More

    ಶ‍್ರೀಹರಿಕೋಟಾಕ್ಕೂ ಕೋವಿಡ್ ಪ್ರವೇಶ – ಸೋಂಕು ಹರಡದಂತೆ ಕಠಿಣ ಇಸ್ರೋ ಮುಂಜಾಗ್ರತಾ ಕ್ರಮ

    ನೆಲ್ಲೂರು: ನಮ್ಮ ದೇಶದ ರಾಕೆಟ್ ಉಡಾವಣಾ ಕೇಂದ್ರ ಶ್ರೀಹರಿಕೋಟಾದ ಇಸ್ರೋ ಘಟಕದ ಉದ್ಯೋಗಿಗಳಿಗೂ ಕೋವಿಡ್‍ 19 ದೃಢಪಟ್ಟಿದ್ದು, ಸೋಂಕು ಹರಡದಂತೆ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಇಸ್ರೋ ತೆಗೆದುಕೊಂಡಿದೆ. ಕೋವಿಡ್ ‍ಸೋಂಕು ದೇಶದಲ್ಲಿ ಹರಡಲಾರಂಭಿಸಿ ಆರು ತಿಂಗಳ ನಂತರದಲ್ಲಿ ಇಸ್ರೋ ಕೇಂದ್ರಕ್ಕೆ ಇದು ಪ್ರವೇಶಿಸಿದೆ.

    ರಾಕೆಟ್ ಉಡಾವಣಾ ಕೇಂದ್ರದ ಇಬ್ಬರು ಉದ್ಯೋಗಿಗಳಿಗೆ ಸೋಂಕು ದೃಢಪಟ್ಟಿದೆ. ಅವರು ಆಂಧ‍್ರಪ್ರದೇಶದ ಸುಲ್ಲೂರುಪೆಟ್ಟಾದವರು. ಹುಟ್ಟೂರಿಗೆ ಹೋಗಿ ಹಿಂದಿರುಗಿದ್ದರು. ಬಹುತೇಕ ಅವರಿಗೆ ಅಲ್ಲಿಂದಲೇ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸತೀಶ್ ಧವನ್ ಸ್ಪೇಸ್ ಸೆಂಟರ್‍ನ ಬಹುತೇಕ ಉದ್ಯೋಗಿಗಳು ಸುಲ್ಲೂರುಪೆಟ್ಟಾದಿಂದಲೇ ಬರುತ್ತಿದ್ದಾರೆ. ಇದು ಕೇಂದ್ರದಿಂದ 18 ಕಿ.ಮೀ. ಅಂತರದಲ್ಲಿದೆ. ಸುಲ್ಲೂರುಪೆಟ್ಟಾ ಚೆನ್ನೈನ ಕೋಯೆಂಬೆಡು ಮಾರ್ಕೆಟ್‍ಗೆ ಸಮೀಪದಲ್ಲಿದೆ. ಅಲ್ಲಿಂದ ಸೋಂಕು ಈ ಕಡೆಗೆ ಹರಡಿರಬಹುದು. ಈ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.

    ಇದನ್ನೂ ಓದಿ: ಪಿಒಕೆಯ ಸ್ಕದ್ರು ವಾಯುನೆಲೆಯಲ್ಲಿ ಇಳಿದಿವೆ ಪಾಕ್‍ನ ಜೆ-17 ಫೈಟರ್ ಜೆಟ್‍ಗಳು!

    ತಮ್ಮ ಇಬ್ಬರು ಉದ್ಯೋಗಿಗಳಿಗೆ ಕರೊನಾ ಪಾಸಿಟಿವ್ ದೃಢಪಟ್ಟ ಕಾರಣ ಇಸ್ರೋದ ಅಧಿಕೃತರು ಶ್ರೀಹರಿಕೋಟಾದ ಘಟಕ ಮತ್ತು ಸತೀಶ್ ಧವನ್ ಸ್ಪೇಸ್ ಸೆಂಟರನಲ್ಲಿ ಪೂರ್ಣಪ್ರಮಾಣದ ಸ್ಯಾನಿಟೈಸೇಷನ್ ನಡೆಸಿದ್ದಾರೆ. ಸದ್ಯ ಕೇಂದ್ರದಲ್ಲಿ ಕನಿಷ್ಠ ಉದ್ಯೋಗಿಗಳಷ್ಟೇ ಕೆಲಸ ಮಾಡುತ್ತಿದ್ದಾರೆ. ರಾಜ್ಯ ವಿಧಿಸಿರುವ ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಇಲ್ಲಿ ಪಾಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಶ್ರೀನಗರ ಜಿಲ್ಲೆಯಲ್ಲೀಗ ಸಕ್ರಿಯ ಉಗ್ರರೇ ಇಲ್ಲ: ಜಮ್ಮು-ಕಾಶ್ಮೀರ ಪೊಲೀಸ್ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts