More

    ಚೆನ್ನೈಗೆ ಬಂದರು ಬ್ಯಾಟ್‌ಮ್ಯಾನ್, ಸ್ಪೈಡರ್‌ಮ್ಯಾನ್!

    ಚೆನ್ನೈ: ತಮಿಳುನಾಡಿನ ರಾಜಧಾನಿಯಲ್ಲಿ ಕರೊನಾ ಹಾವಳಿ ವಿಪರೀತವಾಗಿದೆ. ಆದರೂ ಜನರು ಸರ್ಕಾರ ಸೂಚಿಸಿದ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಜನರಿಗೆ ಮಾಸ್ಕ್ ಧರಿಸುವಂತೆ ಮನವೊಲಿಸಲು ಸರ್ಕಾರ ಸ್ಪೈಡರ್ ಮ್ಯಾನ್ ಮತ್ತು ಬ್ಯಾಟ್ ಮ್ಯಾನ್‌ಗಳ ಮೊರೆ ಹೋಗಿದೆ!

    ಇದನ್ನೂ ಓದಿ: ರೋಗದ ವಿರುದ್ಧ ಹೋರಾಟದಲ್ಲಿ ಭಾರತ ಮುಂದಿದೆ: ಪಿಎಂ

    ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರದ ವತಿಯಿಂದ ಸ್ಪೈಡರ್‌ಮ್ಯಾನ್ ಮತ್ತು ಬ್ಯಾಟ್‌ಮ್ಯಾನ್ ಶನಿವಾರ ಚೆನ್ನೈನ ತಿರು ವಿಕಾ ನಗರದಲ್ಲಿ ಕಾಣಿಸಿಕೊಂಡರು. ‘ವೇರ್ ಎ ಮಾಸ್ಕ್, ಬಿ ಎ ಸೂಪರ್ ಹೀರೋ’ ಎಂಬ ಧ್ಯೇಯವಾಕ್ಯದೊಂದಿಗೆ ತಮಿಳುನಾಡು ಸರ್ಕಾರ ಈ ಅಭಿಯಾನ ನಡೆಸುತ್ತಿದೆ.

    ಇದನ್ನೂ ಓದಿ: ಹೋಮ್ ಕ್ವಾರಂಟೈನ್‌ನವರ ಕೈಗೆ ಬರಲಿದೆ ‘ಸ್ಮಾರ್ಟ್ ರಿಸ್ಟ್ ಬ್ಯಾಂಡ್’!

    ಮಾಸ್ಕ್ ಧರಿಸುವುದು ಎಷ್ಟು ಮುಖ್ಯ, ಅದರಿಂದ ನಿಮ್ಮ ಜೀವ ಮಾತ್ರವಲ್ಲ, ನಿಮ್ಮ ಸಮೀಪದವರ ಜೀವಗಳನ್ನೂ ಉಳಿಸಬಹುದು ಎಂದು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಸ್ಪೈಡರ್‌ಮ್ಯಾನ್ ಮತ್ತು ಬ್ಯಾಟ್‌ಮ್ಯಾನ್ ವೇಷ ಧರಿಸಿದ್ದ ಇಬ್ಬರು ಯುವಕರು ಗಮನ ಸೆಳೆದರು.

    ಸೋಂಕಿತರ ಸಂಖ್ಯೆ 5 ಲಕ್ಷ ದಾಟಿದರೂ ಭಯ ಬೇಡ: ಆರೋಗ್ಯ ಸಚಿವರಿಂದ ಒಂದು ಗುಡ್​ನ್ಯೂಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts