More

    ನಾಲ್ಕನೇ ತ್ರೈಮಾಸಿಕದಲ್ಲಿ ಇನ್ಫೊಸಿಸ್​ನ ನಿವ್ವಳ ಲಾಭದಲ್ಲಿ ಸ್ವಲ್ಪ ಇಳಿಕೆ, ಆದಾಯದಲ್ಲಿ ಸ್ವಲ್ಪ ಏರಿಕೆ

    ಬೆಂಗಳೂರು: ಐಟಿ ದಿಗ್ಗಜ ಇನ್ಫೊಸಿಸ್​ ಜನವರಿಯಿಂದ ಮಾರ್ಚ್​ವರೆಗಿನ ನಾಲ್ಕನೇ ತ್ರೈಮಾಸಿಕದ ಲೆಕ್ಕಪತ್ರವನ್ನು ಬಿಡುಗಡೆ ಮಾಡಿದ್ದು, ಅದರ ನಿವ್ವಳ ಲಾಭದಲ್ಲಿ ಶೇ.3.05 ಕಡಿಮೆಯಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಒಟ್ಟು 4,457 ಕೋಟಿ ರೂ. ನಿವ್ವಳ ಲಾಭ ಬಂದಿತ್ತು. ನಾಲ್ಕನೇ ತ್ರೈಮಾಸಿಕದಲ್ಲಿ ಇದು 4,321 ಕೋಟಿ ರೂ.ಗೆ ಇಳಿದಿದೆ.

    ಆದರೆ, ನಾರಾಯಣಮೂರ್ತಿ ಸಂಸ್ಥಾಪನೆಯ ಕಂಪನಿಯ ಆದಾಯ ಹೆಚ್ಚಾಗಿದೆ. ಡಿಸೆಂಬರ್​ಗೆ ಅಂತ್ಯವಾದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಗೆ 23,092 ಕೋಟಿ ರೂ. ಕಾರ್ಯಾಚರಣೆ ಆದಾಯ ಬಂದಿತ್ತು. ಆದರೀಗ ನಾಲ್ಕನೇ ತ್ರೈಮಾಸಿಕದಲ್ಲಿ ಅದು 23,267 ಕೋಟಿ ರೂ.ಗೆ ಹೆಚ್ಚಾಗಿದ್ದು, ಒಟ್ಟು ಶೇ.0.76 ಕಾರ್ಯಾಚರಣೆ ಆದಾಯ ಹೆಚ್ಚಳವಾದಂತಾಗಿದೆ.

    ಕೋವಿಡ್​ 19ರಿಂದಾಗಿ ಎಲ್ಲೆಡೆ ಅನಿಶ್ಚಿತತೆ ಮನೆಮಾಡಿದೆ. ಆದ್ದರಿಂದ, ಪ್ರಸಕ್ತ ಆರ್ಥಿಕ ವರ್ಷದ (2020-21) ಮೊದಲ ತ್ರೈಮಾಸಿಕದ ನಿರೀಕ್ಷಿತ ಆದಾಯ ಸೇರಿ ಇನ್ನಾವುದೇ ವಿಷಯವನ್ನು ತಿಳಿಸಲು ಸಿದ್ಧವಿಲ್ಲ ಎಂದು ಇನ್ಫೊಸಿಸ್​ ಸ್ಪಷ್ಟಪಡಿಸಿದೆ.

    ಐಕಾನಿಕ್​ ಚತುಷ್ಟಯರು… ಆಡುವ ದಿನಗಳ ಅತ್ಯಂತ ಶ್ರೇಷ್ಠವಾದ ಸಮಯ… ಎಂದು ಸೌರವ್​ ಗಂಗೂಲಿ ಟ್ವೀಟ್​ ಮಾಡಿದ್ದು ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts