More

    ಡೌನ್​ಲೋಡಾದ್ರೆ ಹಣಕ್ಕೆ ಕನ್ನ!

    | ಕೀರ್ತಿನಾರಾಯಣ ಸಿ. ಬೆಂಗಳೂರು

    ಸೈಬರ್ ಅಪರಾಧ ತಡೆಗೆ ಸರ್ಕಾರ, ಪೊಲೀಸರು ಹೊಸಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿರುವ ಬೆನ್ನಲ್ಲೇ ಸೈಬರ್ ಖದೀಮರೂ ಸಹ ವಂಚನೆಗೆ ಹೊಸ ವರಸೆ ಆರಂಭಿಸಿದ್ದಾರೆ. ಡಿಜಿಟಲ್ ಅರೆಸ್ಟ್ ಕೇಸ್​ಗಳು ಮಿತಿಮೀರಿರುವ ಸಂದರ್ಭದಲ್ಲೇ ಕೆವೈಸಿ ಅಪ್​ಡೇಟ್ ಮಾಡುವುದಾಗಿ ಹೇಳಿ ಜನರಿಂದ ಪ್ರತಿಷ್ಠಿತ ಬ್ಯಾಂಕ್​ಗಳ ಹೆಸರಲ್ಲಿ ನಕಲಿ ಬ್ಯಾಂಕಿಂಗ್ ಅಪ್ಲಿಕೇಷನ್ ಡೌನ್​ಲೋಡ್ ಮಾಡಿಸುತ್ತಾರೆ. ಬಳಿಕ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಜಾಸ್ತಿಯಾಗಿವೆ.

    ಕೆನರಾ, ಐಸಿಐಸಿಐ ಸೇರಿ ದೇಶದ ಪ್ರತಿಷ್ಠಿತ ಬ್ಯಾಂಕ್​ಗಳ ಹೆಸರಲ್ಲಿ ವಂಚನೆ ಎಸಗಲಾಗುತ್ತಿದೆ. ಅನಾಮಧೇಯ ಹಾಗೂ ಅನುಮಾನಾಸ್ಪದ ಬ್ಯಾಂಕಿಂಗ್ ಅಪ್ಲಿಕೇಷನ್​ಗಳನ್ನು ಯಾವುದೇ ಕಾರಣಕ್ಕೂ ಡೌನ್​ಲೌಡ್ ಮಾಡಿ, ಮೊಬೈಲ್​ಗಳಲ್ಲಿ ಇನ್​ಸ್ಟಾಲ್ ಮಾಡಿಕೊಳ್ಳಬೇಡಿ ಎಂದು ಬ್ಯಾಂಕ್​ಗಳು ಹಾಗೂ ಸೈಬರ್ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ. ಒಂದು ವೇಳೆ ಮೋಸ ಹೋಗಿ ದ್ದರೆ ಕೂಡಲೇ ಸೈಬರ್ ಪೋರ್ಟಲ್ ಅಥವಾ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ.

    ಕರ್ನಾಟಕ ನಂ.2: ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್​ಸಿಆರ್​ಬಿ) ಅಂಕಿ-ಅಂಶದ ಪ್ರಕಾರ 2023ರಲ್ಲಿ ದೇಶದಲ್ಲಿ ಸೈಬರ್ ಅಪರಾಧ ಶೇ.24 ಹೆಚ್ಚಾಗಿವೆ. ಸೈಬರ್ ಕ್ರೖೆಂನಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ದೇಶದ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರ ನಂ.1 ಸ್ಥಾನದಲ್ಲಿದೆ. ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್ ಜಾಲಕ್ಕೆ ಸಿಕ್ಕಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯಾಗಿಲ್ಲ. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐಸಿಸಿಸಿಸಿ) ಕೊಟ್ಟಿರುವ ಮಾಹಿತಿಯ ಅನ್ವಯ 2021ರ ಏ.1ರಿಂದ ಈವರೆಗೆ ದೇಶದಲ್ಲಿ 10,300 ಕೋಟಿ ರೂ. ಸೈಬರ್ ಅಪರಾಧದಲ್ಲಿ ಲೂಟಿಯಾಗಿದೆ. ಇದರಲ್ಲಿ ಸೈಬರ್ ಕ್ರೖೆಂಗೆ ಒಳಗಾದ ತಕ್ಷಣವೇ ದೂರು ಕೊಟ್ಟವರ ಶೇ.10 ಹಣವನ್ನು ಮಾತ್ರವೇ ಬ್ಯಾಂಕ್ ಖಾತೆಗಳಲ್ಲೇ ಫ್ರೀಜ್ ಮಾಡಿ, ಕಾನೂನು ಪ್ರಕ್ರಿಯೆಯ ಮೂಲಕ ಸಂತ್ರಸ್ತರಿಗೆ ವಾಪಸ್ ಕೊಡಿಸಲಾಗಿದೆ.

    ಹೇಗೆಲ್ಲ ವಂಚಿಸ್ತಾರೆ?

    1. ಪ್ರತಿಷ್ಠಿತ ಬ್ಯಾಂಕ್​ಗಳ ಲೋಗೋ ಸೃಷ್ಟಿಸಿ ಬ್ಯಾಂಕಿಂಗ್ ಅಪ್ಲಿಕೇಷನ್ ಸೃಷ್ಟಿ

    2. ಕಸ್ಟಮರ್ ಸರ್ವೀಸ್ ಪಾಯಿಂಟ್ ಎಂಬ ನಕಲಿ ಎಪಿಕೆ ಸೃಷ್ಟಿಸುವುದು

    3. ವಾಟ್ಸ್​ಆಪ್, ಟೆಲಿಗ್ರಾಂ, ಸಾಮಾಜಿಕ ಜಾಲತಾಣಗಳ ಬಳಕೆ

    4. ಅವುಗಳ ಮುಖಾಂತರ ನಕಲಿ ಎಪಿಕೆ ಫೈಲ್ ಅನ್ನು ಕಳುಹಿಸುತ್ತಾರೆ

    5. ನಿಮ್ಮ ಮೊಬೈಲ್​ನಲ್ಲಿ ಅಪ್ಲಿಕೇಷನ್ ಇನ್​ಸ್ಟಾಲ್ ಮಾಡಿಸುತ್ತಾರೆ

    6. ಆಧಾರ್ ಕೆವೈಸಿ, ಪಾನ್ ಕಾರ್ಡ್ ವಿವರ, ನಂಬರ್ ಅಪ್ಡೇಟ್ ಮಾಡಿಸ್ತಾರೆ

    7. ಮೊಬೈಲ್​ನಲ್ಲಿ ಅಪ್ಲಿಕೇಷನ್ ಇನ್​ಸ್ಟಾಲ್ ಆಗುತ್ತಿದ್ದಂತೆ ಖಾತೆ ವಿವರ ಪಡೆಯುತ್ತಾರೆ

    8. ನೇರವಾಗಿ ಖಾತೆಯಲ್ಲಿನ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ

    *67 ಇದಕ್ಕೆ ಡಯಲ್ ಮಾಡಿ ನೋಡಿ…

    ವೈರಸ್ ಇರುವ ಬ್ಯಾಂಕಿಂಗ್ ಅಪ್ಲಿಕೇಷನ್ ಲಿಂಕ್ ಡೌನ್​ಲೋಡ್ ಮಾಡಿಸಿ, ಹ್ಯಾಕ್ ಮಾಡುವ ಸೈಬರ್ ಖದೀಮರು, ಮೊಬೈಲ್ ನಂಬರ್ ಫಾರ್ವರ್ಡೆಡ್ ಮಾಡಿಕೊಳ್ಳುವ ಮೂಲಕ ಒಟಿಪಿ ಸ್ವೀಕರಿಸಿ ಖಾತೆಗೆ ಕನ್ನ ಹಾಕುತ್ತಾರೆ. ಆದ್ದರಿಂದ ನಿಮ್ಮ ಮೊಬೈಲ್ ನಂಬರ್ ಯಾವುದಕ್ಕೆಲ್ಲ ಫಾರ್ವರ್ಡೆಡ್ ಆಗಿದೆ ಎಂದು ತಿಳಿದುಕೊಳ್ಳಲು *67 ನಂಬರ್​ಗೆ ಡಯಲ್ ಮಾಡಿ. ಒಂದು ವೇಳೆ ಫಾರ್ವರ್ಡೆಡ್ ಆಗಿದ್ದರೆ ನಿಮಗೆ ಬರುವ ಒಟಿಪಿಗಳು ಸೈಬರ್ ವಂಚಕರಿಗೆ ಹೋಗುತ್ತಿವೆ ಎಂಬುದು ನಿಶ್ಚಿತ. ಫಾರ್ವರ್ಡೆಡ್ ಇದ್ದರೆ ತಕ್ಷಣ ್ಪ02 ನಂಬರ್​ಗೆ ಡಯಲ್ ಮಾಡಿದರೆ ಯಾವೆಲ್ಲ ಸೇವೆಗಳಿಗೆ ಫಾರ್ವರ್ಡೆಡ್ ಆಗಿದೆಯೋ ಆ ಎಲ್ಲ ಸರ್ವೀಸ್​ಗಳು ಡಿಸೇಬಲ್ ಆಗಲಿವೆ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.

    1930ಗೆ ಕರೆ ಮಾಡಿ

    ಸೈಬರ್ ಅಪರಾಧಕ್ಕೆ ತುತ್ತಾಗಿರುವುದು ಗೊತ್ತಾದ ತಕ್ಷಣ ನ್ಯಾಷನಲ್ ಸೈಬರ್ ಕ್ರೖೆಂ ರಿಪೋರ್ಟಿಂಗ್ ಪೋರ್ಟಲ್ (ಎನ್​ಸಿಆರ್​ಪಿ) ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ದೂರು ಕೊಡಿ. ಕರೆ ಉಚಿತವಾಗಿದ್ದು, ಸ್ಥಳೀಯ ಭಾಷೆಯಲ್ಲೇ ಮಾಹಿತಿ ಪಡೆದುಕೊಂಡು ದೂರು ದಾಖಲಿಸಿ, ಮುಂದೇನು ಮಾಡಬೇಕು ಎಂಬುದರ ಕುರಿತಾಗಿಯೂ ಸಹಾಯವಾಣಿ ಸಿಬ್ಬಂದಿಯೇ ತಿಳಿಸುತ್ತಾರೆ.

    ಪೊಲೀಸರ ಸಲಹೆ ಏನು?

    1. ಶಂಕಾಸ್ಪದ ಮೊಬೈಲ್ ಅಪ್ಲಿಕೇಷನ್ ಡೌನ್​ಲೋಡ್ ಬೇಡ, ಇನ್​ಸ್ಟಾಲ್ ಮಾಡಿದ್ದರೆ ತಕ್ಷಣ ಮೊಬೈಲ್ ಇಂಟರ್​ನೆಟ್ ಆಫ್ ಮಾಡಿ

    2. ಮೊಬೈಲ್ ಸೆಟ್ಟಿಂಗ್ಸ್​ನಲ್ಲಿ ಆಪ್ ಮ್ಯಾನೇಜ್​ವೆುಂಟ್/ಆಪ್ಸ್, ಡೌನ್​ಲೋಡ್ ಪರಿಶೀಲಿಸಿ

    3. ಒಂದು ವೇಳೆ ಅಪರಿಚಿತ ಫೈಲ್​ಗಳು ಇದ್ದರೆ ಕೂಡಲೇ ಅವುಗಳನ್ನು ಡಿಲೀಟ್ ಮಾಡಿರಿ

    4. *67 ಗೆ ಡಯಲ್ ಮಾಡಿ ಮೊಬೈಲ್ ಸಂಖ್ಯೆ ಸುರಕ್ಷಿತಗೊಳಿಸಿ

    ದುಬಾರಿ ಕಾರು ಖರೀದಿಸಿದ ನಟ ಅಕ್ಕಿನೇನಿ ನಾಗ ಚೈತನ್ಯ! ಬೆಲೆ ಎಷ್ಟು ಗೊತ್ತಾ?

    ನಟ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು: ಅಹಮದಾಬಾದ್​ನಲ್ಲಿ ಚಿಕಿತ್ಸೆ! ಏನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts