More

    ಪ್ರಯಾಣಿಕರಿಗೆ ‘ಇಂಡಿಗೋ’ ಶಾಕ್​..ವಿಮಾನ ಸೀಟು ಆಯ್ಕೆ ಶುಲ್ಕ ಏರಿಕೆ!

    ನವದೆಹಲಿ: ಇಂಡಿಗೋ ವಿಮಾನಗಳಲ್ಲಿ ಹೆಚ್ಚು ಲೆಗ್ ರೂಮ್ ಹೊಂದುವ ಮೊದಲು ಸೀಟ್‌ಗಳ (ಸೀಟ್ ಫ್ರಂಟ್ ರೋಆಯ್ಕೆಗೆ )2ಸಾವಿರ ರೂ.ವರೆಗೆ ಖರ್ಚು ಮಾಡಬೇಕಾಗುತ್ತದೆ. ಅಷ್ಟರಮಟ್ಟಿಗೆ ವಿಮಾನಯಾನ ಸಂಸ್ಥೆ ದರ ಏರಿಕೆ ಮಾಡುವ ನಿರ್ಧಾರ ಕೈಗೊಂಡಿದೆ.

    ಇದನ್ನೂ ಓದಿ: ರಾಮಂದಿರಕ್ಕಾಗಿ 30ವರ್ಷ ಮೌನವ್ರತ.. ಜ.22ರಿಂದ ಮಾತನಾಡಲಿದ್ದಾರೆ ಜಾರ್ಖಾಂಡ್​ ಮಹಿಳೆ!

    ಇಂಡಿಗೋ ಕಂಪನಿಯು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವಿಧ ಸೇವೆಗಳಿಗೆ ನಮೂದಿಸಲಾದ ಶುಲ್ಕಗಳ ವಿವರಗಳನ್ನು ಉಲ್ಲೇಖಿಸಿದೆ. ಆ ವಿವರಗಳ ಪ್ರಕಾರ..

    232 ಆಸನಗಳ ಏರ್‌ಬಸ್ ಎ-321 ವಿಮಾನದಲ್ಲಿ ಮುಂಭಾಗದ ಸಾಲಿನ ಕಿಟಕಿ ಸೀಟಿನ ಬೆಲೆ 2ಸಾವಿರ ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಮಧ್ಯದ ಸೀಟಿಗೆ 1,500 ರೂ. ಶುಲ್ಕ ವಿಧಿಸಲಾಗುತ್ತದೆ. ಅದೇ 222-ಸೀಟ್ ಎ321, 186-ಸೀಟ್ ಎ320 ಮತ್ತು 180-ಸೀಟ್ ಎ320 ಗೆ ಅದೇ ದರಗಳು ಅನ್ವಯಿಸುತ್ತವೆ. ಎಟಿಆರ್​ ವಿಮಾನಗಳಲ್ಲಿ ಆಸನಗಳನ್ನು ಆಯ್ಕೆ ಮಾಡಲು, ಹೆಚ್ಚುವರಿ 5ನೂರು ರೂ. ಪಾವತಿಸಬೇಕು.

    ವಿಮಾನಯಾನ ವಿಶ್ಲೇಷಕ ಅಮಿ ಜೋಶಿ ಅವರು ದರ ಏರಿಕೆಯನ್ನು ಖಚಿತಪಡಿಸಿದ್ದಾರೆ. ಇಂಡಿಗೋ ವಿಮಾನದಲ್ಲಿ ಹೆಚ್ಚುವರಿ ಲೆಗ್‌ರೂಮ್‌ನೊಂದಿಗೆ ಮುಂಭಾಗದ ಸಾಲಿನ ಆಸನಗಳನ್ನು ಆಯ್ಕೆ ಮಾಡುವ ದರವನ್ನು ಗರಿಷ್ಠ 2ಸಾವಿರ ರೂ.ವರೆಗೆ ಹೆಚ್ಚಿಸಿದೆ. ಮೊದಲು 1500 ರೂ. ಸೀಟು ಆಯ್ಕೆ ಶುಲ್ಕ ಹೆಚ್ಚಳದ ಬಗ್ಗೆ ಇಂಡಿಗೋ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

    ಹೃದಯಾಘಾತಕ್ಕೆ ಖ್ಯಾತ ಟಾಲಿವುಡ್​ ನಿರ್ಮಾಪಕ ಜಯದೇವ್ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts