More

    ಎರಡನೇ ಟಿ20 ಪಂದ್ಯದಲ್ಲೂ ಸೋತ ಭಾರತ ಮಹಿಳಾ ತಂಡ

    ಲಖನೌ: ಎದುರಾಳಿ ತಂಡದ ಪ್ರಬಲ ನಿರ್ವಹಣೆ ಎದುರು ಮತ್ತೊಮ್ಮೆ ಸಂಪೂರ್ಣ ಮಂಕಾದ ಭಾರತ ಮಹಿಳಾ ತಂಡ 2ನೇ ಟಿ20 ಕ್ರಿಕೆಟ್ ಪಂದ್ಯದಲ್ಲೂ ನಿರಾಸೆ ಅನುಭವಿಸಿತು. ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸ್ಮತಿ ಮಂದಾನ ಪಡೆ 6 ವಿಕೆಟ್‌ಗಳಿಂದ ಪ್ರವಾಸಿ ದಕ್ಷಿಣ ಆಫ್ರಿಕಾ ಎದುರು ಶರಣಾಯಿತು. 3 ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ 2-0 ಯಿಂದ ಸೋಲು ಕಂಡಿತು. ಇದಕ್ಕೂ ಮೊದಲು ಏಕದಿನ ಸರಣಿಯಲ್ಲೂ 1-4 ರಿಂದ ಸೋತಿತ್ತು. 3ನೇ ಹಾಗೂ ಅಂತಿಮ ಟಿ20 ಪಂದ್ಯ ಮಂಗಳವಾರ ನಡೆಯಲಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಯುವ ಬ್ಯಾಟುಗಾರ್ತಿ ಶೆಫಾಲಿ ವರ್ಮ (47ರನ್, 31 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ರಿಚಾ ಘೋಷ್ (44*ರನ್, 26ಎಸೆತ, 8 ಬೌಂಡರಿ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‌ಗೆ 158 ರನ್ ಪೇರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ ಲೈಜೆಲ್ ಲೀ (70ರನ್, 45 ಎಸೆತ, 11 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 159 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಕಡೇ ಹಂತದಲ್ಲಿ ಲೌರಾ ವೊಲ್ವಾಡಾರ್ಟ್ (53*ರನ್, 39 ಎಸೆತ, 7 ಬೌಂಡರಿ) ಅಂತಿಮ ಹಂತದಲ್ಲಿ ಭಾರತದ ಗೆಲುವು ಕಸಿದರು.

    ಭಾರತ : 4 ವಿಕೆಟ್‌ಗೆ 158 (ಶೆಫಾಲಿ ವರ್ಮ 47, ಸ್ಮತಿ ಮಂದಾನ 7, ಹರ್ಲೀನ್ ಡಿಯೋಲ್ 31, ರೋಡ್ರಿಗಸ್ 16, ರಿಚಾ ಘೋಷ್ 44, ದೀಪ್ತಿ ಶರ್ಮ 7, ಎನ್.ಮಾಲ್ಬಾ 27ಕ್ಕೆ 1, ನಡಿನ್ ಡೆ ಕ್ಲೆರ್ಕ್ 28ಕ್ಕೆ 1, ಅನ್ನಾಕೆ ಬಾಷ್ 26ಕ್ಕೆ 1). ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 159 (ಲೈಜೆಲ್ 70, ವೊಲ್ವಾಡಾರ್ಟ್ 53*, ರಾಜೇಶ್ವರಿ 20ಕ್ಕೆ 1, ರಾಧಾ 25ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts