More

    RBI ಅಂದಾಜು ಮೀರಲಿದೆ ಭಾರತದ GDP ದರ: ಶೇ.7ಕ್ಕೆ ತಲುಪಬಹುದು ಅಂದ್ರು ಆರ್ಥಿಕ ತಜ್ಞರು

    ನವದೆಹಲಿ: ಭಾರತದ ಒಟ್ಟು ದೇಶಿಯ ಉತ್ಪನ್ನವು 2024ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಉತ್ತಮ ಆರ್ಥಿಕ ಮೂಲಭೂತ ಅಂಶಗಳ ಆಧಾರದ ಮೇಲೆ ಶೇ. 7ಕ್ಕೆ ಹೆಚ್ಚಾಗಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರ್​ಬಿಐನ ಅಕ್ಟೋಬರ್ 6ರ ಅಂದಾಜು ಶೇ. 6.5 ಅನ್ನು ಮೀರಲಿದೆ ಎಂದಿದ್ದಾರೆ.

    ಕಳೆದ ಮಂಗಳವಾರ ಬಿಸಿನೆಸ್ ಸ್ಟ್ಯಾಂಡರ್ಡ್ ಬಿಎಫ್​ಎಸ್​ಐ ಇನ್​ಸೈಟ್​ ಶೃಂಗಸಭೆಯಲ್ಲಿ ಮಾತನಾಡಿದ್ದ ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​, 2024ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯುವ ದರ ಮೇಲ್ಮುಖವಾಗುವ ಸಾಧ್ಯತೆಯಿದೆ ಎಂದಿದ್ದರು. ದೇಶದ ಆರ್ಥಿಕ ಚಟುವಟಿಕೆಗಳ ವೇಗ ಮತ್ತು ಕೆಲವು ಆರಂಭಿಕ ಸೂಚಕಗಳನ್ನು ಆಧರಿಸಿ, ಶಕ್ತಿಕಾಂತ್​ ದಾಸ್​ ಹೇಳಿಕೆ ನೀಡಿದರು. ಅದರ ಮರುದಿನವೇ ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು 1.72 ಲಕ್ಷ ಕೋಟಿ ರೂ.ಗೆ ಏರಿತು. ಇದು 2017ರ ಜುಲೈನಲ್ಲಿ ಆರಂಭವಾದ ಹೊಸ ಪರೋಕ್ಷ ತೆರಿಗೆಯ ನಂತರದ ಎರಡನೇ ಅತಿ ಹೆಚ್ಚು ಮಾಸಿಕ ಸಂಗ್ರಹವಾಗಿದೆ.

    ಇದರ ನಡುವೆ ನವೆಂಬರ್​ 30ರಂದು ಎರಡನೇ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್​ 2023)ದ ಅಧಿಕೃತ ಜಿಡಿಪಿ ಸಂಖ್ಯೆ ಬಿಡುಗಡೆಯಾಗಲಿದ್ದು, ಕುತೂಹಲ ಕೆರಳಿಸಿದೆ.

    2024ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕಗಾಗಿ ಭಾರತದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಯ ಬಗ್ಗೆ ಪ್ರಸ್ತುತ ಇರುವ ಆಶಾವಾದದ ಕಾರಣಗಳು ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಿನ ಆವರ್ತನ ಸೂಚಕಗಳನ್ನು ತೋರಿಸಿದೆ ಎಂದು ಅರ್ನ್ಸ್ಟ್ ಆ್ಯಂಡ್​ ಯಂಗ್ ಪಾಲಿಸಿ ಸಲಹೆಗಾರ ಡಿ.ಕೆ. ಶ್ರೀವಾಸ್ತವ ಹೇಳಿದ್ದಾರೆ. ಎರಡನೇ ತ್ರೈಮಾಸಿಕದಲ್ಲಿ ಕೈಗಾರಿಕಾ ಉತ್ಪಾದನೆಯ ಪ್ರಮುಖ ಸೂಚ್ಯಂಕ (ಐಐಪಿ) ಬೆಳವಣಿಗೆಯು ಸರಾಸರಿ 9.7%, ಒಟ್ಟು ಜಿಎಸ್​ಟಿ ಸಂಗ್ರಹಣೆಗಳು ಸರಾಸರಿ 1.62 ಲಕ್ಷ ಕೋಟಿ ರೂ., ಮತ್ತು ಪಿಎಂಐ ಉತ್ಪಾದನೆ ಮತ್ತು ಸೇವೆಗಳು ಸಹ ಕ್ರಮವಾಗಿ 57.9 ಮತ್ತು 61.1 ರ ಸರಾಸರಿಯಲ್ಲಿ ಹೆಚ್ಚಿನ ಮಟ್ಟವನ್ನು ತೋರಿಸಿದ್ದು, ಆರ್ಥಿಕ ಬೆಳವಣಿಗೆಯ ಸುಳಿವು ನೀಡಿವೆ.

    ವಿದ್ಯುತ್ ಬಳಕೆ, ಆಟೋಮೊಬೈಲ್ ಮಾರಾಟ ಮತ್ತು ಸಾಲದ ಬೆಳವಣಿಗೆಯು ಸಹ ಬಲವಾದ ಧನಾತ್ಮಕ ಸಂಕೇತಗಳನ್ನು ನೀಡಿದ್ದು, 2024ನೇ ಹಣಕಾಸು ವರ್ಷದ 2ನೇ ತ್ರೈಮಾಸಿಕದ ಬೆಳವಣಿಗೆಯು ಆರ್‌ಬಿಐನ ಹಿಂದಿನ ನಿರೀಕ್ಷೆಯ 6.5% ಅನ್ನು ಮೀರಿದರೆ ಆಶ್ಚರ್ಯ ಪಡಬೇಕಿಲ್ಲ ಎಂದ ಡಿ.ಕೆ. ಶ್ರೀವಾಸ್ತವ, ಒಟ್ಟಾರೆ ಹಣಕಾಸು ವರ್ಷಕ್ಕೆ, ಜಿಡಿಪಿ ಬೆಳವಣಿಗೆಯು ಸುಮಾರು 6.5% ಆಗಿರಬಹುದು, ಇದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್‌ನ ಶೇ. 6.3ಕ್ಕಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಹೇಳಿದರು.

    ಆರ್ಥಿಕ ಬೆಳವಣಿಗೆಯ ಸುಳಿವಿನ ನಡುವೆ ಭಾರತವು ಈಗಲೂ ಗಣನೆಗೆ ತೆಗೆದುಕೊಳ್ಳಬೇಕಾದ ಕೆಲವು ಅಪಾಯಕಾರಿ ಅಂಶಗಳಿವೆ. ಆವುಗಳೆಂದರೆ, ನೈಋತ್ಯ ಮಾನ್ಸೂನ್ ಕೊರತೆ ಮತ್ತು ಅಸಮವಾದ ಹರಡುವಿಕೆ, ಜಾಗತಿಕ ಕಚ್ಚಾ ಬೆಲೆಗಳ ಚಂಚಲತೆ ಮತ್ತು ಪ್ರಸ್ತತ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳಿಂದಾಗಿ ಕೆಲವು ಪೂರೈಕೆ ಅಡ್ಡ ಅಡಚಣೆಗಳು ಉಂಟಾಗುತ್ತದೆ. ಆದಾಗ್ಯೂ ಭಾರತವು ತನ್ನ ದೊಡ್ಡ ಆರ್ಥಿಕತೆಗಳನ್ನು ಸ್ಪಷ್ಟವಾದ ಅಂತರದಿಂದ ಮೀರಿಸುತ್ತದೆ ಎಂಬುದು ಖಚಿತವಾಗಿದ ಎಂದು ಡಿ.ಕೆ. ಶ್ರೀವಾಸ್ತವ ಹೇಳಿದರು.

    ಕನ್ಸಲ್ಟೆನ್ಸಿ ಸಂಸ್ಥೆ ಪ್ರಿಮಸ್ ಪಾರ್ಟ್‌ನರ್ಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ನಿಲಯ ವರ್ಮ ಮಾತನಾಡಿ, ತ್ರೈಮಾಸಿಕದಲ್ಲಿ ಬಲವಾದ ಜಿಡಿಪಿ ಬೆಳವಣಿಗೆಯು ಆಶ್ಚರ್ಯವೇನಿಲ್ಲ. ಹೆಚ್ಚಿನ ಆವರ್ತನ ಸೂಚಕಗಳು ಹಸಿರು ಬಣ್ಣದಲ್ಲಿವೆ. ಐಐಪಿ 8-12% ಹೆಚ್ಚಾಗಿದೆ, ಪಿಎಂಐ ಸುಮಾರು 58 ಪ್ರಬಲ ವಿಸ್ತರಣೆಯನ್ನು ಸೂಚಿಸುತ್ತದೆ, ಎಸ್​ಬಿಐ ಬ್ಯಾಂಕಿಂಗ್ 19% ಬೆಳವಣಿಗೆಯನ್ನು ತೋರಿಸುತ್ತಿದೆ ಮತ್ತು ಆಟೋಮೊಬೈಲ್ ಮಾರಾಟವು ತಮ್ಮ ಐತಿಹಾಸಿಕ ಎತ್ತರದಲ್ಲಿದೆ ಎಂದರು. (ಏಜೆನ್ಸೀಸ್​)

    ಬಿಹಾರದ ಮೇಕ್​ ಇನ್​ ಇಂಡಿಯಾ ಯಶೋಗಾಥೆ: ಸ್ಥಳೀಯ ಸಮುದಾಯಗಳ ಜೀವನಾಡಿಯಾದ ಲೋಕೋ ಕಾರ್ಖಾನೆ

    ತೀವ್ರ ಹದಗೆಟ್ಟ ದೆಹಲಿ ಗಾಳಿ: ಆವರಿಸಿರುವ ಹೊಗೆಗೆ ಕೆಂಪುಕೋಟೆಯೂ ಕಣ್ಮರೆ, ಡ್ರೋನ್​ ಕ್ಯಾಮೆರಾದಲ್ಲಿ ಭೀಕರ ದೃಶ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts