More

    ಭೂಲೋಕದ ಸ್ವರ್ಗದ ದರ್ಶನ ಮಾಡಿರುವಿರಾ? ಇಲ್ಲಿದೆ ನೋಡಿ ಕಣ್ಮನ ಸೆಳೆಯುವ ವಿಡಿಯೋ…

    ಗಡ್ವಾಲ್​ (ಉತ್ತರಾಖಂಡ): ಇಲ್ಲೇ ಸ್ವರ್ಗ, ಇಲ್ಲೇ ನರಕ ಮೇಲೆ ಎಲ್ಲಾ ಸುಳ್ಳು ಎನ್ನುತ್ತಾರೆ. ಸತ್ತ ಮೇಲೆ ಸ್ವರ್ಗ, ನರಕ ಇದೆಯೋ ನೋಡಿದವರಾರು? ಆದರೆ ಭೂಲೋಕದಲ್ಲಿಯೇ ಸ್ವರ್ಗವಿದೆ ಎನ್ನುವುದು ಬಹಳಷ್ಟು ಮಂದಿಗೆ ತಿಳಿದಿರಲಾರದು. ಭೂಲೋಕದ ಸ್ವರ್ಗ ಎಂದೇ ಬಿಂಬಿತವಾಗಿರುವುದು ಕೇದಾರನಾಥ.

    ಕೇದಾರನಾಥ ಮಂದಿರ (ಕೇದಾರನಾಥ ಮಂದಿರ) ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಭಾರತದ ಉತ್ತರಾಖಂಡ ಕೇದಾರನಾಥದಲ್ಲಿ ಮಂದಕಿನಿ ನದಿಯ ಸಮೀಪವಿರುವ ಗಡ್ವಾಲ್ ಹಿಮಾಲಯನ ವ್ಯಾಪ್ತಿಯಲ್ಲಿದೆ.

    ಈ ದೇವಸ್ಥಾನವು ಏಪ್ರಿಲ್ ಮತ್ತು ನವೆಂಬರ್ ತಿಂಗಳಿನೊಳಗೆ ತೆರೆದಿರುತ್ತದೆ (ಕಾರ್ತೀಕ ಪೂರ್ಣಿಮಾ – ಶರತ್ಕಾಲ ಹುಣ್ಣಿಮೆ). ಚಳಿಗಾಲದಲ್ಲಿ, ಕೇದಾರನಾಥ ದೇವಾಲಯದ ವಿಗ್ರಹಗಳು (ದೇವತೆಗಳು) ಉಖಿ ಮಠಕ್ಕೆ ತರಲಾಗುತ್ತದೆ ಮತ್ತು ಆರು ತಿಂಗಳು ಅಲ್ಲಿ ಪೂಜಿಸಲಾಗುತ್ತದೆ.

    ಭೂಲೋಕದ ಸ್ವರ್ಗದ ದರ್ಶನ ಮಾಡಿರುವಿರಾ? ಇಲ್ಲಿದೆ ನೋಡಿ ಕಣ್ಮನ ಸೆಳೆಯುವ ವಿಡಿಯೋ...

    ಇಲ್ಲೊಮ್ಮೆ ಭೇಟಿ ನೀಡಿದರೆ ಸ್ವರ್ಗಕ್ಕೆ ಹೋಗಿಬಂದ ಅನುಭವವಾಗುತ್ತದೆ ಎನ್ನುತ್ತಾರೆ ಈ ಸ್ಥಳಕ್ಕೆ ಭೇಟಿ ನೀಡಿರುವವರು. ಬದುಕಿರುವಾಗ ಒಮ್ಮೆ ಕೇದಾರನಾಥನ ದರುಶನ ಭಾಗ್ಯ ಪಡೆದವರೇ ಧನ್ಯರು ಎನ್ನಲಾಗುತ್ತದೆ. ಆದರೆ ಎಲ್ಲರಿಗೂ ಈ ಭಾಗ್ಯ ದಕ್ಕುವುದಿಲ್ಲವಲ್ಲ.
    ಈ ದೇವಸ್ಥಾನವನ್ನು ನೇರವಾಗಿ ರಸ್ತೆಯ ಮೂಲಕ ತಲುಪಲು ಸಾಧ್ಯವಿಲ್ಲ ಮತ್ತು ಗೌರಿಕುಂಡದಿಂದ ಸುಮಾರು 18 ಕಿಲೋಮೀಟರ್ (೧೧ ಮೈಲಿ) ಎತ್ತರದ ಚಾರಣದಿಂದ ತಲುಪಬೇಕು. ಇದು ಹಲವರಿಗೆ ಅಸಾಧ್ಯವಾಗಿರುವ ಮಾತು.

    ಇದೇ ಕಾರಣಕ್ಕೆ ಐಎಫ್​ಎಸ್​ ಅಧಿಕಾರಿ ಸುಶಾಂತ್​ ಅವರು ಕೇದಾರನಾಥನ ದರ್ಶನ ಭಾಗ್ಯವನ್ನು ಟ್ವಿಟರ್​ನಲ್ಲಿ ಕಲ್ಪಿಸಿದ್ದಾರೆ. ಭೂ ಲೋಕದ ಸ್ವರ್ಗಕ್ಕೆ ಒಮ್ಮೆ ಭೇಟಿ ನೀಡಿ ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ಇದೀಗ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.

    ಈ ದರ್ಶನ ಭಾಗ್ಯವನ್ನು ನೀವೂ ಪಡೆಯಿರಿ.

    ಅನಾರೋಗ್ಯದಿಂದ ಬಳಲುತ್ತಿರುವವರು ವಿಲ್‌ ಬರೆದರೆ ಅದು ಮಾನ್ಯವಾಗುತ್ತಾ?

    ಚಿನ್ನದ ಮೇಲೆ ಹೂಡಿಕೆ ಮಾಡಲು ಅದ್ಭುತ ಸಮಯ- ಆದರೆ ಇರಲಿ ಎಚ್ಚರ

    ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಆದರೂ ಪತ್ನಿ ಒದೀತಾಳೆ, ಹೊಡೀತಾಳೆ… ಏನು ಮಾಡಲಿ?

    ಭಾರತಕ್ಕೂ ಬಂತು ಲೈಟ್​ ಹೌಸ್​ ಪ್ರಾಜೆಕ್ಟ್​- ಪ್ರಧಾನಿ ಚಾಲನೆ: ಪ್ರತಿಯೊಬ್ಬರಿಗೂ ಮನೆ ಎಂದ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts