More

    ಭಾರತೀಯ ವಿದ್ಯಾರ್ಥಿನಿಗೆ ಯುಎಇ ಗೋಲ್ಡನ್ ವೀಸಾ !

    ದುಬೈ : ಭಾರತೀಯ ವಿದ್ಯಾರ್ಥಿಯೊಬ್ಬಳಿಗೆ ಯುನೈಟೆಡ್ ಅರಬ್ ಎಮಿರೆಟ್ಸ್​(ಯುಎಇ)ನ ಅತಿಅಪೇಕ್ಷಿತ ಗೋಲ್ಡನ್ ವೀಸಾ ಲಭಿಸಿದೆ. ಸಾಮಾನ್ಯವಾಗಿ ಪ್ರಮುಖ ಜಾಗತಿಕ ವ್ಯಕ್ತಿತ್ವ ಹೊಂದಿರುವವರಿಗೆ ಇಲ್ಲವೇ ಶ್ರೀಮಂತ ಹೂಡಿಕೆದಾರರಿಗೆ ಈ ಅವಕಾಶ ಮತ್ತು ಗೌರವವನ್ನು ನೀಡಲಾಗುತ್ತದೆ. ಆದರೆ, ಕೇರಳದ ತಸ್ನೀಮ್​ ಅಸ್ಲಂ ಎಂಬ ವಿದ್ಯಾರ್ಥಿನಿಗೆ ಅವಳ ಶೈಕ್ಷಣಿಕ ಪ್ರತಿಭೆಯನ್ನು ಗುರುತಿಸಿ ಪ್ರದಾನಿಸಲಾಗಿದೆ.

    ‘ಅಸಾಧಾರಣ ವಿದ್ಯಾರ್ಥಿ’ ಎಂಬ ಕ್ಯಾಟಗರಿಯಲ್ಲಿ 10 ವರ್ಷಗಳ ಗೋಲ್ಡನ್ ವೀಸಾ ಲಭಿಸಿರುವ ತಸ್ನೀಂಗೆ, 2031 ರವರೆಗೆ ಯಾವುದೇ ಪ್ರಾಯೋಜಕತ್ವವಿಲ್ಲದೆ ದುಬೈನಲ್ಲಿ ನೆಲೆಸುವ ಅವಕಾಶ ನೀಡಲಾಗಿದೆ. ಶಾರ್ಜಾದ ಅಲ್​ ಖಾಸಿಮಿಯ ಯೂನಿವರ್ಸಿಟಿಯಲ್ಲಿ ಇಸ್ಲಾಮಿಕ್ ಶರಿಯ ಅಧ್ಯಯನ ಮಾಡಿದ ತಸ್ನೀಂ, 72 ದೇಶಗಳ ಅನೇಕ ವಿದ್ಯಾರ್ಥಿಗಳಿದ್ದ ತನ್ನ ತರಗತಿಗೆ ಮೊದಲನೇ ಸ್ಥಾನ ಗಳಿಸಿದ್ದಾಳೆ. ಅವಳ ಗ್ರೇಡ್​ ಪಾಯಿಂಟ್​ ಆ್ಯವರೇಜ್​ (ಜಿಪಿಎ) 4 ಕ್ಕೆ 3.94 ಆಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಇಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿರುವಿರಾ? ಬಿಇಎಲ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಆಟೋಮ್ಯಾಟಿಕ್​ ಆಗಿ ನವೀಕರಿಸಲ್ಪಡುವ 5 ಅಥವಾ 10 ವರ್ಷಗಳ ಗೋಲ್ಡನ್ ವೀಸಾವನ್ನು 2019 ರಿಂದ ಯುಎಇ ಸರ್ಕಾರ ಪ್ರದಾನಿಸುತ್ತಿದೆ. ಈ ದೀರ್ಘಕಾಲೀನ ವಸತಿ ವೀಸಾಗಳು ವಿದೇಶೀಯರು ನ್ಯಾಷನಲ್ ಸ್ಪಾನ್ಸರ್​ ಇಲ್ಲದೆ ಯುಎಇಯಲ್ಲಿ ನೆಲೆಸಲು, ಕೆಲಸ ಮಾಡಲು ಮತ್ತು ಅಧ್ಯಯನ ಕೈಗೊಳ್ಳಲು ಅವಕಾಶ ನೀಡುತ್ತವೆ. ಹೆಚ್ಚಾಗಿ ಯುಎಇಯಲ್ಲಿ ವಾಸಿಸುವ ಅವಕಾಶಕ್ಕೆ ಬದಲಿಯಾಗಿ ಭಾರೀ ಹೂಡಿಕೆ ಮಾಡುವಂಥ ಶ್ರೀಮಂತರಿಗೇ 10 ವರ್ಷದ ಗೋಲ್ಡನ್​ ವೀಸಾ ನೀಡಲಾಗುತ್ತದೆ.

    ಉದ್ಯಮಿಗಳಲ್ಲದೆ, ವೈದ್ಯರು, ಸಂಶೋಧಕರು, ವಿಜ್ಞಾನಿಗಳು ಮತ್ತು ಕಲಾವಿದರಂತಹ ವಿಶೇಷ ಪ್ರತಿಭೆಗಳಿರುವ ವ್ಯಕ್ತಿಗಳು ಸಹ ಈ ವೀಸಾಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅಸಾಧಾರಣ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಯುಎಇಯಲ್ಲಿ 5 ವರ್ಷಗಳ ರೆಸಿಡೆನ್ಸಿ ವೀಸಾಕ್ಕೆ ಅರ್ಹರಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಬಾಲಿವುಡ್​ ನಟ ಸಂಜಯ್ ದತ್​ಗೆ ಯುಎಇ ಸರ್ಕಾರ ಗೋಲ್ಡನ್ ವೀಸಾ ಪ್ರದಾನಿಸಿ ಗೌರವಿಸಿತ್ತು. (ಏಜೆನ್ಸೀಸ್)

    ‘ಮನ್​​ ಕಿ ಬಾತ್’​​ನಲ್ಲಿ ಬೆಂಗಳೂರಿನ ರೈಲ್ವೆ ಪೈಲೆಟ್​ಗೆ ಮೆಚ್ಚುಗೆ

    ಸೋಂಕು ಕಡಿಮೆ ಆಗ್ತಿದೆ, ಈಗ ಮೈಮರೆಯಬೇಡಿ : ಗೃಹ ಸಚಿವ ಬೊಮ್ಮಾಯಿ

    ‘ಫ್ರೆಂಡ್ಸ್​’ ಪುನರ್ಮಿಲನ ! 17 ವರ್ಷಗಳ ನಂತರ ಅದೇ ಸೆಟ್​ನಲ್ಲಿ ತಾರೆಗಳು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts