More

    ಭಾರತದ ಅತಿ ಕಿರಿಯ ಬಿಲಿಯನೇರ್ ಈತ​! 27ನೇ ವಯಸ್ಸಲ್ಲಿ ಒಟ್ಟು ಆಸ್ತಿಯ ಮೊತ್ತ ಕೇಳಿದ್ರೆ ದಂಗಾಗೋದು ಖಚಿತ

    ನವದೆಹಲಿ: ಭಾರತವು ಮುಕೇಶ್​ ಅಂಬಾನಿ ಮತ್ತು ಗೌತಮ್​ ಅದಾನಿಯಂತಹ ನೂರಾರು ಬಿಲಿಯನೇರ್​ಗಳ ತವರು. ಅರ್ಪಣಾ ಮನೋಭಾವ ಮತ್ತು ಕಠಿಣ ಪರಿಶ್ರಮವು ಉದ್ಯಮದ ಹಾದಿಯಲ್ಲಿ ಯಶಸ್ಸು ದೊರಕಿಸಿಕೊಡುತ್ತದೆ. ಭಾರತೀಯ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿರುವಂತೆ ಹೊಸ ಹೊಸ ಮುಖಗಳು ಸಹ ಬಿಲಿಯನೇರ್​ ಪಟ್ಟಿಗೆ ಸೇರಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಪರ್ಲ್​ ಕಪೂರ್​ ಸೇರಿಕೊಂಡಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಈ ಕಪೂರ್​ ವಯಸ್ಸು ಕೇವಲ 27. ಉದ್ಯಮದ ಇತಿಹಾಸದಲ್ಲೇ ಅತಿ ಕಿರಿಯ ಬಿಲಿಯನೇರ್​ ಎಂಬ ಹೆಗ್ಗಳಿಕೆಗೆ ಕಪೂರ್​​ ಪಾತ್ರರಾಗಿದ್ದಾರೆ.

    ಕಪೂರ್​ ಅವರ ಈ ಅಧ್ಬುತ ಯಶಸ್ಸು Zyber 365 ಹೆಸರಿನ ಸ್ಟಾರ್ಟ್​ಅಪ್​ ಕಂಪನಿಯ ವೇಗದ ಬೆಳವಣಿಗೆಯ ಫಲಿತಾಂಶವಾಗಿದೆ. 2023ರ ಮೇ ತಿಂಗಳಲ್ಲಿ ಸ್ಥಾಪನೆಯಾದ Zyber 365 ಒಂದು Web3 ಮತ್ತು AI-ಆಧಾರಿತ ಆಪರೇಷನ್​ ಸಿಸ್ಟಮ್​ ಸ್ಟಾರ್ಟ್​ಅಪ್​ ಆಗಿದ್ದು, ಇದು ಚಿಲ್ಲರೆ ವಲಯವನ್ನು ಅಡ್ಡಿಪಡಿಸಿದ್ದು, ಮಾತ್ರವಲ್ಲದೆ ಮೂರೇ ತಿಂಗಳಲ್ಲಿ ಯೂನಿಕಾರ್ನ್​ ಸ್ಟೇಟಸ್​ ಪಡೆದಿದೆ. ಸ್ಟಾರ್ಟ್​ಅಪ್​ ಕಂಪನಿ ಒಂದು ಶತಕೋಟಿ ಡಾಲರ್​ಗೂ ಹೆಚ್ಚು ಮೌಲ್ಯವನ್ನು ಹೊಂದಿದ್ದರೆ ಅದನ್ನು ಯೂನಿಕಾರ್ನ್​ ಎಂದು ಕರೆಯಲಾಗುತ್ತದೆ.

    ಈ ಕಂಪನಿಯು ಲಂಡನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಗುಜರಾತಿನ ಅಹಮದಾಬಾದ್​ನಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತದೆ. 1.2 ಶತಕೋಟಿ ಡಾಲರ್​ (ಅಂದಾಜು 9,840 ಕೋಟಿ ರೂ.) ಮೌಲ್ಯವನ್ನು ಹೊಂದಿದ್ದು, ಭಾರತ ಮತ್ತು ಏಷ್ಯಾದ ಅತ್ಯಂತ ವೇಗದ ಯುನಿಕಾರ್ನ್ ಎಂಬ ಪ್ರಶಂಸೆಗೆ ಒಳಗಾಗಿದೆ. Zyber 365ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಪರ್ಲ್ ಕಪೂರ್, ಕಂಪನಿಯಲ್ಲಿ 90% ರಷ್ಟು ಷೇರುಗಳೊಂದಿಗೆ 1.1 ಶತಕೋಟಿ ಡಾಲರ್​ (9,129 ಕೋಟಿ ರೂ.) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

    ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾನಿಲಯದಿಂದ ಎಂಎಸ್‌ಸಿ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ (ಸಿಎಫ್‌ಎ ಪಾಥ್‌ವೇ) ಪದವೀಧರರಾಗಿರುವ ಕಪೂರ್, ವೆಬ್3 ತಂತ್ರಜ್ಞಾನದ ಕ್ಷೇತ್ರದಲ್ಲಿ ನಾವೀನ್ಯಕಾರರಾಗಿ ಗುರುತಿಸಿಕೊಂಡಿದ್ದಾರೆ. Zyber 365 ಕ್ಕಿಂತ ಮೊದಲು, ಪರ್ಲ್ ಕಪೂರ್ ಅವರು AMPM ಸ್ಟೋರ್‌ನಲ್ಲಿ ಹಣಕಾಸು ಸಲಹೆಗಾರರಾಗಿ ಮತ್ತು ಆಂಟಿಯರ್ ಸೊಲ್ಯೂಷನ್ಸ್‌ಗಾಗಿ ವ್ಯವಹಾರ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಕಪೂರ್​ ಅವರ ಉದ್ಯಮಶೀಲತೆಯ ಮನೋಭಾವವು 2022ರ ಫೆಬ್ರವರಿಯಲ್ಲಿ ಬಿಲಿಯನ್ ಪೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಲು ಕಾರಣವಾಯಿತು. (ಏಜೆನ್ಸೀಸ್​)

    MI ನಾಯಕತ್ವ ಬಿಕ್ಕಟ್ಟು; ಮತ್ತೊಂದು ಹಂತ ತಲುಪಿದ ರೋಹಿತ್​-ಹಾರ್ದಿಕ್​ ನಡುವಿನ ಕಿತ್ತಾಟ

    ‘ದಿಲ್ಬರೋ’ಗೆ ಡ್ಯಾನ್ಸ್ ಮಾಡಿದ ವಧು-ವರ: ಕಣ್ಣೀರು ಹಾಕಿದ ತಂದೆ..ವೀಡಿಯೊ ವೈರಲ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts