More

    ಆಸ್ಟ್ರೇಲಿಯಾದ ಮಾಸ್ಟರ್​ ಚೆಫ್ ಸ್ಪರ್ಧೆಯಲ್ಲಿ ಭಾರತ ಮೂಲದವನ ಜಯ!

    ಕ್ಯಾನ್ಬೆರಾ: ಬೇರೆಲ್ಲ ದೇಶಗಳ ಖಾದ್ಯಗಳಿಗಿಂತ ಭಾರತೀಯ ಖಾದ್ಯಗಳು ವಿಶೇಷ ಎನ್ನುವುದನ್ನು ದೇಶಿಗರು ಸೇರಿ ವಿದೇಶಿಗರೂ ಒಪ್ಪಿಕೊಳ್ಳುತ್ತಾರೆ. ಅದೇ ರೀತಿ ಇಲ್ಲಿನ ಅಡುಗೆಯ ಶೈಲಿಯೂ ಎಲ್ಲರಿಗಿಂತ ವಿಶೇಷವೇ. ಈ ವಿಶೇಷಗಳ ದೇಶದ ಮೂಲದ ವ್ಯಕ್ತಿಯೊಬ್ಬರು ಇದೀಗ ಆಸ್ಟ್ರೇಲಿಯಾದ ಮಾಸ್ಟರ್ ಚೆಫ್ ಸ್ಪರ್ಧೆಯಲ್ಲಿ ಜಯ ಸಾಧಿಸಿದ್ದಾರೆ.

    ಭಾರತ ಮೂಲದ ಜಸ್ಟಿನ್ ನಾರಾಯಣ್ ಆಸ್ಟ್ರೇಲಿಯಾ ಮಾಸ್ಟರ್ ಚೆಫ್ 13 ಸ್ಪರ್ಧೆಯಲ್ಲಿ ಭಾಗವಹಿಸಿ ಜಯ ಸಾಧಿಸಿದ್ದಾರೆ. ಟ್ರೋಫಿ ಹಿಡಿದಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆ ಖುಷಿಯನ್ನು ಹಂಚಿಕೊಂಡಿದ್ದಾರೆ. ಮಾಸ್ಟರ್ ಚೆಫ್ 13ರ ಫೈನಲ್ಸ್​ನಲ್ಲಿ ಕಿಶ್ವರ್ ಚೌಧರಿ ಮತ್ತು ಪೀಟ್ ಕ್ಯಾಂಪ್ಬೆಲ್ ಹೆಸರಿನ ಇಬ್ಬರು ಸ್ಪರ್ಧಿಗಳನ್ನು ಸೋಲಿಸಿರುವ ಖುಷಿಯನ್ನು ನೀವು ಅವರ ಮುಖದಲ್ಲಿ ಗಮನಿಸಬಹುದಾಗಿದೆ.

    ನಿಮ್ಮನ್ನು ನಂಬುವ ಜನರನ್ನು ಹುಡುಕಿಕೊಳ್ಳಿ. ನೀವೇ ನಿಮ್ಮ ಬಲವಾದ ಬೆಂಬಲವಾಗಿ. ಕಷ್ಟಪಟ್ಟು ಮತ್ತು ಆಶಾದಾಯಕವಾಗಿ ಹೋಗಿ ಆಗ ನೀವೇ ಆಶ್ಚರ್ಯ ಪಡುವಂತಾಗುತ್ತೀರಿ. ಇದನ್ನು ಓದುತ್ತಿರುವ ನಿಮ್ಮನ್ನೆಲ್ಲ ನಾನು ಪ್ರೀತಿಸುತ್ತೇನೆ ಎಂದು ನಾರಾಯಣ್ ಟ್ರೋಫಿ ಹಿಡಿದಿರುವ ಫೋಟೋಗಳೊಂದಿಗೆ ಖುಷಿ ಹಂಚಿಕೊಂಡಿದ್ದಾರೆ. ನಾರಾಯಣ್​ಗೆ ಟ್ರೋಫಿಯೊಂದಿಗೆ 2,50,000 ಡಾಲರ್ ಅಂದರೆ ಅಂದಾಜು 1.86 ಕೋಟಿ ರೂಪಾಯಿಯನ್ನು ಬಹುಮಾನವಾಗಿ ಕೊಡಲಾಗಿದೆ.

    ಇನ್ನೂ ವಿಶೇಷವೆಂದರೆ ಈ ಮಾಸ್ಟರ್ ಚೆಫ್ ಸ್ಪರ್ಧೆಯಲ್ಲಿ ನಾರಾಯಣ್ ಜತೆ ಇನ್ನೋರ್ವ ಭಾರತೀಯ ಮೂಲದ ವ್ಯಕ್ತಿ ಭಾಗವಹಿಸಿದ್ದರು. ಡಿಬಿಂಡರ್ ಚಿಬ್ಬರ್ ಹೆಸರಿನ ಭಾರತೀಯ ಮೂಲದ ವ್ಯಕ್ತಿ ಶೋ ಮೂಲಕ ಭಾರತೀಯರು ಹಾಗೂ ಆಸ್ಟ್ರೇಲಿಯಾದ ಜನರ ಮನಸ್ಸು ಗೆದ್ದಿದ್ದರು. ಫೈನಲ್ಸ್​ನಲ್ಲಿದ್ದ ಕಿಶ್ವರ್ ಕೂಡ ಭಾರತೀಯ ಖಾದ್ಯಗಳನ್ನು ಮಾಡಿ ತೀರ್ಪುಗಾರರ ಮನಸ್ಸನ್ನು ಕದ್ದಿದ್ದರು. (ಏಜೆನ್ಸೀಸ್)

    ಉತ್ತರಾಖಂಡದ ನಂತರ ಗೋವಾದ ಜನರಿಗೆ ಉಚಿತ ವಿದ್ಯುತ್ ಭರವಸೆ ನೀಡಿದ ಕೇಜ್ರಿವಾಲ್

    ದೀದಿ ನಾಡಿನ ಬೀಡಿ ಪ್ರಿಯರ ಬಾಯಲ್ಲಿ ಮೆಸ್ಸಿ ಮಾತು! ವೈರಲ್ ಆಯ್ತು ಮೆಸ್ಸಿ ಬೀಡಿ ಫೋಟೋ!

    ಜೈಲಲ್ಲಿ ಸಿಗಲಿದೆ ಬಿಸಿ ಬಿಸಿ ಚಿಕನ್ ಖಾದ್ಯ; ಹೇಗಾಗಲಿವೆ ಗೊತ್ತಾ ಮಹಾರಾಷ್ಟ್ರದ ಜೈಲುಗಳು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts