More

    VIDEO| ಪಾದರಾಯನಪುರ ಆರೋಪಿಗಳ ಸ್ಥಳಾಂತರದಿಂದ ರಾಮನಗರಕ್ಕೆ ತೊಂದರೆ ಆಗಿಲ್ಲ: ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್​

    ಬೆಂಗಳೂರು: ಪಾದಾರಾಯನಪುರ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದಲ್ಲಿ ಯಾವುದೇ ರಾಜಕೀಯ ದುರುದ್ದೇಶವಿರಲಿಲ್ಲ. ಬೆಂಗಳೂರಿಗೆ ರಾಮನಗರ ಸಮೀಪವಾಗಿದ್ದರಿಂದ ಹಾಗೂ ಆರೋಪಿಗಳನ್ನು ಪ್ರತ್ಯೇಕವಾಗಿ ಇಡಬೇಕಾಗಿದ್ದರಿಂದ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಯಿತು. ಅದರಿಂದ ಜಿಲ್ಲೆಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್​ ಅವರು ತಿಳಿಸಿದರು.

    ವಿಜಯವಾಣಿ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯವು ಕರೊನಾ ವಿರುದ್ಧ ಸರಿಯಾದ ನಿಟ್ಟಿನಲ್ಲಿ ಹೋರಾಡುತ್ತಿದೆ. ಕರೊನಾ ಸೋಂಕಿನಲ್ಲಿ 2ನೇ ಸ್ಥಾನದಲ್ಲಿದ್ದ ರಾಜ್ಯ ಇಂದು 12ನೇ ಸ್ಥಾನದಲ್ಲಿದೆ ಅಂದರೆ ಅದಕ್ಕೆ ಕಾರಣ ರಾಜ್ಯ ಸರ್ಕಾರದ ಉತ್ತಮ ಕ್ರಮಗಳು ಎಂದರು.

    ಇದನ್ನೂ ಓದಿ: ತಾಯಿಯನ್ನು ಜೀವಂತ ಸಮಾಧಿ ಮಾಡಿದ ಮಗ, 3 ದಿನಗಳ ನಂತರ ಕಾದಿತ್ತೊಂದು ಅಚ್ಚರಿ!

    ಇದೇ ವೇಳೆ ರಾಮನಗರ ಜಿಲ್ಲಾ ವ್ಯಾಪ್ತಿಯ ಮಾಗಡಿ, ಬಿಡದಿ ಹಾಗೂ ಹಾರೋಹಳ್ಳಿ ಸೇರಿದಂತೆ ವಿವಿಧ ಪ್ರದೇಶದ ಜನರು ದೂರವಾಣಿ ಕರೆ ಮಾಡಿ ಆಹಾರ ಕಿಟ್, ಔಷಧ ಸೇರಿದಂತೆ ಅನೇಕ ಸಮಸ್ಯೆಗಳನ್ನು ಅಧ್ಯಕ್ಷರ ಬಳಿ ಹೇಳಿಕೊಂಡರು. ವಿಶೇಷವಾಗಿ ಬೊಂಬೆಯ ನಾಡೆಂದು ಕರೆಯುವ ಚನ್ನಪಟ್ಟಣದ ಟಾಯ್ಸ್​ ಎಂಪೋರಿಯಂ ಕಾರ್ಮಿಕರ ಸಮಸ್ಯೆಯನ್ನು ಸಿಎಂ ಬಳಿ ಚರ್ಚಿಸುವ ಭರವಸೆ ನೀಡಿದರು.

    ಕರೆ ಮಾಡಿದ ಪ್ರತಿಯೊಬ್ಬರಿಗೂ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ರುದ್ರೇಶ್ ಅವರಿಗೆ ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ ಎಂದು ಜನರು ಅಭಿನಂದನೆ ಸಲ್ಲಿಸಿದರು. ಫೋನ್ ಇನ್ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಶನಿವಾರದ ‘ವಿಜಯವಾಣಿ’ ಸಂಚಿಕೆಯಲ್ಲಿ ಪ್ರಕಟವಾಗಲಿದೆ.

    ಇದನ್ನೂ ಓದಿ: ಕರೊನಾ ಸೋಂಕಿತ ಬಾಗಲಕೋಟೆ ಗರ್ಭಿಣಿಯ ಗರ್ಭಪಾತಕ್ಕೆ ವೈದ್ಯರು ಮುಂದಾಗಿದ್ದೇಕೆ?

    ವಿಜಯವಾಣಿ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್​ ಮಾತನಾಡಿ,ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯವು ಕರೊನಾ ವಿರುದ್ಧ ಸರಿಯಾದ ನಿಟ್ಟಿನಲ್ಲಿ ಹೋರಾಡುತ್ತಿದೆ. ಕರೊನಾ ಸೋಂಕಿನಲ್ಲಿ 2ನೇ ಸ್ಥಾನದಲ್ಲಿದ್ದ ರಾಜ್ಯ ಇಂದು 12ನೇ ಸ್ಥಾನದಲ್ಲಿದೆ ಅಂದರೆ ಅದಕ್ಕೆ ಕಾರಣ ರಾಜ್ಯ ಸರ್ಕಾರದ ಉತ್ತಮ ಕ್ರಮಗಳು ಎಂದರು.#VijayavaniPhonein #PhoneIn #Ramanagara #BJP #MRudresh

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಮೇ 8, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts