More

    ಟಿಕೆಟ್​ ಮೇಲಿನ ಇಂಧನ ಶುಲ್ಕ ತೆಗೆದ ಇಂಡಿಗೊ

    ನವದೆಹಲಿ: ಭಾರತದ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆ ಇಂಡಿಗೋ, ವಿಮಾನಯಾನ ಟರ್ಬೈನ್​ ಇಂಧನ (ಎಟಿಎಫ್​) ಬೆಲೆಗಳಲ್ಲಿನ ಇತ್ತೀಚಿನ ಇಳಿಕೆಯಿಂದಾಗಿ ತಣವೇ ಜಾರಿಗೆ ಬರುವಂತೆ ಇಂಧನ ಶುಲ್ಕ ತೆಗೆದಿರುವುದಾಗಿ ಗುರುವಾರ ತಿಳಿಸಿದೆ. ಇದರಿಂದ ವಿಮಾನಯಾನ ಟಿಕೆಟ್​ ದರ ಕಡಿಮೆಯಾಗಲಿದೆ ಎನ್ನಲಾಗಿದೆ.

    ಇಂಡಿಗೋ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರ್ಗಗಳಿಗೆ ಅನ್ವಯವಾಗುವ ಇಂಧನ ಶುಲ್ಕವನ್ನು ತೆಗೆದುಹಾಕಿದೆ. ಎಟಿಎಫ್​ ಬೆಲೆಗಳಲ್ಲಿ ಏರಿಕೆಯಾದ ನಂತರ ಇಂಧನ ಶುಲ್ಕವನ್ನು 2023 ಅಕ್ಟೋಬರ್​ 06 ರಂದು ಪರಿಚಯಿಸಲಾಯಿತು ಎಂದು ಏರ್​ಲೈನ್​ನ ವಕ್ತಾರರು ತಿಳಿಸಿದ್ದಾರೆ.

    ಎಟಿಎಫ್​ ಬೆಲೆಗಳ ಸ್ವರೂಪವನ್ನು ಪರಿಗಣಿಸಿ, ಬೆಲೆಗಳು ಅಥವಾ ಮಾರುಕಟ್ಟೆ ಪರಿಸ್ಥಿತಿಗಳಲ್ಲಿನ ಯಾವುದೇ ಬದಲಾವಣೆಗೆ ಪ್ರತಿಕ್ರಿಯಿಸಲು ದರಗಳನ್ನು ಸರಿಹೊಂದಿಸುವುದನ್ನು ಮುಂದುವರಿಸುವುದಾಗಿ ಏರ್​ಲೈನ್ಸ್​ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts