More

    ಭಾರತದ ಜಿಡಿಪಿ ಶೇ.12.5ಕ್ಕೇರಿಕೆ: ಐಎಂಎಫ್ ಮುನ್ನೋಟ ವರದಿಯಲ್ಲಿ ಅಂದಾಜು

    ವಾಷಿಂಗ್ಟನ್: ಭಾರತದ ಆರ್ಥಿಕ ಬೆಳವಣಿಗೆ 2021-22ನೇ ಹಣಕಾಸು ವರ್ಷದಲ್ಲಿ ಶೇ. 12.5ರಷ್ಟು ಗಮನಾರ್ಹ ಆಗಿರಲಿದೆ. ಇದು ಚೀನಾದ ಆರ್ಥಿಕತೆಗಿಂತ ಬಲಿಷ್ಠವಾದುದಾಗಿರಲಿದೆ. ಕಳೆದ ಹಣಕಾಸು ವರ್ಷದಲ್ಲಿ ಕೋವಿಡ್ ಸಂಕಷ್ಟದ ನಡುವೆಯೇ ಪಾಸಿಟಿವ್ ಬೆಳವಣಿಗೆ ದರ ದಾಖಲಿಸಿರುವ ಪ್ರಮುಖ ಆರ್ಥಿಕ ವ್ಯವಸ್ಥೆ ಭಾರತದ್ದಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ತನ್ನ ಮುನ್ನೋಟ ವರದಿಯಲ್ಲಿ ತಿಳಿಸಿದೆ.

    ವಿಶ್ವ ಬ್ಯಾಂಕ್ ಜತೆಗಿನ ವಾರ್ಷಿಕ ಸಭೆಗೆ ಪೂರ್ವಭಾವಿಯಾಗಿ ತನ್ನ ವಾರ್ಷಿಕ ವರ್ಲ್ಡ್ ಇಕನಾಮಿಕ್ ಔಟ್​ಲುಕ್​ನಲ್ಲಿ ಈ ಅಂಶಗಳನ್ನು ಐಎಂಎಫ್ ಉಲ್ಲೇಖಿಸಿದೆ. ವಿಶ್ವ ಬ್ಯಾಂಕ್ ವರದಿ ಪ್ರಕಾರ, ಭಾರತೀಯ ಅರ್ಥವ್ಯವಸ್ಥೆ 2022ರಲ್ಲಿ ಶೇಕಡ 6.9 ಬೆಳವಣಿಗೆ ದಾಖಲಿಸಲಿದೆ. ಇದು ಐಎಂಎಫ್ ಅಂದಾಜಿಸಿದ್ದಕ್ಕಿಂತ ಅರ್ಧದಷ್ಟು ಕಡಿಮೆ ಇದೆ. ಚೀನಾದ ಅರ್ಥ ವ್ಯವಸ್ಥೆ 2020ರಲ್ಲಿ ಶೇಕಡ 2.3 ಬೆಳವಣಿಗೆ ದರ ದಾಖಲಿಸಿದರೆ, 2021ರಲ್ಲಿ ಶೇಕಡ 8.6 ಮತ್ತು 2022ರಲ್ಲಿ ಶೇಕಡ 5.6 ಬೆಳವಣಿಗೆ ದಾಖಲಿಸುವ

    ನಿರೀಕ್ಷೆ ಮೂಡಿಸಿದೆ. 2021 ಮತ್ತು 2022ರಲ್ಲಿ ಬಲಿಷ್ಠ ಪುನಶ್ಚೇತನವನ್ನು ನಾವು ಮುನ್ನಂದಾಜಿಸುತ್ತಿದ್ದೇವೆ. ಜಾಗತಿಕ ಅರ್ಥವ್ಯವಸ್ಥೆ ಈ ಎರಡು ವರ್ಷಗಳಲ್ಲಿ ಅನುಕ್ರಮವಾಗಿ ಶೇಕಡ 6 ಮತ್ತು ಶೇಕಡ 4.4 ಬೆಳವಣಿಗೆ ದರ ದಾಖಲಿಸಲಿದೆ ಎಂದು ಐಎಂಎಫ್​ನ ಮುಖ್ಯ ಅರ್ಥಶಾಸ್ತ್ರಜ್ಞೆ, ಭಾರತದ ಸಂಜಾತೆ ಗೀತಾ ಗೋಪಿನಾಥ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts