More

    ಕಾಶ್ಮೀರ ಕಣಿವೆಗೆ ನುಸುಳಲು ಯತ್ನಿಸಿದ 9 ಉಗ್ರರ ಹತ್ಯೆ, ಭದ್ರತಾ ಪಡೆಯ ಮೂವರು ಸಿಬ್ಬಂದಿ ಹುತಾತ್ಮ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ 9 ಉಗ್ರರನ್ನು ಹೊಡೆದುರುಳಿಸಿರುವುದಾಗಿ ಭಾರತೀಯ ಸೇನಾಪಡೆ ಮೂಲಗಳು ತಿಳಿಸಿವೆ. ನಾಲ್ವರು ಉಗ್ರರನ್ನು ಶನಿವಾರ ಹತ್ಯೆ ಮಾಡಲಾಗಿದ್ದರೆ, ಭಾನುವಾರ ಐವರು ಉಗ್ರರನ್ನು ಹತ್ಯೆ ಮಾಡಲಾಯಿತು ಎಂದು ಹೇಳಿವೆ. ಇನ್ನೂ ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗಿದೆ.

    ಕಳೆದ 24 ಗಂಟೆಗಳಲ್ಲಿ ನಡೆದ ಈ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಯ ಹಲವು ಸಿಬ್ಬಂದಿ ಗಾಯಗೊಂಡಿದ್ದರು. ಅವರೆಲ್ಲರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂವರು ಯೋಧರು ಭಾನುವಾರ ಹುತಾತ್ಮರಾದರು. ಇನ್ನುಳಿದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಕ್ಷಣಾ ವಿಭಾಗದ ವಕ್ತಾರ ಕರ್ನಲ್​ ರಾಜೇಶ್​ ಕಾಲಿಯಾ ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಶನಿವಾರ ನಾಲ್ವರು ಉಗ್ರರು ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದರು. ನಿಖರ ಮಾಹಿತಿ ದೊರೆತ ಬಳಿಕ ಭದ್ರತಾ ಪಡೆ ಸಿಬ್ಬಂದಿ ಮುಂಜಾನೆ 5.45ರಿಂದ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ಆರಂಭಿಸಿದ ಕಾರಣ ಭದ್ರತಾಪಡೆ ಸಿಬ್ಬಂದಿ ಪ್ರತಿದಾಳಿ ನಡೆಸಿದರು ಎನ್ನಲಾಗಿದೆ.

    ಶನಿವಾರ ರಾತ್ರಿಯ ಕಾರ್ಯಾಚರಣೆಯಲ್ಲಿ ಕುಲ್ಗಾಂನ ಶಾಹೀದ್​ ಸಾಧಿಕ್​ ಮಲಿಕ್​, ಅನಂತನಾಗ್​ನ ಮೊಹಮ್ಮದ್​ ಅಶ್ರಫ್​ ಮಲಿಕ್​, ಹನನ್​ ಚಾವಲ್ಗಾಂನ ವಕಾರ್​ ಫಾರೂಕ್​ ಹತ ಉಗ್ರರು. ಮತ್ತೊಬ್ಬ ಉಗ್ರನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.

    ಭಾನುವಾರದ ಕಾರ್ಯಾಚರಣೆಯಲ್ಲಿ ಹತರಾಗಿರುವ ಉಗ್ರರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಸೇನಾಪಡೆ ಮೂಲಗಳು ಹೇಳಿವೆ.

    ನನ್ನ ಹಣೆಬರಹ ಅಲ್ಲಾಹ್‌ನ ಕೈಯಲ್ಲಿದೆ ಎಂದವನ ಸಾವು: ನಿಜಾಮುದ್ದೀನ್‌ ಸಭೆಯಲ್ಲಿ ಭಾಗಿಯಾಗಿದ್ದ ದಕ್ಷಿಣ ಆಫ್ರಿಕಾದ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts