More

    ಮದಿರೆಯನ್ನೂ ಮಂಕಾಗಿಸಿತು ಸೋಂಕು!

    ಮರಿದೇವ ಹೂಗಾರ ಹುಬ್ಬಳ್ಳಿ
    ಲಾಕ್​ಡೌನ್​ನಿಂದಾಗಿ ಮದ್ಯ ಮಾರಾಟಕ್ಕೆ ಹಿನ್ನಡೆ ಉಂಟಾಗಿದೆ. ಅಬಕಾರಿ ಇಲಾಖೆಯ ಖಜಾನೆ ಸೇರಬೇಕಿದ್ದ ಆದಾಯಕ್ಕೆ ಹೊಡೆತ ಬಿದ್ದಿದೆ.
    ಧಾರವಾಡ ಜಿಲ್ಲೆಯಲ್ಲಿ 2018ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ 62.95 ಕೋಟಿ ರೂ., ಮೇ ತಿಂಗಳಲ್ಲಿ 109.89 ಕೋಟಿ ರೂ., 2019ರ ಏಪ್ರಿಲ್ ತಿಂಗಳಲ್ಲಿ 72.43 ಕೋಟಿ ರೂ., ಮೇ ತಿಂಗಳಲ್ಲಿ 97.39 ಕೋಟಿ ರೂ. ಮದ್ಯ ವಹಿವಾಟು ನಡೆದಿತ್ತು. 2020ರ ಮೇ ತಿಂಗಳಲ್ಲಿ 76.38 ಕೋಟಿ ರೂಪಾಯಿ ಆದಾಯವು ಇಲಾಖೆಗೆ ಬಂದಿತ್ತು. ಆದರೆ, ಈ ಬಾರಿಯ ಮೇ ತಿಂಗಳಲ್ಲಿ ಕೇವಲ 64.76 ಕೋಟಿ ರೂ. ಮೊತ್ತದ ವಹಿವಾಟು ನಡೆದಿದೆ.
    ಕರೊನಾದ ಮೊದಲನೇ ಅಲೆಯ ಅಬ್ಬರವಿದ್ದ 2020ರ ಏಪ್ರಿಲ್ ತಿಂಗಳಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಯಾಗಿತ್ತು. ಆಗ ಅಬಕಾರಿ ಇಲಾಖೆಗೆ
    ಹೆಚ್ಚಿನ ಆದಾಯ ಹರಿದುಬಂದಿರಲಿಲ್ಲ. 2021ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ 114.60 ಕೋಟಿ ರೂ. ಆದಾಯ ಬಂದಿದ್ದರೆ, ಮೇ ತಿಂಗಳಲ್ಲಿ 64.76 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಮದ್ಯದ ಅಂಗಡಿಗಳಿಗಿಂತ ಮದ್ಯದ ಬಾಟಲಿಂಗ್ ಉತ್ಪಾದನಾ ಘಟಕ(ಡಿಸ್ಟಿಲರಿ)ಗಳಿಂದ ಹೆಚ್ಚಾಗಿ ಆದಾಯ ಬರುತ್ತಿತ್ತು. ಲಾಕ್​ಡೌನ್ ಜಾರಿ ಹಿನ್ನೆಲೆಯಲ್ಲಿ ಡಿಸ್ಟಿಲರಿಗಳು ಬಂದ್ ಆಗಿದ್ದವು ಎನ್ನುತ್ತಾರೆ ಅಬಕಾರಿ ಇಲಾಖೆಯ ಅಧಿಕಾರಿಗಳು.
    2021-22ನೇ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಐಎಂಎಲ್ ಮದ್ಯ 2,16,877 (ಪೆಟ್ಟಿಗೆ)ಹಾಗೂ 62,326 ಬಿಯರ್ (ಪೆಟ್ಟಿಗೆ) ಮಾರಾಟವಾಗಿದೆ. ಕಳೆದ ಮೂರು ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಈ ಪ್ರಮಾಣವು ಬಹಳಷ್ಟು ಕಡಿಮೆಯಾಗಿದೆ.
    ಲಾಕ್​ಡೌನ್ ಸಂದರ್ಭದಲ್ಲಿ ಬೆಳಗಿನ ಜಾವಕ್ಕೆ ಮದ್ಯದ ಅಂಗಡಿ ತೆರೆಯಲು ಸಮಯಾವಕಾಶ ನೀಡಲಾಗಿತ್ತು. ಇದು ಮದ್ಯ ಖರೀದಿ ಮಾಡಲು ಬಹಳಷ್ಟು ಮದ್ಯಪ್ರಿಯರಿಗೆ ತ್ರಾಸು ಉಂಟು ಮಾಡಿತು. ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಮದ್ಯ ಕುಡಿಯಲು ಬಾರ್​ಗಳಲ್ಲಿ ಸಮಯಾವಕಾಶ ಕಲ್ಪಿಸಿದ್ದರೆ, ಅಬಕಾರಿ ಇಲಾಖೆಗೆ ಇನ್ನಷ್ಟು ಆದಾಯ ಬರುತ್ತಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.


    ಲಾಕ್​ಡೌನ್ ಜಾರಿ ಹಿನ್ನೆಲೆಯಲ್ಲಿ ಮದ್ಯದ ಬಾಟಲಿಂಗ್ ಉತ್ಪಾದನಾ ಘಟಕ ಬಂದ್ ಆಗಿತ್ತು. ಹಾಗಾಗಿ ಕಳೆದ ವರ್ಷದ ಮೇ ತಿಂಗಳಿಗೆ ಈ ವರ್ಷದ ಮೇ ತಿಂಗಳು ಹೋಲಿಸಿದರೆ, 11 ಕೋಟಿ ರೂ. ಕಡಿಮೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಇಲಾಖೆಯ ರಾಜಸ್ವ ಸಂಗ್ರಹದಲ್ಲಿ ಕುಸಿತ ಕಂಡಿದೆ.
    | ಮಂಜುನಾಥ ಅರೆಗುಳಿ, ಧಾರವಾಡ ಜಿಲ್ಲಾ ಅಬಕಾರಿ ಉಪ ಅಧೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts