More

    ಸೇನೆ-ಅರಸೇನಾಪಡೆ ಘರ್ಷಣೆ; ಸೂಡಾನ್​ನಲ್ಲಿರುವ ಭಾರತೀಯರಿಗೆ ಮನೆಯಿಂದ ಹೊರಬಾರದಂತೆ ಸೂಚನೆ

    ಸುಡಾನ್​: ಸೇನಾಪಡೆ ಹಾಗೂ ಅರೆಸೇನಾಪಡೆ ನಡುವಿನ ಘರ್ಷಣೆಯಿಂದಾಗಿ ದಾಳಿ-ಪ್ರತಿದಾಳಿ ಆಗುತ್ತಿರುವ ಕಾರಣ ಭಾರತೀಯರು ದೇಶದ ಮಿಷನ್​ನಿಂದ ಆಶ್ರಯ ಪಡೆಯುವಂತೆ ಸರ್ಕಾರ ಸೂಚಿಸಿದೆ.

    ಕಳೆದ ಕೆಲವು ದಿನಗಳಿಂದ ಸುಡಾನ್​ನಲ್ಲಿ ಸೇನೆ ಹಾಗೂ ಅರೆಸೇನಾಪಡೆ ನಡುವೆ ಘರ್ಷಣೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರ ಸೂಚಿಸಿರುವ ತಾಣಗಳಲ್ಲಿ ಜನತೆಗೆ ಆಶ್ರಯ ಪಡೆಯುವಂತೆ ಸೂಚಿಸಿದೆ.

    ಮುನ್ನೆಚ್ಚರಿಕ ಕ್ರಮ ವಹಿಸುವಂತೆ ಸೂಚನೆ

    ಈ ಕುರಿತು ಇಂಡಿಯಾ​ ಇನ್​ ಸುಡಾನ್​ ಎಂಬ ಖಾತೆಯಿಂದ ಟ್ವೀಟ್​ ಮಾಡಲಾಗಿದ್ದು ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದ ಎಲ್ಲಾ ಭಾರತೀಯರು ಹೆಚ್ಚಿನ ಮುನ್ನೆಚ್ಚರಿಕ ಕ್ರಮ ವಹಿಸಿ.

    ತಕ್ಷಣವೇ ಜಾರಿಗೆ ಬರುವಂತೆ ಎಲ್ಲರೂ ಮನೆಯಲ್ಲಿ ಇರಬೇಕು ಮತ್ತು ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ನಿಲ್ಲಿಸಿ. ಎಲ್ಲರೂ ಶಾಂತವಾಗಿರಿ ಮತ್ತು ಮುಂದಿನ ಅಪ್ಡೇಟ್​ಗಾಗಿ ಕಾಯುತ್ತಿರಿ ಎಂದು ಟ್ವೀಟ್​ ಮಾಡಲಾಗಿದೆ.

    ಇದನ್ನೂ ಓದಿ: VIDEO| ಡೇಟಿಂಗ್​ ಮಾಡಲೆಂದೇ ಕೋಟಿ ರೂಪಾಯಿ ಖರ್ಚು ಮಾಡಿದ ಭೂಪ

    ಸೇನಾ-ಅರೆಸೇನಾಪಡೆ ನಡುವೆ ಘರ್ಷಣೆ

    ಸೇನಾ ನಾಯಕ ಅಬ್ದೆಲ್​ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೇನಾಪಡೆ ನಾಯಕ ಮೊಹಮ್ಮದ್ ಹಮ್ದಾನ್ ಡಾಗ್ಲೋ ನಡುವಿನ ಭಿನ್ನಾಬಿಪ್ರಾಯ ಸ್ಪೋಟಗೊಂಡಿದ್ದು ಇದು ಘರ್ಷನೆಯಾಗಿ ಮಾರ್ಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts