More

    ಚೀನಾ ಸ್ಲೋಸ್ ಇಂಡಿಯಾ ಗ್ರೋಸ್; ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆಯೇ ಭಾರತ?

    ನವದೆಹಲಿ: ನೆರೆಯ ಚೀನಾ ದೇಶವು ಆರ್ಥಿಕವಾಗಿ ಭಾರತಕ್ಕಿಂತಲೂ ಬಲಾಢ್ಯ. ಜಾಗತಿಕವಾಗಿ ಆರ್ಥಿಕತೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನ ಚೀನಾದ್ದು. ಭಾರತ ಐದನೇ ಸ್ಥಾನದಲ್ಲಿದೆ. ದೇಶವೊಂದರ ಆರ್ಥಿಕ ಶಕ್ತಿ ಅಳೆಯುವ ಸಾಧನ ಜಿಡಿಪಿ (ಗ್ರಾಸ್​ ಡೊಮೆಸ್ಟಿಕ್​ ಪ್ರೊಡಕ್ಟ್​- ಒಟ್ಟು ದೇಶಿಯ ಉತ್ಪನ್ನ). ಅಂದರೆ, ಒಂದು ಹಣಕಾಸು ವರ್ಷದಲ್ಲಿ ಒಂದು ದೇಶದಲ್ಲಿ ತಯಾರಾಗಾಗುವ ಸರಕು ಹಾಗೂ ಸೇವೆಗಳ ಒಟ್ಟು ಮೊತ್ತ.

    ಪ್ರತಿ ವರ್ಷ ಜಿಡಿಪಿ ಹೆಚ್ಚಾಗುವುದನ್ನು ಜಿಡಿಪಿ ಬೆಳವಣಿಗೆ ದರ ಎನ್ನುತ್ತಾರೆ. ಜಿಡಿಪಿ ಬೆಳವಣಿಗೆ ದರದಲ್ಲಿ ಭಾರತವು ಚೀನಾವನ್ನು 2026ರ ವೇಳೆಗೆ ಹಿಂದಿಕ್ಕಲಿದೆ. ಹೀಗಂತ ಅಮೆರಿಕ ಮೂಲದ ರೇಟಿಂಗ್ ಸಂಸ್ಥೆಯಾದ ಎಸ್ & ಪಿ ಗ್ಲೋಬಲ್ ರೇಟಿಂಗ್ಸ್ ಹೇಳಿದೆ.

    2026ರ ವೇಳೆಗೆ ಚೀನಾದ ಜಿಡಿಪಿ ದರವು ಶೇ 4.6 ತಲುಪಿದರೆ, ಭಾರತದ ದರವು ಶೇ 7 ಕ್ಕೆ ಏರಲಿದೆ ಎಂದು ಅದು ಅಂದಾಜಿಸಿದೆ.

    “ಚೀನಾ ಸ್ಲೋಸ್ ಇಂಡಿಯಾ ಗ್ರೋಸ್” ಎಂಬ ಶೀರ್ಷಿಕೆಯ ವರದಿಯಲ್ಲಿ ಈ ಸಂಸ್ಥೆಯು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಬೆಳವಣಿಗೆಯ ಇಂಜಿನ್ ಚೀನಾದಿಂದ ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಬದಲಾಗಲಿದೆ ಎಂದು ನಿರೀಕ್ಷಿಸುತ್ತದೆ ಎಂದು ಹೇಳಿದೆ.

    “ನಾವು ಚೀನಾದ ಜಿಡಿಪಿ ಬೆಳವಣಿಗೆಯು 2024 ರಲ್ಲಿ 4.6 ಶೇಕಡಾಕ್ಕೆ (2023ರಲ್ಲಿ 5.4 ಶೇಕಡಾ), 2025 ರಲ್ಲಿ ಶೇಕಡಾ 4.8 ಕ್ಕೆ ಏರುತ್ತದೆ ಮತ್ತು 2026 ರಲ್ಲಿ ಶೇಕಡಾ 4.6 ಕ್ಕೆ ಮರಳುತ್ತದೆ ಎಂದು ನಾವು ಅಂದಾಜಿಸಿದ್ದೇವೆ. 2026 ರಲ್ಲಿ ಭಾರತ ದರವು ಶೇಕಡಾ 7.0 ತಲುಪುವುದನ್ನು ನಾವು ನೋಡುತ್ತೇವೆ. ವಿಯೆಟ್ನಾಂ, ಶೇ. 6.8 (ಪ್ರಸ್ತುತ ಶೇ. 4.9); ಫಿಲಿಪೈನ್ಸ್, ಶೇ. 6.4 (ಪ್ರಸ್ತುತ ಶೇ.5.4); ಮತ್ತು ಇಂಡೋನೇಷ್ಯಾ ಶೇಕಡಾ 5 ರಷ್ಟು ಸ್ಥಿರವಾಗಿ ಉಳಿಯಲಿದೆ ಎಂದು ಎಸ್ & ಪಿ ಹೇಳಿದೆ.

    ಎಸ್ & ಪಿ ಸೋಮವಾರ ಭಾರತದ ಜಿಡಿಪಿ ಬೆಳವಣಿಗೆ ದರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಮತ್ತು ಮುಂದಿನ ವರ್ಷದಲ್ಲಿ 6.4 ಪ್ರತಿಶತಕ್ಕೆ ವಿಸ್ತರಿಸಲಿದೆ ಎಂದು ಅಂದಾಜಿಸಿದೆ. 2025ಕ್ಕೆ ಇದು 6.9 ಶೇಕಡಾಕ್ಕೆ ಏರುತ್ತದೆ ಎಂದು ಅಂದಾಜಿಸಿದೆ, 2026 ರಲ್ಲಿ ಶೇ. 7 ರಷ್ಟು ಆಗಲಿದೆ ಎಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts