More

    ತಾಪಮಾನದಿಂದ ಪಾರಾಗಲು ಆರೋಗ್ಯ ಇಲಾಖೆ ಸಲಹೆ

    ಬೆಂಗಳೂರು: ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಶ್ರಮದಾಯಕ ಕಾರ್ಯ ನಿರ್ವಹಿಸುವವರು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಆರೋಗ್ಯ ಇಲಾಖೆ ಸಲಹೆ ನೀಡಿದೆ.

    ಬಿಸಿ ಗಾಳಿಯಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಸೂರ್ಯಾಘಾತ (ಸನ್‌ಸ್ಟ್ರೋಕ್) ಆಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ದೇಹವನ್ನು ಪುನರ್ಜಲೀಕರಣ ಮಾಡಿಕೊಳ್ಳುವ ಅಗತ್ಯವಿದೆ. ಅದಕ್ಕಾಗಿ ಆಗಾಗ ನೀರು ಕುಡಿಯಬೇಕು. ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನ ರಸ, ಒಆರ್‌ಎಸ್ ಸೇರಿ ವಿವಿಧ ದ್ರವ ಪದಾರ್ಥವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಿರುವ ತಾಜಾ ಹಣ್ಣು ಮತ್ತು ತರಕಾರಿ ಸೇವಿಸುವಂತೆ ತಿಳಿಸಿದೆ.
    ಸನ್‌ಸ್ಟ್ರೋಕ್ ನಿಂದ ರಕ್ಷಣೆ ಪಡೆಯಲು ಮಧ್ಯಾಹ್ನದ ಸಮಯದಲ್ಲಿ ಶ್ರಮದಾಯಕ ಕೆಲಸಗಳನ್ನು ಮಾಡಬೇಡಿ, ತಿಳಿ ಬಣ್ಣದ ಸಡಿಲವಾದ ಬಟ್ಟೆಯನ್ನು ಧರಿಸಿ, ಹೊರಾಂಗಣದಲ್ಲಿ ಕೆಲಸ ಮಾಡುವಾಗ ಆಗಾಗ ವಿಶ್ರಾಂತಿ ಪಡೆಯಿರಿ, ಹೊರಗೆ ಹೋಗುವಾಗ ಕೊಡೆ, ಟೋಪಿ, ಟವೆಲ್‌ಗಳನ್ನು ರಕ್ಷಣೆಗೆ ಬಳಸಿಕೊಳ್ಳಿ, ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

    ಸನ್ ಸ್ಟ್ರೋಕ್‌ಗೆ ಪ್ರಥಮ ಚಿಕಿತ್ಸೆ
    ವ್ಯಕ್ತಿಯನ್ನು ತಣ್ಣಗಿನ ಸ್ಥಳದಲ್ಲಿ ಮಲಗಿಸಿ, ದೇಹವನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು, ಕುಡಿಯಲು ಆಗಾಗ ನೀರನ್ನು ಕೊಡಬೇಕು, ವ್ಯಕ್ತಿಯು ಚೇತರಿಸಿಕೊಂಡ ನಂತರ ನೀರಿನ ಅಂಶ ಹೆಚ್ಚಾಗಿರುವ ಪದಾರ್ಥಗಳನ್ನು ನೀಡಬೇಕು. ಪ್ರಾಥಮಿಕ ಉಪಚಾರದ ನಂತರ ವೈದ್ಯರಲ್ಲಿ ಕರೆದೊಯ್ಯಬೇಕು.

    ಇವುಗಳನ್ನು ನಿಯಂತ್ರಿಸಿ
    ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ನಿಯಂತ್ರಿಸಿ. ಮದ್ಯಪಾನ, ಚಹ, ಕಾಫಿ ಹಾಗೂ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯಬೇಡಿ. ಇದರಿಂದ ನಿರ್ಜಲೀಕರಣ ಉಂಟಾಗುತ್ತದೆ. ನಿಲ್ಲಿಸಿದ ವಾಹನಗಳ ಒಳಗೆ ಮಕ್ಕಳನ್ನು ಬಿಡಬೇಡಿ. ಹೊರಗಿನ ಆಹಾರ ಹೆಚ್ಚು ಸೇವಿಸಬೇಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts