More

    ಕೈಕಾಲುಗಳಿಲ್ಲದೇ ಹೆಣ್ಣು ಮಗುವಿನ ಜನನ: ತಾಯಿ, ವೈದ್ಯರಿಗೆ ಕಾದಿತ್ತು ಮತ್ತೊಂದು ಅಚ್ಚರಿ!

    ಭೋಪಾಲ್​: ಕೈಕಾಲುಗಳಿಲ್ಲದೇ ಹೆಣ್ಣು ಮಗುವೊಂದು ಜನಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಮಗುವಿನ ತಾಯಿ ಮತ್ತು ವೈದ್ಯರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಅಪರೂಪದ ಅನುವಂಶೀಯ ಕಾಯಿಲೆಯಿಂದ ಹೀಗಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ವಿಧಿಶಾ ಜಿಲ್ಲೆಯ ಸಿರೊಂಜ್​ ತಾಲೂಕಿನ ಸಾಕ್ಲಾ ಗ್ರಾಮದಲ್ಲಿ 28 ವರ್ಷದ ಮಹಿಳೆಗೆ ಅಪರೂಪದ ಹೆಣ್ಣು ಮಗು ನಿನ್ನೆ (ಶನಿವಾರ) ಜನಿಸಿದೆ. ಕುಟುಂಬದ ಜನ್ಮಜಾತ “ಟೆಟ್ರಾ ಅಮೆಲಿಯಾ” ಎಂಬ ಅನುವಂಶೀಯ ಕಾಯಿಲೆಯಿಂದ ಮಗು ಹುಟ್ಟುವಾಗಲೇ ಕೈಕಾಲುಗಳನ್ನು ಕಳೆದುಕೊಂಡಿದೆ.

    ಇದನ್ನೂ ಓದಿ: ಯುವತಿಯನ್ನು ನಂಬಿಸಿ ದ್ರೋಹವೆಸಗಿದ ಪೊಲೀಸ್​ ಕಾನ್ಸ್​ಟೇಬಲ್ ಬಂಧನ​

    ಈ ಬಗ್ಗೆ ಮಾತನಾಡಿರುವ ಸಿರೊಂಜ್​ನ ರಾಜೀವ್​ ಗಾಂಧಿ ಸ್ಮೃತಿ ಆಸ್ಪತ್ರೆಯ ಶಿಶುವೈದ್ಯರಾಗಿರುವ ಡಾ. ಸುರೇಶ್​ ಅಗರ್​ವಾಲ್​ ಅವರು, ಮಗು ತುಂಬಾ ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ. ಮಗುವಿನ ಆಂತರಿಕ ಅಂಗಗಳು ಸರಿಯಾಗಿ ಬೆಳವಣಿಗೆಯಾಗಿದೆಯೇ? ಎಂಬುದನ್ನು ತಿಳಿದುಕೊಳ್ಳಲು ಮಗುವನ್ನು ಮುಂದಿನ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

    ಅಂದಹಾಗೆ ಟೆಟ್ರಾ ಅಮೆಲಿಯಾ ಕಾಯಿಲೆ ಒಂದು ಅನುವಂಶೀಯ ರೋಗವಾಗಿದ್ದು, ಡಬ್ಲ್ಯುಎನ್​ಟಿ3 (WNT3) ಜೀನ್​ನಲ್ಲಿನ ರೂಪಾಂತರದಿಂದಾಗಿ ಈ ಕಾಯಿಲೆ ಸಂಭವಿಸುತ್ತದೆ. ಈ ಕಾಯಿಲೆಯಿಂದ ಕೈಕಾಲುಗಳು ಬೆಳವಣಿಗೆಯೇ ಆಗುವುದಿಲ್ಲ. ಆದರೆ, ಇಂತಹ ಪ್ರಕರಣಗಳು ತುಂಬಾ ಅಪರೂಪ ಎಂದು ತಜ್ಞರು ಹೇಳಿದ್ದಾರೆ.

    ಇದನ್ನೂ ಓದಿ: ಸೇನೆಗೆ ಕೊಂಕಣಿ ಯುವತಿಯರು: ದೇಶ ಸೇವೆಗೆ ಇಳಿದ ಎಂಬಿಬಿಎಸ್​, ಇಂಜಿನಿಯರಿಂಗ್​ ಪದವೀಧರರು

    ಸುಮಾರು 1 ಲಕ್ಷ ಮಕ್ಕಳ ಜನನದಲ್ಲಿ ಒಬ್ಬರಿಗೆ ಮಾತ್ರ ಇಂತಹ ಕಾಯಿಲೆ ತಗುಲುತ್ತದೆ ಎಂದು ಮಧ್ಯಪ್ರದೇಶ ರಾಜಧಾನಿ ಭೋಪಾಲ್ ಚಿಲ್ಡ್ರನ್​ ಮೆಂಟಲ್​ ಹೆಲ್ತ್​ ಆಫೀಸರ್​ (ಸಿಎಂಎಚ್​ಒ) ಹಾಗೂ ಶಿಶುವೈದ್ಯ ಡಾ. ಪ್ರಭಾಕರ್​ ತಿವಾರಿ ತಿಳಿಸಿದ್ದಾರೆ. ಇವರ ವೃತ್ತಿ ಜೀವನದಲ್ಲೇ ಇದೇ ಮೊದಲ ಪ್ರಕರಣವಂತೆ. (ಏಜೆನ್ಸೀಸ್​)

    VIDEO| ಪೈಲಟ್​​ ಗಂಡನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ: ಬೆಚ್ಚಿಬೀಳಿಸುವಂತಿದೆ ಸಿಸಿಟಿವಿ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts