More

    ಪಾಕಿಸ್ತಾನದಲ್ಲಿ 700 ರೂ.ಗೆ ಒಂದು ಕೆಜಿ ಚಿಕನ್, 10 ಸಾವಿರಕ್ಕೆ ಒಂದು ಸಿಲಿಂಡರ್ ಗ್ಯಾಸ್!

    ಇಸ್ಲಾಮಾಬಾದ್: ಭಾರತಕ್ಕೆ ನ್ಯೂಕ್ಲಿಯರ್ ಬಾಂಬ್ ಬೆದರಿಕೆ ಹಾಕಿರುವ ಪಾಕಿಸ್ತಾನ ದೊಡ್ಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ದೇಶದಲ್ಲಿ ಹೆಚ್ಚುತ್ತಿರುವ ವಿದೇಶಿ ವಿನಿಮಯ ಮೀಸಲುಗಳ ಕೊರತೆಯಿಂದಾಗಿ, ಪಾಕಿಸ್ತಾನ ಇನ್ನು ಮುಂದೆ ಅಗತ್ಯ ವಸ್ತುಗಳನ್ನು ಖರೀದಿಸಲು ಕೂಡ ಸಾಧ್ಯವಾಗುವುದಿಲ್ಲ. ಜನರ ಖರೀದಿ ,ಮಾಡುಚವ ಸಾಮರ್ಥ್ಯ ಮೆಲ್ಲನೆ ಕಡಿಮೆಯಾಗುತ್ತಿದೆ. ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ವಿದ್ಯುತ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಉಳಿಸಲು ಮಾರುಕಟ್ಟೆಯನ್ನೇ ಮುಚ್ಚಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. 2020ರಲ್ಲಿ ಶ್ರೀಲಂಕಾಗೆ ಆದ ಪರಿಸ್ಥಿತಿ ಈಗ ಪಾಕಿಸ್ತಾನದಲ್ಲೂ ಕಂಡುಬರುತ್ತಿದೆ.

    ಪಾಕಿಸ್ತಾನದ ರಕ್ಷಣಾ ಸಚಿವರು ಕೂಡ ಅವರ ದೇಶ ಕಠಿಣ ಸಮಯವನ್ನು ಎದುರಿಸುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಪೆಟ್ರೋಲ್-ಡೀಸೆಲ್, ಆಹಾರ, ಅಡುಗೆ ಅನಿಲ, ವಿದ್ಯುತ್ ಕೊರತೆಯೂ ಉದ್ಭವಿಸಿದೆ. ದೇಶದಲ್ಲಿ ಹಣದುಬ್ಬರವು ಗಗನಕ್ಕೇರುತ್ತಿದೆ.

    ಆಹಾರ ಪದಾರ್ಥಗಳ ಬೆಲೆಯೇರಿಕೆ

    ಡಿಸೆಂಬರ್ ತಿಂಗಳಲ್ಲೇ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿವೆ. ಅಗತ್ಯ ವಸ್ತುಗಳ ಬೆಲೆಯಲ್ಲಿ ಶೇ.55.93ರಷ್ಟು ಏರಿಕೆ ದಾಖಲಾಗಿದ್ದು ಕಳೆದ ವರ್ಷ ಈರುಳ್ಳಿ ಬೆಲೆ ಶೇ.415ರಷ್ಟು ಏರಿಕೆಯಾಗಿದೆ. ಅಲ್ಲದೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಚಹಾ ಶೇಕಡಾ 64 ರಷ್ಟು ಮತ್ತು ಗೋಧಿ ಶೇಕಡಾ 58 ರಷ್ಟು ದುಬಾರಿಯಾಗಿದೆ. ತುಪ್ಪ ಮತ್ತು ಖಾದ್ಯ ತೈಲದ ಬೆಲೆ ಶೇಕಡಾ 32 ರಷ್ಟು ಹೆಚ್ಚಾಗಿದೆ. ಹಾಲು ಮತ್ತು ಅಕ್ಕಿ ಕ್ರಮವಾಗಿ ಶೇ.26 ಮತ್ತು ಶೇ.47ರಷ್ಟು ದುಬಾರಿಯಾಗಿದೆ.

    ಚಿಕನ್ ಕೆಜಿಗೆ 650 ರಿಂದ 700 ರೂ.

    ಪಾಕಿಸ್ತಾನದಲ್ಲಿನ ಹಣದುಬ್ಬರವು ಮದ್ಯ ಮತ್ತು ತಂಬಾಕು ಉತ್ಪನ್ನಗಳ ಮೇಲೂ ಪರಿಣಾಮ ಬೀರಿದೆ. ಇದು ಸುಮಾರು 35 ಪ್ರತಿಶತದಷ್ಟು ಹೆಚ್ಚಾಗಿದೆ. ಬಟ್ಟೆಗಳು ಮತ್ತು ಪಾದರಕ್ಷೆಗಳ ಬೆಲೆಗಳು ಶೇಕಡಾ 17.22 ರಷ್ಟು ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಕೋಳಿ ಮಾರಾಟವು ಕೆಜಿಗೆ 650-700 ರೂ.ಗಳವರೆಗೆ ಪ್ರಾರಂಭವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಕೋಳಿ ಕೆಜಿಗೆ 800 ರೂ. ಆಗಲಿದೆ

    ಗ್ಯಾಸ್ ಸಿಲಿಂಡರ್ ಬೆಲೆ 10 ಸಾವಿರ ರೂ.

    ವಾಣಿಜ್ಯ ಅನಿಲ ಸಿಲಿಂಡರ್ 10,000 ಪಾಕಿಸ್ತಾನಿ ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಜನರು ಪ್ಲಾಸ್ಟಿಕ್ ಚೀಲಗಳಲ್ಲಿ ಅನಿಲವನ್ನು ತುಂಬಿಸಿ ಬಳಸುವ ಮೂಲಕ ಅಪಾಯವನ್ನು ಮೈಮೇಲೆ ಎಳದುಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ, ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ನಡೆಯುತ್ತಿದ್ದು ಜನರು ಗಾಯಗೊಳ್ಳುತ್ತಿದ್ದಾರೆ.

    ವಿದ್ಯುತ್ ಉಳಿಸಲು ಮಾರುಕಟ್ಟೆಗಳು, ಮದುವೆ ಮಂಟಪಗಳನ್ನು ಮುಚ್ಚಲು ಆದೇಶಿಸಿದ ಪಾಕ್

    ಇಂಧನ ಬಳಕೆಯನ್ನು ತಡೆಯಲು ಪಾಕಿಸ್ತಾನ ಸರ್ಕಾರ ಮಂಗಳವಾರ ಮಾರುಕಟ್ಟೆ ಮತ್ತು ಮದುವೆ ಸಭಾಂಗಣಗಳನ್ನು ಬೇಗನೆ ಮುಚ್ಚುವುದಾಗಿ ಆದೇಶಿಸಿದೆ. ರಾತ್ರಿ 8.30ಕ್ಕೆ ಮಾರುಕಟ್ಟೆಗಳು ಮುಚ್ಚಲಿದ್ದು, ಮದುವೆ ಮಂಟಪಗಳು ರಾತ್ರಿ 10.00 ಗಂಟೆಗೆ ಮುಚ್ಚಲಿವೆ. ಇದರಿಂದ 600 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts