

ನವದೆಹಲಿ: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ದೊರೆತಿದ್ದು, ಮೊದಲ ದಿನವೇ ಭಾರತದ ಕ್ರೀಡಾಪಟುಗಳು ಪದಕಗಳ ಬೇಟೆಯಾಡಿದ್ದಾರೆ.
ಪುರುಷರ ಲೈಟ್ವೇಟ್ ಡಬಲ್ಸ್ ಸ್ಕಲ್ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶಿಸಿದ ಅರ್ಜುನ್ ಲಾಲ್, ಅರವಿಂದ್ ಸಿಂಗ್ ಅವರೊಂದಿಗೆ ಶ್ಲಾಘನೀಯ ಪ್ರದರ್ಶನವನ್ನು ನೀಡಿದರು. ಇವರು 6.28.18 ಸಮಯಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು.
ಇದಕ್ಕೂ ಮೊದಲು ಮಹಿಳೆಯರ ತಂಡವು 10 ಮೀಟರ್ ಏರ್ರೈಫಲ್ ಸ್ಫರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದೆ. ಭಾರತದ ಶೂಟರ್ಗಳಾದ ರಮಿತಾ, ಮೆಹುಲಿ ಘೋಷ್ ಮತ್ತು ಆಶಿ ಚೌಕ್ಸೆ ಈ ಸಾಧನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಗೆಲ್ಲುವ ಮೂಲಕ ಭಾರತ ತಂಡ ಐತಿಹಾಸಿಕ ದಾಖಲೆಯನ್ನು ಬರೆಯಿತು.
ಭಾರತದ ರೈಫಲ್ ತಂಡವು 1886 ಅಂಕಗಳಿಸಿ ಬೆಳ್ಳಿ ಪದಕ ಪಡೆದುಕೊಂಡಿತ್ತು. 1896.6 ಅಂಕ ಗಳಿಸುವ ಮೂಲಕ ಚೀನಾ ಚಿನ್ನದ ಪದಕವನ್ನು ಗೆದ್ದು ಬೀಗಿತ್ತು. 1880 ಅಂಕ ಗಳಿಸುವ ಮೂಲಕ ಮಂಗೋಲಿಯಾ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತ್ತು.
ಪುರುಷರ ರೋವಿಂಗ್ ಸ್ಪರ್ಧೆಯಲ್ಲಿ ಭಾರತದ ಬಾಬು ಲಾಲ್ಯಾದವ್ ಹಾಗೂ ಲೆಖ್ರಾಮ್ ಜೋಡಿ ಮೂರನೇ ಸ್ಥಾನ ಪಡೆದು ಕಂಚು ಗೆದ್ದುಕೊಂಡಿತ್ತು. ಈ ಜೋಡಿಯು ನಿಗದಿತ ಗುರಿಯನ್ನು 6:50:41 ನಿಮಿಷದಲ್ಲಿ ತಲುಪಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತ್ತು.