More

    ಪಾಕ್​ ಪಂದ್ಯಕ್ಕೂ ಮುನ್ನವೇ ಭಾರತದ ಬೌಲರ್​ಗಳ ಬಗ್ಗೆ ಮಾತನಾಡಿ ವಿವಾದದ ಕಿಡಿ ಹೊತ್ತಿಸಿದ ಅಫ್ರಿದಿ!

    ನವದೆಹಲಿ: ಭಾರತ ಆತಿಥ್ಯವಹಿಸಿರುವ ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಅ.14ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಸೆಣಸಾಡಲಿವೆ. ಇಂಡೋ-ಪಾಕ್​ ಅಂದಮೇಲೆ ಈ ಪಂದ್ಯದ ಮಹತ್ವವೇ ಬೇರೆ ಇರುತ್ತದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರೀಡಾ ಜಗತ್ತು ಎದುರು ನೋಡುತ್ತಿರುವ ಸಂದರ್ಭದಲ್ಲೇ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್​ ಅಫ್ರಿದಿ ಆಡಿರುವ ಮಾತೊಂದು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

    ಭಾರತ ಇದೀಗ ಬೌಲಿಂಗ್​ ಪವರ್​ಹೌಸ್​
    ಇತ್ತೀಚಿನ ದಿನಗಳಲ್ಲಿ ಭಾರತ ತಂಡದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಉತ್ತಮ ಸಮತೋಲನವನ್ನು ಕಂಡುಕೊಂಡಿದೆ. ಸುನಿಲ್​ ಗವಾಸ್ಕರ್​, ಸಚಿನ್​ ತೆಂಡೂಲ್ಕರ್​ ಮತ್ತು ವಿರಾಟ್​ ಕೊಹ್ಲಿಯಂತಹ ಪ್ರಸಿದ್ಧ ಬ್ಯಾಟಿಂಗ್​ ಲೆಜೆಂಡ್​ಗಳನ್ನು ಸೃಷ್ಟಿಸಿರುವ ಭಾರತ ಇದೀಗ ಬೌಲಿಂಗ್​ನಲ್ಲೂ ಸಮನಾದ ಸಾಮರ್ಥ್ಯವನ್ನು ಹೊಂದಿದೆ. ಜಸ್ಪ್ರೀತ್​ ಬೂಮ್ರಾ, ಮೊಹಮ್ಮದ್​ ಸಿರಾಜ್​ ಮತ್ತು ಮೊಹಮ್ಮದ್​ ಶಮಿಯಂತಹ ವಿಶ್ವದರ್ಜೆಯ ಬೌಲರ್​ಗಳನ್ನು ಹೊಂದಿದೆ. ಈ ಅದ್ಭುತ ಬದಲಾವಣೆಯನ್ನು ಆಹಾರ ಕ್ರಮಕ್ಕೆ ಹೋಲಿಕೆ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ಅಫ್ರಿದಿ ಹೇಳಿದ್ದೇನು?
    ಸ್ಪೋರ್ಟ್ಸ್​ ಶೋನಲ್ಲಿ ಭಾಗಿಯಾಗಿ ಮಾತನಾಡಿದ ಅಫ್ರಿದಿ, ಭಾರತ 1.4 ಬಿಲಿಯನ್​ ಜನಸಂಖ್ಯೆಯನ್ನು ಹೊಂದಿದೆ. ಹಲವು ವರ್ಷಗಳಿಂದ ಕ್ರಿಕೆಟ್​ನ ಗುಣಮಟ್ಟ ಸಹ ಬದಲಾಗಿದೆ. ಈ ಹಿಂದೆ ಅವರು ಉತ್ತರ ಬ್ಯಾಟರ್​ಗಳನ್ನು ಮಾತ್ರ ಸೃಷ್ಟಿಸುತ್ತಿದ್ದರು. ಆದರೆ, ಈಗ ಅತ್ಯುತ್ತಮ ಬ್ಯಾಟರ್ಸ್​ ಮತ್ತು ಬೌಲರ್​ಗಳನ್ನು​ ಸೃಷ್ಟಿಸುತ್ತಿದ್ದಾರೆ. ಆದಾಗ್ಯೂ ಅವರ ಬೌಲರ್​ಗಳು ಇದೀಗ ಮಾಂಸವನ್ನು ತಿನ್ನಲು ಆರಂಭಿಸಿದ್ದು, ಒಳ್ಳೆಯ ಬಲವನ್ನು ಗಳಿಸಿದ್ದಾರೆ ಎಂದು ಹೇಳಿದರು.

    ಅಫ್ರಿದಿ ಅವರ ಈ ಹೇಳಿಕೆ ಇದೀಗ ವಿವಾದವನ್ನು ಹುಟ್ಟುಹಾಕಿದೆ. ಮಾಂಸಹಾರಿಗಳು ಬಲಶಾಲಿಗಳು ಎಂಬರ್ಥದಲ್ಲಿ ಅಫ್ರಿದಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ.

    ನಾನ್​ವೆಜ್​ಗೆ ಕೊಹ್ಲಿ ಗುಡ್​ ಬೈ
    ಭಾರತದ ಮಾಜಿ ನಾಯಕ ಮತ್ತು ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ಅವರು ಆರೋಗ್ಯದ ಕಾಳಜಿಯ ಕಾರಣ 2018ರಲ್ಲಿ ಮಾಂಸಾಹಾರ ತ್ಯಜಿಸಿ, ಸಸ್ಯಾಹಾರಿ ಆಹಾರಕ್ರಮಕ್ಕೆ ಬದಲಾದರು. ಇದು ಕೂಡ ವಿವಾದವನ್ನು ಎಬ್ಬಿಸಿತ್ತು. ಆರೋಗ್ಯ ಸಮಸ್ಯೆಯೇ ತಮ್ಮ ಆಹಾರಕ್ರಮಕ್ಕೆ ಬದಲಾವಣೆಗೆ ಕಾರಣ ಎಂದು ಕೊಹ್ಲಿ ಬಹಿರಂಗಪಡಿಸಿದ್ದರು. ಮಾಂಸಾಹಾರಿಗಳು ಮಾತ್ರ ಬಲವಾದ ಸ್ನಾಯುಗಳನ್ನು ಹೊಂದಿರುತ್ತಾರೆ ಎಂಬ ಕಲ್ಪನೆಯನ್ನು ಕೊಹ್ಲಿ ನಿರಾಕರಿಸಿದರು ಮತ್ತು ಇದು ವಿಶ್ವದ ಅತಿದೊಡ್ಡ ಮಿಥ್ಯ ಎಂದು ಕರೆದರು.

    ತಳಮಟ್ಟದ ಕ್ರಿಕೆಟ್ ಮತ್ತು ನಾಯಕತ್ವಕ್ಕೆ ಕ್ರೆಡಿಟ್ ಕೊಟ್ಟ ಅಫ್ರಿದಿ
    ಭಾರತದಲ್ಲಿ ಕ್ರಿಕೆಟ್​ ಯಶಸ್ಸಿಗೆ ಅಫ್ರಿದಿ ಕಾರಣ ತಿಳಿಸಿದರು. ತಳಮಟ್ಟದ ಕ್ರಿಕೆಟ್ ಮೂಲಸೌಕರ್ಯ ಸುಧಾರಣೆ ಮತ್ತು ಉತ್ತಮ ನಾಯಕತ್ವಕ್ಕಾಗಿ ಭಾರತದ ಹೂಡಿಕೆಯು ಕ್ರಿಕೆಟ್ ಯಶಸ್ಸಿಗೆ ಕೊಡುಗೆ ನೀಡುವ ಅಂಶವಾಗಿದೆ ಎಂದರು. ಸೌರವ್​ ಗಂಗೂಲಿ, ಎಂ.ಎಸ್​. ಧೋನಿ ಮತ್ತು ರಾಹುಲ್​ ಡ್ರಾವಿಡ್​ ಅವರನ್ನು ಕೊಂಡಾಡಿದ ಅಫ್ರಿದಿ, ಭಾರತದ ಪ್ರತಿಭೆಗಳನ್ನು ಗುರುತಿಸಿರುವುದರಲ್ಲಿ ಅವರ ಪಾತ್ರವನ್ನು ನೆನೆದರು. ದೇಶೀಯ ಆಟಗಾರರು ಕ್ರೀಡಾ ಕ್ಷೇತ್ರದ ಉನ್ನತ ಸ್ಥಾನವನ್ನು ತಲುಪಲು ಏನು ಬೇಕು ಎಂದು ತಿಳಿದಿರುವ ರಾಹುಲ್ ದ್ರಾವಿಡ್‌ನಂತಹ ಆಟಗಾರನಿಗೆ ಇಡೀ ದೇಶೀಯ ವ್ಯವಸ್ಥೆಯನ್ನು ನೀಡುವ ಮೂಲಕ ಭಾರತ ತಮ್ಮ ತಳಮಟ್ಟದ ಕ್ರಿಕೆಟ್ ಅನ್ನು ಸುಧಾರಿಸಿದೆ. ಡ್ರಾವಿಡ್​ ಅವರು ಕಷ್ಟಪಟ್ಟು ಕೆಲಸ ಮಾಡಿದರು ಮತ್ತು ಈಗ ಒಳ್ಳೆಯ ಪ್ರತಿಭೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ರಾಹುಲ್​ ಡ್ರಾವಿಡ್​ರನ್ನು ಅಫ್ರಿದಿ ಕೊಂಡಾಡಿದರು.

    ಐಪಿಎಲ್​ ಮತ್ತು ಸರಿಯಾದ ಹೂಡಿಕೆಯ ಪರಿಣಾಮ
    ಭಾರತದಲ್ಲಿ ಕ್ರಿಕೆಟ್​ ಅಭೂತಪೂರ್ವ ಯಶಸ್ಸು ಸಾಧಿಸಲು ಐಪಿಎಲ್​ ಮತ್ತು ಸರಿಯಾದ ಹೂಡಿಕೆಯೇ ಕಾರಣ ಎಂದು ಅಫ್ರಿದಿ ಹೇಳಿದರು. ಸರಿಯಾದ ಪ್ರದೇಶಗಳಲ್ಲಿ ಹೂಡಿಕೆಯ ಪ್ರಾಮುಖ್ಯತೆಯನ್ನು ಭಾರತ ಎತ್ತಿ ತೋರಿಸಿತು. ಪ್ರತಿಭೆಯನ್ನು ಪೋಷಿಸಲು ಮತ್ತು ವೇಗದ ಬೌಲಿಂಗ್‌ನತ್ತ ಭಾರತ ಗಮನ ಹರಿಸಿರುವುದನ್ನು ಅಫ್ರಿದಿ ಶ್ಲಾಘಿಸಿದರು. (ಏಜೆನ್ಸೀಸ್​)

    ಅನುದಾನ ಕಡಿತ ವಿಚಾರ: ಡಿಕೆಶಿ ಕಾಲಿಗೆ ಬಿದ್ದ ಮುನಿರತ್ನ! ಅರಮನೆ ಮೈದಾನದಲ್ಲಿ ಭಾರೀ ಹೈಡ್ರಾಮ

    ಅಮೀರ್ ಖಾನ್ ಮುಂದಿನ ಚಿತ್ರ ‘ಸಿತಾರೆ ಜಮೀನ್ ಪರ್’!; ಇದು ‘ತಾರೆ ಜಮೀನ್ ಪರ್‌’ ಸೀಕ್ವೆಲ್​?

    ಇಸ್ರೇಲ್-ಪ್ಯಾಲೆಸ್ತೇನ್​ ಬಿಕ್ಕಟ್ಟಿಗೆ ಅಮೆರಿಕಾ ನೀತಿಯೇ ಕಾರಣ: ಪುತಿನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts