತೀಯ ಏರೋ ಇಂಜಿನ್ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಸ್ವಾವಲಂಬನೆ ಹೊಂದಲು ಜನರಲ್ ಇಲೆಕ್ಟ್ರಿಕ್ ಕಂಪನಿಯಿಂದ ಶೇ.80 ತಂತ್ರಜ್ಞಾನ ವರ್ಗಾವಣೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಸಿಎಂಡಿ ಅನಂತಕೃಷ್ಣನ್ ವಿವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts