More

    ಮಂಡ್ಯದಲ್ಲಿ ಜಮೀನು ವಿವಾದ: ಹೊಲದಲ್ಲೇ ದಂಪತಿ ಮೇಲೆ ಕಾರು ಹರಿಸಿದ ದುಷ್ಕರ್ಮಿಗಳು! ಪತ್ನಿ ಸಾವು, ಪತಿ ಸ್ಥಿತಿ ಚಿಂತಾಜನಕ

    ಮಂಡ್ಯ: ಎರಡು ಕುಟುಂಬಗಳ ನಡುವಿನ ಜಮೀನು ವಿವಾದ ಮಹಿಳೆಯನ್ನ ಬಲಿತೆಗೆದುಕೊಂಡ ಅಮಾನುಷ ಘಟನೆ ಮಂಡ್ಯ ಜಿಲ್ಲೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಾಣಸಂದ್ರ ಗ್ರಾಮದಲ್ಲಿ ಸಂಭವಿಸಿದೆ.

    ಟ್ರ್ಯಾಕ್ಟರ್​ನಲ್ಲಿ ಜಮೀನು ಉಳುಮೆ ಮಾಡಿಸುತ್ತಿದ್ದ ದಂಪತಿ ಮೇಲೆ ವಿರೋಧಿ ಬಣ ಕಾರು ಹರಿಸಿದ್ದು, ಸ್ಥಳದಲ್ಲೇ ಪತ್ನಿ ಮೃತಪಟ್ಟಿದ್ದಾಳೆ. ಪತಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮಕೃಷ್ಣಯ್ಯ ಅವರ ಪತ್ನಿ ಜಯಲಕ್ಷ್ಮಮ್ಮ(45) ಮೃತರು. ರಾಮಕೃಷ್ಣಯ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

    ಗೌಡಯ್ಯ ಮತ್ತು ರಾಮಕೃಷ್ಣಯ್ಯ ಕುಟುಂಬದ ನಡುವೆ ಜಮೀನು ವಿವಾದವಿತ್ತು. ಅದೇ ಜಮೀನನ್ನು ಟ್ರ್ಯಾಕ್ಟರ್​ ಮೂಲಕ ರಾಮಕೃಷ್ಣಯ್ಯ ದಂಪತಿ ಉಳುಮೆ ಮಾಡಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಗೌಡಯ್ಯನ ಕುಟುಂಬಸ್ಥರು ಕಾರಿನಲ್ಲಿ ಡಿಕ್ಕಿ ಹೊಡೆದಿದ್ದಾರೆ. ಜಯಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಏನಿದು ಪ್ರಕರಣ?: ಜಯಲಕ್ಷ್ಮಮ್ಮನಿಗೆ ಕಳೆದ 10 ವರ್ಷದ ಹಿಂದೆ ಗಾಣಸಂದ್ರ ಗ್ರಾಮದ ಸ.ನಂ.84ರಲ್ಲಿ ಬಗರ್‌ಹುಕುಂ ಸಾಗುವಳಿಯ ಜಮೀನು ಮಂಜೂರಾಗಿ ಇದಕ್ಕೆ ಸಂಬಂಧಿಸಿದ ಭೂ ದಾಖಲೆಗಳೂ ಇವರ ಹೆಸರಿನಲ್ಲಿದ್ದವು. ಅಂದಿನಿಂದ ಜಯಲಕ್ಷ್ಮಮ್ಮ ಜಮೀನು ಉಳುಮೆ ಮಾಡಿಸುತ್ತಿದ್ದರು. ಆದರೆ ಇದೇ ಗ್ರಾಮದ ಗೌಡಯ್ಯ ಮತ್ತವರ ಕುಟುಂಬದವರು ಮಹಿಳೆಗೆ ತೊಂದರೆ ಕೊಡುತ್ತಿದ್ದರು. ಅಲ್ಲದೆ ಜಮೀನಿನಲ್ಲಿ ಹಾಕಿಸಿರುವ ಕೊಳವೆಬಾವಿಯ ವಿದ್ಯುತ್ ವೈರನ್ನು ತುಂಡರಿಸಿದ್ದರು. ಎರಡು ಕುಟುಂಬಗಳ ನಡುವಿನ ಜಮೀನು ವಿವಾದ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತೆಂದು ಹೇಳಲಾಗಿದೆ.
    ಬೆಂಗಳೂರಿನಲ್ಲಿ ನೆಲೆಸಿದ್ದ ಜಯಲಕ್ಷ್ಮಮ್ಮ ದಂಪತಿ, ಜಮೀನು ಉಳುಮೆ ಮಾಡಿಸುವ ಸಲುವಾಗಿಯೇ ಭಾನುವಾರ ಗ್ರಾಮಕ್ಕೆ ಆಗಮಿಸಿದ್ದರು. ಜಮೀನು ಉಳುಮೆ ಮಾಡಿಸುತ್ತಿದ್ದ ವೇಳೆ ಏಕಾಏಕಿ ಬಂದ ಗೌಡಯ್ಯ ಮತ್ತು ಅವರ ಮಗ ಅನಿಲ್‌ಕುಮಾರ್ ಸೇರಿದಂತೆ ಎಂಟು ಜನರಿದ್ದ ಗುಂಪು ಗಲಾಟೆ ನಡೆಸಿ, ಟ್ರ್ಯಾಕ್ಟರ್ ಚಾಲಕ ನವೀನ್ ಮತ್ತು ಜಗಳ ಬಿಡಿಸಲು ಬಂದ ದೇವರಾಜು ಎಂಬುವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿತ್ತು. ರಸ್ತೆಬದಿಯಲ್ಲಿ ನಿಂತಿದ್ದ ಜಯಲಕ್ಷ್ಮಮ್ಮನ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಗುಂಪು ಯತ್ನಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಜಯಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಬೆಳ್ಳೂರು ಠಾಣೆ ಪೊಲೀಸರು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಲಕ್ಷ್ಮಮ್ಮನ ಮೃತದೇಹವನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆ ಪೊಲೀಸರು ಪಿಗಳಾದ ಗೌಡಯ್ಯ, ಅನಿಲ್, ಗೌಡಯ್ಯನ ಪತ್ನಿ ಸೇರಿ ಹಲವರನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಯತೀಶ್, ಡಿವೈಎಸ್ಪಿ ಲಕ್ಷ್ಮೀನಾರಾಯಣ್ ಪ್ರಸಾದ್, ಸಿಪಿಐ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ರಾತ್ರಿ ಪಾಳಿಯ ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಬಂದ ಪೊಲೀಸ್​ ಹೆಡ್​ ಕಾನ್​ಸ್ಟೇಬಲ್​ ಹೃದಯಾಘಾತದಿಂದ ಸಾವು

    ಆನೇಕಲ್​ನಲ್ಲಿ ಈ ನಾಗರಹಾವಿನ ನಡೆಯೇ ವಿಚಿತ್ರ-ವಿಸ್ಮಯ! ಹಾವು ನೋಡಲು ಜನವೋ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts