More

    ವಿಚಿತ್ರ ಕಾಯಿಲೆಯಿಂದ ಪ್ರತಿನಿತ್ಯ ನೋವುಂಡು ಬದುಕುತ್ತಿರೋ ವ್ಯಕ್ತಿಯ ಕಣ್ಣೀರ ಕತೆಯಿದು!

    ಜಕಾರ್ತ: ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಇಂಡೋನೇಷ್ಯಾದ ವ್ಯಕ್ತಿಯು ನಿರಂತರವಾಗಿ ನೋವುಂಡು ಬದುಕುವ ನಿರೀಕ್ಷೆಯಲ್ಲೇ ಜೀವನ ಸಾಗಿಸಬೇಕಾಗಿದೆ. ಮುಖದಲ್ಲಿ ಬೆಳೆದ ಭಾರಿ ಗಾತ್ರದ ಗಡ್ಡೆಯೊಂದು ಕೆಳಭಾಗದ ಹೊಟ್ಟೆಯವರೆಗೂ ಜೋತು ಬಿದ್ದಿದ್ದು ಜೀವ ಉಳಿಸುವ ಚಿಕಿತ್ಸೆಗಾಗಿ ಸಂತ್ರಸ್ತ ಎದುರು ನೋಡುತ್ತಿದ್ದಾನೆ.

    ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಹೆಸರು ಅಂಡ್ರಿಯಾಡಿ ಪುಟ್ರ (34). ಗಡ್ಡೆ ಬೆಳೆದಿರುವುದರಿಂದ ಸರಿಯಾಗಿ ತಿನ್ನಲು ಮತ್ತು ಮಾತನಾಡಲು ಸಹ ಅವರಿಗೆ ಆಗುತ್ತಿಲ್ಲ. ಗಡ್ಡೆಯು ಸುಮಾರು 39 ಕೆ.ಜಿ ಗಾತ್ರವಿದ್ದು, ಮುಖದಲ್ಲಿ ಮಾತ್ರವಲ್ಲದೇ, ದೇಹದ ಅನೇಕ ಭಾಗದಲ್ಲಿಯೂ ಗಡ್ಡೆ ಮೊಳಕೆಯೊಡೆದಿದೆ.

    ಇದನ್ನೂ ಓದಿ: VIDEO| ಕುಡಿಯಲು ಹಣವಿಲ್ಲದೇ‌ ಮನೆಯಲ್ಲಿದ್ದ ಟಿವಿ ಮಾರಲು ಹೊರಟವನ ಮಾತು ಕೇಳಿದ್ರೆ ದಂಗಾಗ್ತಿರಾ!

    ಅಂದಹಾಗೆ ಪುಟ್ರ, ಇಂಡೋನೇಷ್ಯಾದ ಉತ್ತರ ಸುಮಾತ್ರದ ಮೇಡಾನ್​ ಮೂಲದವರು. ಇವರ ಪರಿಸ್ಥಿತಿ ಹೇಗಿದೆ ಅಂದರೆ ಯಾವಾಗಲೂ ದೊಡ್ಡದಾದ ಟೀ-ಶರ್ಟ್​ನಿಂದ ಗಡ್ಡೆಯನ್ನು ಮುಚ್ಚಿಕೊಂಡು ಓಡಾಡುವಂತಾಗಿದೆ.

    ಇನ್ನು ಪುಟ್ರ ಅವರಿಗೆ ಇರುವ ಸಮಸ್ಯೆಯ ಕಡೆ ಬರುವುದಾದರೆ, ನ್ಯೂರೋಫಿಬ್ರೋಮ್ಯಾಟೊಸಿಸ್​ ಎಂಬ ಅನುವಂಶೀಯ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಅವರ ದೇಹದಲ್ಲಿನ ಜೀವಕೋಶದ ಅಂಗಾಂಶ ಬೆಳವಣಿಗೆಯಾಗಿದೆ. ಇದರಿಂದ ಉಸಿರಾಟದ ತೊಂದರೆಯನ್ನು ಎದುರಿಸುತ್ತಿರುವ ಪುಟ್ರ, ಗಡ್ಡೆ ತುಂಬಾ ದೊಡ್ಡದಿರುವುದರಿಂದ ಸರಿಯಾಗಿ ನಡೆದಲು ಸಹ ಸಾಧ್ಯವಾಗುತ್ತಿಲ್ಲ.

    ತನ್ನ ಸಮಸ್ಯೆ ಬಗ್ಗೆ ನೋವು ತೋಡಿಕೊಂಡಿರುವ ಪುಟ್ರ, ಪದೇ ಪದೆ ನೋವು ಅನುಭವಿಸುತ್ತಿದ್ದೇನೆ. ಗಡ್ಡೆಯ ಭಾರ ನನ್ನ ಬೆನ್ನನ್ನು ಸೀಳುತ್ತಿದೆ. ತುಂಬಾ ಭಾರವಾಗಿದ್ದು, ಉಸಿರಾಡಲು ಆಗುತ್ತಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: VIDEO| ಭಾರತದಲ್ಲಿ ಪತ್ತೆಯಾಯ್ತು ಎರಡು ತಲೆ: ಇದರ ವಿಶೇಷತೆ ಕೇಳಿದ್ರೆ ಅಚ್ಚರಿಗೊಳ್ತಿರಾ…!

    ಹುಟ್ಟುವಾಗಲೇ ಸಣ್ಣ ಗಂಟನ್ನು ಹೊಂದಿದ್ದ ಪುಟ್ರ, ವಯಸ್ಸಾದಂತೆ ಗಂಟು ಕೂಡ ಬೆಳೆದು ಇದೀಗ ನಡೆದಾಡಲು ಸಾಧ್ಯವಾಗದಷ್ಟು ದಪ್ಪವಾಗಿದೆ. ಆರಂಭದಲ್ಲೇ ಅವರ ತಂದೆ-ತಾಯಿ ಆಸ್ಪತ್ರೆಗೆ ಕರೆದೊಯ್ದು ತೋರಿಸಿದ್ದರು. ಆದರೆ, ಗಂಟಿನಿಂದ ಏನು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಕ್ಕೆ ಹೆಚ್ಚಿನ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಇದೀಗ ದೊಡ್ಡದಾಗಿ ಬೆಳೆದಿದೆ. ಪುಟ್ರ ತಂದೆ ಸ್ಥಳೀಯ ಮಾರುಕಟ್ಟೆಯಲ್ಲಿ ಕೂಲಿಯಾಳು ಆಗಿರುವುದರಿಂದ ಮಗನಿಗೆ ಅತ್ಯಾಧುನಿಕ ಚಿಕಿತ್ಸೆ ಕೊಡಿಸಲು ಆರ್ಥಿಕ ಸಮಸ್ಯೆ ಇದೆ. ಹೀಗಾಗಿ ಆರ್ಥಿಕ ಸಹಾಯಾಸ್ತ ಕೋರಿದ್ದಾರೆ. (ಏಜೆನ್ಸೀಸ್​)

    VIDEO| ಪಾದರಾಯನಪುರ ಆರೋಪಿಗಳ ಸ್ಥಳಾಂತರದಿಂದ ರಾಮನಗರಕ್ಕೆ ತೊಂದರೆ ಆಗಿಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts