More

    ಟಿ20ಯಲ್ಲೂ ಶುಭಾರಂಭ ಕಂಡ ಭಾರತ, ಶ್ರೀಲಂಕಾ ಎದುರು 38 ರನ್ ಜಯ

    ಕೊಲಂಬೊ: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಮೇಲುಗೈ ಸಾಧಿಸಿದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 38 ರನ್‌ಗಳಿಂದ ಮಣಿಸಿತು. ಇದರಿಂದ 3 ಪಂದ್ಯಗಳ ಸರಣಿಯಲ್ಲಿ ಶಿಖರ್ ಧವನ್ ಪಡೆ 1-0ಯಿಂದ ಮುನ್ನಡೆ ಸಾಧಿಸಿತು. ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಸೂರ್ಯಕುಮಾರ್ ಯಾದವ್ (50 ರನ್, 34 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಶಿಖರ್ ಧವನ್ (46 ರನ್, 36 ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿಯ ಸ್ಫೋಟಕ ಫಲವಾಗಿ 5 ವಿಕೆಟ್‌ಗೆ 164 ರನ್ ಕಲೆಹಾಕಿತು. ಪ್ರತಿಯಾಗಿ ಭುವನೇಶ್ವರ್ ಕುಮಾರ್ (22ಕ್ಕೆ 4) ಮಾರಕ ದಾಳಿಗೆ ನಲುಗಿದ ಶ್ರೀಲಂಕಾ ತಂಡ 18.3 ಓವರ್‌ಗಳಲ್ಲಿ 126 ರನ್‌ಗಳಿಗೆ ಸರ್ವಪತನ ಕಂಡಿತು. ಆರಂಭಿಕ ಅವಿಷ್ಕಾ ಫೆರ್ನಾಂಡೊ (26) ಹಾಗೂ ಚರಿತಾ ಅಸಲಂಕ (44 ರನ್, 26 ಎಸೆತ, 3 ಬೌಂಡರಿ, 3 ಸಿಕ್ಸರ್) ಹೊರತುಪಡಿಸಿ ಲಂಕಾದ ಉಳಿದ ಬ್ಯಾಟ್ಸ್‌ಮನ್‌ಗಳು ನಿರಾಸೆ ಅನುಭವಿಸಿದರು.

    ಇದನ್ನೂ ಓದಿ: ಪ್ರಿಯಾ ಮಲಿಕ್ ಅಭಿನಂದಿಸಿ ಟ್ರೋಲ್ ಆದ ಗಣ್ಯರ ಟ್ವೀಟ್,

    ಸ್ಫೋಟಿಸಿದ ಸೂರ್ಯ: ಇದಕ್ಕೂ ಮೊದಲು ಪೃಥ್ವಿ ಷಾ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಬಳಿಕ ಶಿಖರ್ ಧವನ್ ಹಾಗೂ ಸಂಜು ಸ್ಯಾಮ್ಸನ್ (27 ರನ್, 20 ಎಸೆತ, 2 ಬೌಂಡರಿ, 1 ಸಿಕ್ಸರ್) ಜೋಡಿ ಸಮಯೋಚಿತ ಬ್ಯಾಟಿಂಗ್ ಫಲವಾಗಿ ತಂಡಕ್ಕೆ ಚೇತರಿಕೆ ನೀಡಿತು. ಈ ಜೋಡಿ 2ನೇ ವಿಕೆಟ್‌ಗೆ 51 ರನ್ ಕಲೆಹಾಕಿತು. ಬಳಿಕ ಬಂದ ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಜೋಡಿ 3ನೇ ವಿಕೆಟ್‌ಗೆ ಬಿರುಸಿನ 62 ರನ್ ಜತೆಯಾಟವಾಡಿತು. ಕಡೇ ಹಂತದಲ್ಲಿ ಇಶಾನ್ ಕಿಶನ್ (20*ರನ್, 14 ಎಸೆತ, 1 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್: ಭಾರತ ಹಾಕಿ ತಂಡಕ್ಕೆ ಆಸ್ಟ್ರೇಲಿಯಾ ಎದುರು ಹೀನಾಯ ಸೋಲು, 

    ಭಾರತ: 5 ವಿಕೆಟ್‌ಗೆ 164 (ಶಿಖರ್ ಧವನ್ 46, ಸೂರ್ಯಕುಮಾರ್ ಯಾದವ್ 50, ಸಂಜು ಸ್ಯಾಮ್ಸನ್ 27, ಇಶಾನ್ ಕಿಶನ್ 20, ದುಶ್ಮಂತ ಚಮೀರಾ 24ಕ್ಕೆ 2, ವನಿಂದು ಹಸರಂಗ 28ಕ್ಕೆ 2), ಶ್ರೀಲಂಕಾ: 18.3 ಓವರ್‌ಗಳಲ್ಲಿ 126 (ಚರಿತಾ ಅಸಲಂಕ 44, ಅವಿಷ್ಕಾ ೆರ್ನಾಂಡೊ 26, ಭುವನೇಶ್ವರ್ ಕುಮಾರ್ 22ಕ್ಕೆ 4, ದೀಪಕ್ ಚಹರ್ 24ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts