More

    ಸೇನೆಗೆ ಕೊಂಕಣಿ ಯುವತಿಯರು: ದೇಶ ಸೇವೆಗೆ ಇಳಿದ ಎಂಬಿಬಿಎಸ್​, ಇಂಜಿನಿಯರಿಂಗ್​ ಪದವೀಧರರು

    ಮಂಗಳೂರು: ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನದ ಫಲಾನುಭವಿಗಳಾದ ಇ.ರೇಶ್ಮಿ ಭಟ್ ಗೋಪಿನಾಥ ಮತ್ತು ಡಾ.ಮೇಘಾ ಎನ್.ಶೆಣೈ ಇಂಜಿನಿಯರಿಂಗ್ ಮತ್ತು ಎಂಬಿಬಿಎಸ್ ವ್ಯಾಸಂಗ ಪೂರೈಸಿ, ಭಾರತೀಯ ಸೇನೆ ಸೇರಲು ಸಜ್ಜಾಗಿದ್ದಾರೆ.

    ಕೇರಳದ ಕೊಚ್ಚಿಯ ತಿರುಮಲ ದೇವಸ್ವಂ ದೇವಸ್ಥಾನದ ಕರ್ಮಚಾರಿ ಗೋಪಿನಾಥ ಭಟ್ ಮತ್ತು ಶೋಭಾ ದಂಪತಿ ಪುತ್ರಿ ರೇಶ್ಮಿ ಭಟ್ ಕಾಲಡಿಯ ಆದಿ ಶಂಕರ ಇಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯದಿಂದ ಪದವಿ ಪಡೆದಿದ್ದು, ಬಳಿಕ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆಯ ಏರೊಸ್ಪೇಸ್ ರಂಗದಲ್ಲಿ ಮೂರು ವರ್ಷ ಕೆಲಸ ಮಾಡಿದ್ದಾರೆ. ಬಳಿಕ ಬೆಂಗಳೂರಿನ ಜಾಲಹಳ್ಳಿಯ ವಾಯುಸೇನಾ ತಾಂತ್ರಿಕ ಕಾಲೇಜಿನಲ್ಲಿ 74 ವಾರ, ಹೈದರಾಬಾದಿನ ವಾಯುಸೇನಾ ಅಕಾಡೆಮಿಯಲ್ಲಿ 22 ವಾರ ಏರೋನಾಟಿಕಲ್ ಇಂಜಿನಿಯರಿಂಗ್ ತರಬೇತಿ ಪಡೆದಿದ್ದಾರೆ. ಮೇ 29ರಂದು ಬೆಂಗಳೂರಿನಲ್ಲಿ ಸನದು ಸ್ವೀಕರಿಸಿದ 16 ಪದವೀಧರರಲ್ಲಿ ಏಕೈಕ ಯುವತಿ ಎಂಬ ಹೆಗ್ಗಳಿಕೆಗೂ ರೇಶ್ಮಿ ಪಾತ್ರರಾಗಿದ್ದಾರೆ. ಪ್ರಸಕ್ತ ಭಾರತೀಯ ವಾಯುಸೇನೆಯ ತಾಂತ್ರಿಕ ವಿಭಾಗದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಡಾ.ಮೇಘಾ ಕೋವಿಡ್ ಸೇವೆಗೆ: ಬೆಂಗಳೂರಿನ ಇಡಿ ನರಸಿಂಹ ಶೆಣೈ-ಗೋಮತಿ ಶೆಣೈ ದಂಪತಿ ಪುತ್ರಿ ಡಾ.ಮೇಘಾ ಎನ್.ಶೆಣೈ ಮಂಡ್ಯ ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವೀಧರರು. ಮಂಡ್ಯ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಭಾರತೀಯ ಸೇನೆಯ ಘೊಷಿತವಾದ ಅವಕಾಶಕ್ಕೆ ತಮ್ಮನ್ನು ತೆರೆದುಕೊಂಡ ಮೇಘಾ ಎನ್.ಶೆಣೈ ಸುದೀರ್ಘ ಆಯ್ಕೆ ಪ್ರಕ್ರಿಯೆಯ ಬಳಿಕ ಗಡಿ ಭದ್ರತಾ ಪಡೆಯಲ್ಲಿ ಅಸಿಸ್ಟೆಂಟ್ ಕಮಾಂಡಿಂಗ್ ವೈದ್ಯಕೀಯ ಅಧಿಕಾರಿಯಾಗಿ ಆಯ್ಕೆಗೊಂಡರು. ಪ್ರಸಕ್ತ ಕೋವಿಡ್ ಶುಶ್ರೂಷಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ನಿಯುಕ್ತರಾಗಿದ್ದಾರೆ.

    ವಿಶ್ವ ಕೊಂಕಣಿ ಕೇಂದ್ರ ಅಭಿನಂದನೆ

    ಯುವತಿಯರ ದೇಶ ಸೇವೆಯ ಕಡೆಗಿನ ಪ್ರೇರಣಾದಾಯಕ ನಡೆಯನ್ನು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಸ್ಥಾಪನೆಯ ರೂವಾರಿ ಟಿ.ವಿ.ಮೋಹನದಾಸ ಪೈ, ವಿದ್ಯಾರ್ಥಿವೇತನ ನಿಧಿಯ ಅಧ್ಯಕ್ಷ ರಾಮದಾಸ ಕಾಮತ್ ಯು., ಕಾರ್ಯದರ್ಶಿ ಪ್ರದೀಪ ಜಿ.ಪೈ, ಕ್ಷಮತಾ ಅಕಾಡೆಮಿ ಪ್ರಧಾನ ನಿರ್ದೇಶಕ ಉಲ್ಲಾಸ ಕಾಮತ್, ಸಂಚಾಲಕ ಗಿರಿಧರ ಕಾಮತ್, ವಿಶ್ವ ಕೊಂಕಣಿ ಕೇಂದ್ರದ ಸಂಘಟನಾ ಕಾರ್ಯದರ್ಶಿ ನಂದಗೋಪಾಲ ಜಿ.ಶೆಣೈ, ಕೋಶಾಧಿಕಾರಿ ಬಿ.ಆರ್.ಭಟ್ ಅಭಿನಂದಿಸಿದ್ದಾರೆ.

    ಖಿನ್ನತೆ ಬಿಡೋಣ, ಕರೊನಾ ಗೆಲ್ಲೋಣ; ಆತ್ಮವಿಶ್ವಾಸಕ್ಕಿಂತ ಔಷಧವಿಲ್ಲ, ಭಯಮುಕ್ತ ಬದುಕೇ ಮದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts