More

    ಕರೊನಾ ಲಸಿಕೆ ಕಾಯುವಿಕೆ ಅಂತ್ಯ: ಕೋವಿಶೀಲ್ಡ್​, ಕೋವಾಕ್ಸಿನ್​ ಬಳಕೆಗೆ ಅನುಮೋದನೆ

    ನವದೆಹಲಿ: ಕರೊನಾ ಲಸಿಕೆಗಾಗಿ ಕಾಯುತ್ತಿದ್ದವರಿಗೆ ಕೇಂದ್ರ ಸರ್ಕಾರ ಭಾನುವಾರ ಸಿಹಿ ಸುದ್ದಿಯನ್ನು ನೀಡಿದೆ. ಪುಣೆ ಮೂಲದ ಸೆರಂ ಇನ್ಸ್ಟಿಟ್ಯೂಟ್​ನ “ಕೋವಿಶೀಲ್ಡ್​” ಮತ್ತು ಭಾರತ್​ ಬಯೋಟೆಕ್​ನ “ಕೋವಾಕ್ಸಿನ್​” ಲಸಿಕೆಗಳು ಭಾರತದ ಡ್ರಗ್​ ಕಂಟ್ರೋಲರ್​ನಿಮದ​ ತುರ್ತುಪರಿಸ್ಥಿತಿಯ ಅನುಮೋದನೆಯನ್ನು ಪಡೆದುಕೊಂಡಿವೆ.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡ್ರಗ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ವಿಜಿ ಸೋಮಾನಿ ಎರಡು ಸಂಸ್ಥೆಗಳು ತಮ್ಮ ಲಿಸಿಕೆಗಳ ಟ್ರಯಲ್ ರನ್​ ಡಾಟಾವನ್ನು ಸಲ್ಲಿಸಿವೆ. ಎರಡು ಲಸಿಕೆಗಳ ನಿರ್ಬಂಧಿತ ಬಳಕೆಗೆ ಅನುಮತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ರಾತ್ರಿ ಕಾರು ಪಾರ್ಕ್​ ಮಾಡಿ ಬೆಳಗೆದ್ದು ನೋಡುವಷ್ಟರಲ್ಲಿ ದಂಪತಿಗೆ ಕಾದಿತ್ತು ಬಿಗ್​ ಶಾಕ್​!

    ಸುರಕ್ಷತೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಕಂಡುಬಂದರೂ ನಾವು ಯಾವುದಕ್ಕೂ ಅನುಮತಿಯನ್ನು ನೀಡುವುದಿಲ್ಲ. ಲಸಿಕೆಗಳು 110 ರಷ್ಟು ಸುರಕ್ಷಿತವಾಗಿವೆ. ಸಣ್ಣ ಜ್ವರ, ನೋವು ಮತ್ತು ಅಲರ್ಜಿಯಂತಹ ಅಡ್ಡಪರಿಣಾಮ ಬೀರಬಹುದು. ಯಾವುದೇ ಲಸಿಕೆ ಪಡೆದುಕೊಂಡರು ಇಂತಹ ಅಡ್ಡಪರಿಣಾಮಗಳು ಸಾಮಾನ್ಯ ಎಂದು ವಿಜಿ ಸೋಮಾನಿ ಹೇಳಿದರು.

    ಪುಣೆ ಮೂಲದ ಸೆರಂ ಇನ್ಸ್ಟಿಟ್ಯೂಟ್, 73,000ಕ್ಕೂ ಹೆಚ್ಚು ಭಾಗವಹಿಸುವವರ ಸುರಕ್ಷತೆ, ರೋಗನಿರೋಧಕ ಶಕ್ತಿ ಮತ್ತು ಪರಿಣಾಮಕಾರಿತ್ವದ ಡಾಟಾವನ್ನು ಸಲ್ಲಿಸಿದೆ ಮತ್ತು ಶೇಕಡ 70.42 ರಷ್ಟು ಪರಿಣಾಮಕಾರಿತ್ವವನ್ನು ಕಂಡುಹಿಡಿದಿದೆ. ದೇಶದಲ್ಲಿ 1,600 ಜನರ ಮೇಲೆ ಸಂಸ್ಥೆಯು 2 ಮತ್ತು 3 ನೇ ಹಂತದ ಪ್ರಯೋಗಗಳನ್ನು ನಡೆಸುತ್ತಿದೆ. ವಿದೇಶಗಳಲ್ಲಿ ನಡೆಸಿದ ಪ್ರಯೋಗಗಳ ಡಾಟಾವನ್ನು ಸಲ್ಲಿಸಿದೆ. ನಿರ್ಬಂಧಿತ ಬಳಕೆಗಾಗಿ ಶಿಫಾರಸು ಮಾಡಲಾಗಿದ್ದು, ಪ್ರಯೋಗಗಳು ಮುಂದುವರಿಯಲಿವೆ ಎಂದು ಡ್ರಗ್​ ಕಂಟ್ರೋಲರ್​ ತಿಳಿಸಿದೆ.

    ಇದನ್ನೂ ಓದಿ: ನಿರ್ಗತಿಕ ವೃದ್ಧೆಗೆ ಹೊಸ ಮನೆ ನಿರ್ಮಿಸಿಕೊಟ್ಟ ಎಸ್​ಐ: ಇವರ ಕತೆ ಕೇಳಿದ್ರೆ ನಿಜಕ್ಕೂ ಹೆಮ್ಮೆ ಪಡ್ತೀರಾ!

    ಇನ್ನು ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಪ್ರಯೋಗಗಳನ್ನು ನಡೆಸುತ್ತಿದೆ. 1 ಮತ್ತು 2ನೇ ಹಂತದ ಪ್ರಯೋಗಗಳನ್ನು ಸುಮಾರು 800 ವಿಷಯಗಳಲ್ಲಿ ನಡೆಸಲಾಗಿದ್ದು, ಲಸಿಕೆ ಸುರಕ್ಷಿತವಾಗಿದೆ ಮತ್ತು ದೃಢವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಫಲಿತಾಂಶ ತೋರಿಸಿಕೊಟ್ಟಿದೆ. ಮೂರನೇ ಹಂತದ ಪ್ರಯೋಗವನ್ನು ಭಾರತದಲ್ಲಿ 25,800 ಸ್ವಯಂಸೇವಕರಲ್ಲಿ ಪ್ರಾರಂಭಿಸಲಾಲಾಗಿದ್ದು, ಇಲ್ಲಿಯವರೆಗೆ 22,500 ಭಾಗವಹಿಸುವವರಿಗೆ ಲಸಿಕೆ ನೀಡಲಾಗಿದೆ ಎಂದು ಡ್ರಗ್​ ಕಂಟ್ರೋಲರ್​ ಮಾಹಿತಿ ನೀಡಿದೆ. (ಏಜೆನ್ಸೀಸ್​)

    ಮಾರಣಾಂತಿಕ ಎಬೋಲಾ ಪತ್ತೆಹಚ್ಚಿದ ವೈದ್ಯನಿಂದ ಇಡೀ ಮನುಕುಲವೇ ಬೆಚ್ಚಿಬೀಳುವಂತಹ ಎಚ್ಚರಿಕೆ!

    ಭೂಲೋಕದ ಸ್ವರ್ಗದ ದರ್ಶನ ಮಾಡಿರುವಿರಾ? ಇಲ್ಲಿದೆ ನೋಡಿ ಕಣ್ಮನ ಸೆಳೆಯುವ ವಿಡಿಯೋ…

    ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಪಿಎಸ್​ಐ ಮೃತದೇಹ ಪತ್ತೆ: ಅನುಮಾನ ಮೂಡಿಸಿದ ಡೆತ್​ನೋಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts