ನವದೆಹಲಿ: ಪಾನಮತ್ತ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ದೂರು ದಾಖಲಾಗಿದೆ. ಈ ಘಟನೆ ನವೆಂಬರ್ 26ರಂದು ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ನಲ್ಲಿ ನಡೆದಿದೆ. ಈ ಕೃತ್ಯವನ್ನು ವಿಮಾನದ ಸಿಬ್ಬಂದಿಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುದಾರೆ ತಿಳಿಸಿದ್ದಾರೆ.
ಟಾಟಾ ಗ್ರೂಪ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಿಗೆ ವಿಮಾನದಲ್ಲಾದ ಕೆಟ್ಟ ಅನುಭವವನ್ನು ವಿವರಿಸಿ, ದೂರುದಾರೆ ಬರೆದ ಪತ್ರವನ್ನು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ದೂರು ನೀಡಿದ ನಂತರವೂ ಆರೋಪಿ ಪ್ರಯಾಣಿಕನ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ. ಇಂತಹ ಘಟನೆಯನ್ನು ನಿಭಾಯಿಸುವಲ್ಲಿ ನೌಕರರ ಕಡೆಯಿಂದ ಆಗಿರುವ ಲೋಪವನ್ನು ಸಂತ್ರಸ್ತೆ ಪತ್ರದಲ್ಲಿ ಸೂಚಿಸಿದ್ದಾರೆ.
ವಿಮಾನದಲ್ಲಿ ಊಟದ ನಂತರ ಲೈಟ್ ಡಿಮ್ ಮಾಡಿದಾಗ ಈ ಘಟನೆ ನಡೆದಿದೆ. 70ರ ಹರೆಯದ ಸಂತ್ರಸ್ತೆಯ ಮೇಲೆ ಪ್ರಯಾಣಿಕನೊಬ್ಬ ಜಿಪ್ ಬಿಚ್ಚಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ನಂತರ ಅಲ್ಲಿಯೇ ನಿಂತು ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸುವುದನ್ನು ಮುಂದುವರೆಸಿದ್ದಾನೆ. ಇತರ ಪ್ರಯಾಣಿಕರು ಗಮನಿಸಿ ಆರೋಪಿ ಪ್ರಯಾಣಿಕನನ್ನು ತೆರಳುವಂತೆ ಹೇಳಿದ ಬಳಿಕವೇ ಆತ ಅಲ್ಲಿಂದ ತೆರಳಿದ್ದಾನೆ. ಆರೋಪಿ ಮಾಡಿದ ಕೃತ್ಯದಿಂದ ಮಹಿಳೆಯ ಬಟ್ಟೆ, ಶೂ ಹಾಗೂ ಬ್ಯಾಗ್ ಮೂತ್ರದಿಂದ ತೊಯ್ದು ಹೋಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಏರ್ ಇಂಡಿಯಾ ಪೊಲೀಸರು ತನಿಖೆಗಾಗಿ ಸಮಿತಿಯನ್ನು ರಚಿಸಿದೆ. ಅಲ್ಲದೆ, DGCA ಸಹ ತನಿಖೆಯನ್ನು ಪ್ರಾರಂಭಿಸಲಿದೆ. (ಏಜೆನ್ಸೀಸ್)
ಕಣ್ಣಿಗೊಂದು ಸವಾಲ್: ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಬಾಳೆಹಣ್ಣುಗಳ ನಡುವೆ ಇರುವ ಹಾವನ್ನು ಪತ್ತೆಹಚ್ಚಬಲ್ಲರು!