More

    ಹೊಟ್ಟೆ ನೋವೆಂದು ಹೆರಿಗೆ ಆಸ್ಪತ್ರೆಗೆ ಬಂದ ಮಹಿಳೆಗೆ ಆಪರೇಷನ್​ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ!

    ಶಿಲ್ಲಾಂಗ್​: ಮೇಘಾಲಯದ ವೆಸ್ಟ್​ ಗಾರೋ ಹಿಲ್ಸ್​ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಹೊಟ್ಟೆ ನೋವೆಂದು ದಾಖಲಾದ ಮಹಿಳೆಯ ಆಪರೇಷನ್​ ನಡೆಸಿದ ವೈದ್ಯರಿಗೆ ಅಚ್ಚರಿಯೊಂದು ಕಾದಿತ್ತು.

    ಹೌದು. ಈಸ್ಟ್​ ಗಾರೋ ಹಿಲ್ಸ್​ ಜಿಲ್ಲೆಯ ಜಾಮ್ಗೆ ಗ್ರಾಮದ 37 ವರ್ಷದ ಮಹಿಳೆ ತೀವ್ರ ಹೊಟ್ಟೆ ನೋವಿನ ಬಳಿಕ ಜುಲೈ 29ರಂದು ತುರಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದಳು. ಬಳಿಕ ಇಬ್ಬರು ಸ್ತ್ರೀರೋಗತಜ್ಞರು ಸೇರಿದಂತೆ ವೈದ್ಯರ ತಂಡದೊಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಆಗಸ್ಟ್​ 3ರಂದು ಸುಮಾರು 3 ಗಂಟೆಗಳ ಕಾಲ ನಡೆದ ಆಪರೇಷನ್​ ಯಶಸ್ವಿಯಾಗಿರುವುದಾಗಿ ಆಸ್ಪತ್ರೆಯ ಸೂಪರಿಂಟೆಂಡೆಂಟ್​ ಡಾ. ಐಸಿಲ್ಡಾ ಸಂಗ್ಮಾ ತಿಳಿಸಿದ್ದಾರೆ.

    ಇದನ್ನೂ ಓದಿ: ಟ್ರಾವೆಲ್ ಏಜೆಂಟ್ ಆತ್ಮಹತ್ಯೆಗೂ ವಿದ್ಯಾರ್ಥಿ ವೀಸಾಗೂ ಏನು ಸಂಬಂಧ? ಆತ್ಮಹತ್ಯೆ ಪತ್ರದಲ್ಲಿತ್ತು ನಾಲ್ವರ ಹೆಸರು

    ಅಂದಹಾಗೆ ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 24 ಕೆ.ಜಿ ತೂಕದ ಗಡ್ಡೆಯನ್ನು ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಸದ್ಯ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ವೈದ್ಯರ ನಿಗಾದಲ್ಲಿ ಇಡಲಾಗಿದೆ. ತಗೆಯಲಾಗಿರುವ ಗಡ್ಡೆಯು ಕ್ಯಾನ್ಸರ್​ಕಾರಕವಾ? ಎಂದು ತಿಳಿಯಲು ರೋಗಪತ್ತೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಂಗ್ಮಾ ಮಾಹಿತಿ ನೀಡಿದರು.

    ಆಪರೇಷನ್​ ವೇಳೆ ವೈದ್ಯರೊಬ್ಬರು ರೋಗಿಗೆ ರಕ್ತದಾನ ಕೂಡ ಮಾಡಿದ್ದಾರೆ. ಅಲ್ಲದೆ, ಕೆಲ ಸಮುದಾಯದ ಸದಸ್ಯರು ಮಹಿಳೆಯ ಆಪರೇಷನ್​ಗೆ ಆರ್ಥಿಕ ಸಹಾಯ ನೀಡಲು ಮುಂದೆ ಬರುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದು, ಈ ನಡೆಯನ್ನು ವೆಸ್ಟ್​ ಗಾರೋ ಹಿಲ್ಸ್​ ಜಿಲ್ಲಾಧಿಕಾರಿ ರಾಮ್​ ಸಿಂಗ್​ ಶ್ಲಾಘಿಸಿದ್ದಾರೆ.

    ಇದೇ ಅಲ್ಲದೆ, ತುರಾ ಆಸ್ಪತ್ರೆಯ ಸಿಬ್ಬಂದಿಯುವ ಮಹಿಳೆಯ ಹೊಟ್ಟೆಯಿಂದ 24 ಕೆ.ಜಿ ತೂಕದ ಗಡ್ಡೆಯನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಡಾ. ವಿನ್ಸ್​ ಮೊಮಿನ್​ ಮತ್ತು ಯಶಸ್ವಿ ಆಪರೇಷನ್​ನಲ್ಲಿ ತೊಡಗಿಕೊಂಡಿದ್ದ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತಾ, ರೋಗಿಯ ಶೀಘ್ರ ಚೇತರಿಕೆ ಪಾರ್ಥಿಸುತ್ತೇನೆಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಪ್ರಶಂಸಿಸಿದ್ದಾರೆ. (ಏಜೆನ್ಸೀಸ್​)

    ಸ್ವರ್ಗದಲ್ಲಿರೋ ಕನ್ಯೆಯರಿಗಾಗಿ ಒಳಉಡುಪು ಧರಿಸಿದ್ರಾ ಐಸಿಸ್​ ಉಗ್ರರು?: ಫ್ಯಾಕ್ಟ್​ಚೆಕ್​ನಲ್ಲಿ ನಿಜಾಂಶ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts