More

    ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸಿದ್ರೆ 1 ವರ್ಷ ಜೈಲು ಶಿಕ್ಷೆ ಜೊತೆಗೆ ಬೀಳುತ್ತೆ ಭಾರಿ ದಂಡ!

    ಜಕಾರ್ತ: ಮದುವೆ(Marriage)ಗೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗುವವರನ್ನು ಶಿಕ್ಷಿಸುವ ಸಲುವಾಗಿ ಇಂಡೋನೇಷ್ಯಾ (Indonesia) ಸಂಸತ್ತು ಹೊಸ ಕ್ರಿಮಿನಲ್​ ಕೋಡ್ (New criminal code)​ ಜಾರಿಗೆ ತರಲು ಮುಂದಾಗಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದವರು ಒಂದು ವರ್ಷದವರೆಗೆ ಜೈಲು ಶಿಕ್ಷೆ (Punishment)ಗೆ ಗುರಿಯಾಗಲಿದ್ದಾರೆ.

    ಮುಂದಿನ ದಿನಗಳಲ್ಲಿ ಕ್ರಿಮಿನಲ್​ ಕೋಡ್ (New criminal code)​ ಕರಡು, ಇಂಡೋನೇಷ್ಯಾ ಸಂಸತ್ತಿನಲ್ಲಿ ಅಂಗೀಕಾರವಾಗುವ ನಿರೀಕ್ಷೆ ಇದೆ. ಪತಿ ಅಥವಾ ಪತ್ನಿಯಲ್ಲದ ವ್ಯಕ್ತಿಗಳ ಜೊತೆ ಸಂಭೋಗದಲ್ಲಿ ತೊಡಗಿದರೆ, ವ್ಯಭಿಚಾರದ ಅಡಿಯಲ್ಲಿ ಗರಿಷ್ಠ 1 ವರ್ಷ ಜೈಲು ಶಿಕ್ಷೆ ಅಥವಾ ವರ್ಗ II ರ ಅಡಿಯಲ್ಲಿ ಗರಿಷ್ಠ ದಂಡವನ್ನು ವಿಧಿಸಲಾಗುತ್ತದೆ ಎಂದು ಆರ್ಟಿಕಲ್​ 413, ಪ್ಯಾರಾಗ್ರಾಫ್ 1ರಲ್ಲಿ ಉಲ್ಲೇಖಿಸಲಾಗಿದೆ. ಸಂತ್ರಸ್ತ ಅಥವಾ ಸಂತ್ರಸ್ತೆ ದೂರು ನೀಡಿದ ಬಳಿಕ ಈ ಕಾನೂನು ಅನ್ವಯವಾಗದೆ. ಅಲ್ಲದೆ, ಮದುವೆಯಾಗದ ಮಕ್ಕಳ ವಿರುದ್ಧ ಪಾಲಕರು ವಿವಾಹಪೂರ್ವ ಲೈಂಗಿಕ ಸಂಬಂಧದ ಬಗ್ಗೆ ದೂರು ನೀಡಿದರೆ, ಕ್ರಮ ಕೈಗೊಳ್ಳಲಾಗುತ್ತದೆ.

    ಟ್ರಯಲ್ ಕೋರ್ಟ್‌ನಲ್ಲಿ ಪರೀಕ್ಷೆ ಪ್ರಾರಂಭವಾಗದಿರುವವರೆಗೆ ದೂರುಗಳನ್ನು ಹಿಂಪಡೆಯಲು ಅವಕಾಶವಿದೆ ಎಂದು ಆರ್ಟಿಕಲ್ 144 ಹೇಳುತ್ತದೆ. ಮೂರು ವರ್ಷಗಳ ಹಿಂದೆಯೇ ಮಸೂದೆಯನ್ನು ಮಂಡಿಸಬೇಕಾಗಿತ್ತು. ಆದರೆ, ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿತ್ತು. ಇದೀಗ ಮತ್ತೊಮ್ಮೆ ಜಾರಿಗೆ ತರುವ ಪ್ರಯತ್ನಕ್ಕೆ ಮುಂದಾಗಿದ್ದು, ಮತ್ತೆ ಪ್ರತಿಭಟನೆಯ ಬಿಸಿ ತಟ್ಟುವ ಸಾಧ್ಯತೆ ಇದೆ.

    ಇಂಡೋನೇಷ್ಯಾದ ಮೌಲ್ಯಗಳಿಗೆ ಅನುಗುಣವಾಗಿ ಕ್ರಿಮಿನಲ್ ಕೋಡ್ ಅನ್ನು ಹೊಂದಲು ನಾವು ಹೆಮ್ಮೆಪಡುತ್ತೇವೆ ಎಂದು ಇಂಡೋನೇಷ್ಯಾದ ಉಪ ಕಾನೂನು ಸಚಿವ ಎಡ್ವರ್ಡ್ ಒಮರ್ ಷರೀಫ್ ಹಿಯಾರಿಜ್ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

    ನವೆಂಬರ್‌ನಲ್ಲಿ ಜಕಾರ್ತಾದ ಸೆನಾಯನ್‌ನ ಸಂಸತ್ತಿನ ಸಂಕೀರ್ಣದಲ್ಲಿ ಕಾನೂನು ಮತ್ತು ಮಾನವ ಹಕ್ಕುಗಳ ಉಪ ಮಂತ್ರಿ ಮತ್ತು ಇಂಡೋನೇಷ್ಯಾದ ಸಂಸತ್ತಿನ ಕಮಿಷನ್ III ರ ನಡುವಿನ ಸಭೆಯ ನಂತರ ಈ ಬೆಳವಣಿಗೆ ಕಂಡುಬಂದಿದೆ.

    ಈಗಾಗಲೇ ಅಧ್ಯಕ್ಷರು ಅಥವಾ ರಾಜ್ಯ ಸಂಸ್ಥೆಗಳನ್ನು ಅವಮಾನಿಸುವುದು ಮತ್ತು ಇಂಡೋನೇಷ್ಯಾದ ರಾಜ್ಯ ಸಿದ್ಧಾಂತಕ್ಕೆ ವಿರುದ್ಧವಾದ ಯಾವುದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಹಾಗೂ ಮದುವೆಯ ಮೊದಲು ಸಹಬಾಳ್ವೆಯನ್ನು ಸಹ ಇಂಡೋನೇಷ್ಯಾದಲ್ಲಿ ನಿಷೇಧಿಸಲಾಗಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ-ಬಹುಸಂಖ್ಯಾತ ರಾಷ್ಟ್ರವಾದ ಇಂಡೋನೇಷ್ಯಾ, ಸ್ಥಳೀಯ ಮಟ್ಟದಲ್ಲಿ ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು LGBT ಜನರ ವಿರುದ್ಧ ತಾರತಮ್ಯ ಮಾಡುವ ನೂರಾರು ನಿಯಮಾವಳಿಗಳನ್ನು ಹೊಂದಿದೆ.

    ಹೊಸ ಕ್ರಿಮಿನಲ್ ಕೋಡ್ ಅನ್ನು ಅಂಗೀಕರಿಸಿದರೆ, ಇಂಡೋನೇಷಿಯಾದ ನಾಗರಿಕರಿಗೆ ಮತ್ತು ವಿದೇಶಿಯರಿಗೆ ಸಮಾನವಾಗಿ ಅನ್ವಯಿಸುತ್ತದೆ. ಹೊಸ ನಿಯಮಗಳು ಪ್ರವಾಸಿ ಮತ್ತು ಹೂಡಿಕೆ ತಾಣವಾಗಿರುವ ಇಂಡೋನೇಷ್ಯಾದ ಮೇಲೆ ಪರಿಣಾಮ ಬೀರಬಹುದು ಎಂದು ವ್ಯಾಪಾರ ಸಂಘಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿವೆ. (ಏಜೆನ್ಸೀಸ್​)

    ತಮಿಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ಮೊಬೈಲ್​ ಬ್ಯಾನ್! ಮದ್ರಾಸ್​ ಹೈಕೋರ್ಟ್ ಆದೇಶ, ಕಾರಣ ಹೀಗಿದೆ….

    ಮುದ್ದಿನ ನಾಯಿಗೆ ಅದ್ಧೂರಿ ಬರ್ತಡೇ! ಬಂದ ಅತಿಥಿಗಳಿಂದ 3 ಚಿನ್ನದ ಲಾಕೆಟ್ ಸೇರಿದಂತೆ ಭರ್ಜರಿ ಗಿಫ್ಟ್​

    ಚಲಿಸುತ್ತಿದ್ದ ರೈಲಿನ ಕಿಟಕಿಯಿಂದ ತೂರಿಬಂತು ಕಬ್ಬಿಣದ ರಾಡ್: ಕುತ್ತಿಗೆಗೆ ಚುಚ್ಚಿ ಪ್ರಯಾಣಿಕ ಸಾವು​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts