More

    ಅಮೆರಿಕದಲ್ಲಿ ‘ಇಂಡಿಯಾ ಪ್ಯಾಲೇಸ್’​ ರೆಸ್ಟೋರೆಂಟ್​ ಸಂಪೂರ್ಣ ಧ್ವಂಸ…

    ವಾಷಿಂಗ್ಟನ್​: ಅಮೆರಿಕದಲ್ಲಿರುವ ಭಾರತದ ರೆಸ್ಟೋರೆಂಟ್​ವೊಂದನ್ನು ಧ್ವಂಸ ಮಾಡಲಾಗಿದೆ. ಅಲ್ಲದೆ ಅದರ ಗೋಡೆಗಳ ಮೇಲೆ ದ್ವೇಷ ಸಾರುವ ಸಂದೇಶಗಳನ್ನು ಬರೆಯಲಾಗಿದೆ.

    ನ್ಯೂ ಮೆಕ್ಸಿಕೋದ ಸೇಂಟ್​ ಫೆ ಸಿಟಿಯಲ್ಲಿರುವ ಇಂಡಿಯಾ ಪ್ಯಾಲೇಸ್​ ಎಂಬ ರೆಸ್ಟೋರೆಂಟ್​ನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ. ಇದರಿಂದಾಗಿ ರೆಸ್ಟೋರೆಂಟ್ ಮಾಲೀಕನಿಗೆ 1,00,000 ಡಾಲರ್​​ಗಳಷ್ಟು ನಷ್ಟವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಸಿಖ್​ ಸಮುದಾಯದವರೋರ್ವರ ಮಾಲೀಕತ್ವದ ರೆಸ್ಟೋರೆಂಟ್​ ಇದಾಗಿತ್ತು. ಇದೀಗ ಸಂಪೂರ್ಣ ನಾಶವಾಗಿದೆ. ಅದರ ಗೋಡೆಗಳ ಮೇಲೆಲ್ಲ ದ್ವೇಷ ಪ್ರಚೋದಿಸುವ ವಾಕ್ಯಗಳನ್ನು ಬರೆಯಲಾಗಿದೆ ಎಂದು ಅಮೆರಿಕನ್​ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ, ಘಟನೆಯನ್ನು ಸಿಖ್​-ಅಮೆರಿಕನ್​ ಲೀಗಲ್​ ಡಿಫೆನ್ಸ್​ ಆ್ಯಂಡ್​ ಎಜ್ಯುಕೇಶನ್​ ಫಂಡ್​ (ಎಸ್​ಎಎಲ್​ಡಿಇಎಫ್​) ತೀವ್ರವಾಗಿ ಖಂಡಿಸಿದೆ.

    ಇಂಥ ದ್ವೇಷ, ಹಿಂಸಾತ್ಮಕ ಘಟನೆಯನ್ನು ಇಲ್ಲಿ ನಿರೀಕ್ಷೆ ಮಾಡಿರಲಿಲ್ಲ. ರೆಸ್ಟೋರೆಂಟ್ ಧ್ವಂಸ ಮಾಡಿದ ದುಷ್ಕರ್ಮಿಕಗಳ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಸ್​ಎಎಲ್​ಡಿಇಎಪ್​​​ನ ಕಾರ್ಯನಿರ್ವಾಹಕ ನಿರ್ದೇಶಕ ಹೇಳಿದ್ದಾರೆ. ಇದನ್ನೂ ಓದಿ: PHOTOS| ಬರ್ತಡೇ ಖುಷಿಯಲ್ಲಿರೋ ಜೊತೆ ಜೊತೆಯಲಿ ಖ್ಯಾತಿಯ ಮೀರಾ ನಿಜ ಜೀವನದಲ್ಲೂ ತುಂಬಾ ಬೋಲ್ಡ್​ !

    ರೆಸ್ಟೋರೆಂಟ್​ನ ಟೇಬಲ್​ಗಳು ಮುರಿಯಲ್ಪಟ್ಟಿವೆ. ಗಾಜಿನ ಸಾಮಗ್ರಿಗಳನ್ನೆಲ್ಲ ನೆಲಕ್ಕೆ ಎಸೆದು ಒಡೆಯಲಾಗಿದೆ. ಅಲ್ಲಿದ್ದ ದೇವಿಯ ಮೂರ್ತಿಯನ್ನೆಲ್ಲ ಹಾಳು ಮಾಡಲಾಗಿದೆ. ಕಂಪ್ಯೂಟರ್​ನ್ನು ಕಳವು ಮಾಡಲಾಗಿದೆ ಎಂದು ವರದಿಯಾಗಿದೆ.
    ತಮ್ಮ ರೆಸ್ಟೋರೆಂಟ್​​ನಲ್ಲಿ ಏನು ನಡೆಯಿತು ಎಂಬುದನ್ನು ಅದರ ಮಾಲೀಕ ಬಲ್​ಜಿತ್​ ಸಿಂಗ್​ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡಿಸಿ ಕಚೇರಿ ಎದುರಲ್ಲೇ ಜಿಪಂ ಸದಸ್ಯನನ್ನು ಕೊಚ್ಚಿದ ದುಷ್ಕರ್ಮಿಗಳು

    ಏಪ್ರಿಲ್​​ನಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಿಖ್​ ಅಮೆರಿಕನ್​ ಆಗಿರುವ ಲಖ್​ವಂತ್​ ಸಿಂಗ್​ ಎಂಬುವರ ಮೇಲೆ ತೀವ್ರ ಹಲ್ಲೆಯಾಗಿತ್ತು. ಎರಿಕ್​ ಬ್ರೀಮಾನ್​ ಎಂಬಾತ ಅವರಿಗೆ ಥಳಿಸಿದ್ದ. ನೀನು ನಿನ್ನ ದೇಶಕ್ಕೆ ವಾಪಸ್​ ಹೋಗು ಎಂದು ನಿಂದಿಸಿದ್ದ ಎಂಬುದಾಗಿ ಎಸ್​ಎಎಲ್​ಡಿಇಎಫ್​ ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಜೆಸಿಬಿ ಮಶಿನ್​ ಹೊತ್ತ ಟ್ರಕ್​ ಸಾಗುತ್ತಿತ್ತು…ಸೇತುವೆ ಕುಸಿದುಬಿತ್ತು; ಭಯಾನಕ ದೃಶ್ಯ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts