More

    ಲಡಾಖ್​ ಗಡಿಯಲ್ಲಿ ವಾಯುಸೇನೆಯ ಸಮರ ಕಾರ್ಯಾಚರಣೆ; ಯೋಧರ ಪಡೆ, ಶಸ್ತ್ರಾಸ್ತ್ರಗಳ ರವಾನೆ

    ನವದೆಹಲಿ: ಭಾರತದ ವಾಯುಸೇನೆ ಮುಂಚೂಣಿಯ ಯುದ್ಧ ವಿಮಾನಗಳಾದ ಸುಖೋಯ್​- 30ಎಂಕೆಐ, ಮಿಗ್​-29 ಚೀನಾದ ಗಡಿಯಲ್ಲಿರುವ ವಾಯುನೆಲೆಯಲ್ಲಿ ನಿರಂತರ ಹಾರಾಟ ನಡೆಸುತ್ತಿವೆ.

    ವಾಯುನೆಲೆಯಲ್ಲಿ ಸರಕು ಸಾಗಣೆಯ ದೈತ್ಯ ವಿಮಾನಗಳಾದ ಅಮೆರಿಕದ ಸಿ-17, ಸಿ-130ಜೆ, ರಷ್ಯಾದ ಇಲ್ಯುಷಿನ್​-76 ಹಾಗೂ ಅಂಟೋನೋವ್​ ವಿಮಾನಗಳು ಬೀಡು ಬಿಟ್ಟಿವೆ.

    ಭಾರತದ ಗಡಿ ಭಾಗವಾದ ವಾಸ್ತವ ಗಡಿ ರೇಖೆಯಲ್ಲಿ ದೂರ ದೂರದ ಪ್ರದೇಶದಲ್ಲಿ ನಿಯೋಜಿಸಲು ಪಡೆಗಳ ರವಾನೆ ಹಾಗೂ ಈಗಾಗಲೇ ನಿಯೋಜಿಸಲಾಗಿರುವ ಪಡೆಗಳಿಗೆ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ತೊಡಗಿವೆ.

    ಇದನ್ನೂ ಓದಿ; ಪಾಕಿಸ್ತಾನದಿಂದ ನಮಗೆ ಮುಕ್ತಿ ಬೇಕು; ಪಾಕ್​ ಆಕ್ರಮಿತ ನೆಲದಲ್ಲಿ ಮೊಳಗಿದೆ ಬಂಡಾಯದ ಕಹಳೆ 

    ಯುದ್ಧ ಸನ್ನಿವೇಶದಲ್ಲಿ ಮಹತ್ವದ ಪಾತ್ರ ವಹಿಸುವ ಅಪಾಚೆ ಹೆಲಿಕಾಪ್ಟರ್​ಗಳ ನಿಯಮಿತವಾಗಿ ಲಡಾಖ್​ ಗಡಿ ಪ್ರದೇಶಗಳಲ್ಲಿ ಸಂಚರಿಸುತ್ತಿವೆ. ಅಮೆರಿಕ ನಿರ್ಮಿತ ಯುದ್ಧ ಹೆಲಿಕಾಪ್ಟರ್​ಗಳು ಹಾಗೂ ಇವುಗಳಿಗೆ ಚಿನೂಕ್​ ಹೆಲಿಕಾಪ್ಟರ್​ಗಳು ಸಾಥ್​ ನಿಡುತ್ತಿವೆ. ಭಾರತ- ಚೀನಾ ನಡುವೆ ಹಿಂಸಾತ್ಮಕ ಸಂಘರ್ಷ ಏರ್ಪಟ್ಟ ಬಳಿಕ ಇವುಗಳ ಹಾರಾಟವೂ ಹೆಚ್ಚಾಗಿದೆ.

    ಇಡೀ ಪ್ರದೇಶದಲ್ಲಿ ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸುವ ಚಟುವಟಿಕೆಗಳು ಭಾರಿ ಪ್ರಮಾಣದಲ್ಲಿ ಕಮಡು ಬರುತ್ತಿದೆ ಎಂದು ವಾಯುನೆಲೆಗೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ; ಭಾರತದ ಬೆಂಬಲಕ್ಕೆ ನಿಂತ ಜಪಾನ್​ ಗಡಿಗಳನ್ನು ಆಕ್ರಮಿಸಿದ ಚೀನಾ; ಗಸ್ತು ನೌಕೆಗಳ ನಿಯೋಜನೆ 

    ಚೀನಾ ಗಡಿಭಾಗದಲ್ಲಿರುವ ವಾಯನೆಲೆ ವಾಸ್ತವ ಗಡಿ ರೇಖೆಯುದ್ದಕ್ಕೂ ಕಾರ್ಯಚರಣೆಯನ್ನು ನಡೆಸುವಲ್ಲಿ ಬಹುಮುಖ್ಯವಾದ ಪಾತ್ರ ನಿರ್ವಹಿಸಲಿದೆ. ಇಲ್ಲಿ ನಡೆಯುವ ಯುದ್ಧ ಕಾರ್ಯಾಚರಣೆ ಹಾಗೂ ಸಹಾಯಕ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಮುಕ್ತವಾಗಿಸಲಾಗಿದೆ ಎಂದು ವಾಯುಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಗಡಿಯಲ್ಲಿ ಯಾವುದೇ ಪರಿಸ್ಥಿತಿ ಸವಾಲು ಬಂದೂ ಅದನ್ನು ಎದುರಿಸಲು ವಾಯುಸೇನೆ ಸಿದ್ಧವಾಗಿದೆ. ಅದಕ್ಕೆ ತಕ್ಕಂತೆ ಕಾಯಾರ್ಚರಣೆಯನ್ನು ಕೈಗೊಳ್ಳುತ್ತಿರುವುದು ಕೂಡ ಇದನ್ನು ಪುಷ್ಠಿಕರಿಸಿದೆ.

    ಭಾರತದ ಬೆಂಬಲಕ್ಕೆ ನಿಂತ ಜಪಾನ್​ ಗಡಿಗಳನ್ನು ಆಕ್ರಮಿಸಿದ ಚೀನಾ; ಗಸ್ತು ನೌಕೆಗಳ ನಿಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts