More

    ಟೋಕಿಯೊ ಒಲಿಂಪಿಕ್ಸ್: ಭಾರತ ಹಾಕಿ ತಂಡಕ್ಕೆ ಆಸ್ಟ್ರೇಲಿಯಾ ಎದುರು ಹೀನಾಯ ಸೋಲು

    ಟೋಕಿಯೊ: ಭಾರತ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್‌ನ ತನ್ನ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಹೀನಾಯ ಸೋಲು ಕಂಡಿತು. ಭಾನುವಾರ ನಡೆದ ಎ ಗುಂಪಿನ ಹಣಾಹಣಿಯಲ್ಲಿ ಭಾರತ ತಂಡ 1-7 ಗೋಲುಗಳಿಂದ ವಿಶ್ವ ನಂ.1 ಆಸ್ಟ್ರೇಲಿಯಾ ತಂಡದ ಎದುರು ಸೋಲನುಭವಿಸಿತು. ಆಸ್ಟ್ರೇಲಿಯಾದ ಗ್ರೇಹಂ ರೀಡ್ 2019ರ ಏಪ್ರಿಲ್‌ನಲ್ಲಿ ಮುಖ್ಯಕೋಚ್ ಆಗಿ ಆಯ್ಕೆಯಾದ ಬಳಿಕ ಭಾರತ ಅನುಭವಿಸಿದ ಹೀನಾಯ ಸೋಲು ಇದಾಗಿದೆ. ಮೊದಲ ಕ್ವಾರ್ಟರ್‌ನಿಂದಲೇ ಆಸೀಸ್ ಬಳಗ ನಡೆಸಿದ ಸವಾರಿ ಎದುರು ಮನ್‌ಪ್ರೀತ್ ಸಿಂಗ್ ಬಳಗ ತಿರುಗೇಟು ನೀಡಲು ವಿಲವಾಯಿತು. ಶನಿವಾರ ನ್ಯೂಜಿಲೆಂಡ್ ಎದುರು 3-2 ರಿಂದ ಜಯ ದಾಖಲಿಸಿ ಭರ್ಜರಿ ಶುಭಾರಂಭ ಕಂಡಿದ್ದ ಹಾಕಿ ತಂಡ ಕನಿಷ್ಠ ಪೈಪೋಟಿ ನೀಡಲು ವಿಫಲವಾಯಿತು.

    ಇದನ್ನೂ ಓದಿ: 43 ಎಸೆತಗಳಲ್ಲಿ 93 ರನ್ ಸಿಡಿಸಿದ ಭಾರತದ ಜೆಮೀಮಾ ರೋಡ್ರಿಗಸ್,

    ಮೊದಲ ಕ್ವಾರ್ಟರ್‌ನಲ್ಲಿ ಡೇನಿಲ್ ಬೀಲೆ (10ನೇ ನಿಮಿಷ) ಆರಂಭದಲ್ಲೇ ಭಾರತಕ್ಕೆ ಆಘಾತ ನೀಡಿದರು. ಬಳಿಕ ಜೆರೆಮಿ ಹೇವರ್ಡ್ (21ನೇ ನಿಮಿಷ), ಆಂಡ್ರ್ಯೂ ಫ್ಲೈನ್ ಒಗಿಲಿವೀ (23), ಜೋಶ್ವಾ ಬೆಲ್ಟ್‌ಜ್ (26), ಬ್ಲೇಕ್ ಗೋವರ್ಸ್‌ (40, 42ನೇ ನಿಮಿಷ) ಹಾಗೂ ಟಿಮ್ ಬ್ರಾಂಡ್ (51ನೇ ನಿಮಿಷ) ಆಸೀಸ್ ಪರ ಇತರ ಗೋಲು ಬಾರಿಸಿದರು. ಭಾರತ ತಂಡದ ಪರ ದಿಲ್‌ಪ್ರೀತ್ ಸಿಂಗ್ (34ನೇ ನಿಮಿಷ) ಏಕೈಕ ಗೋಲು ಸಿಡಿಸಿದರು. ಆಸ್ಟ್ರೇಲಿಯಾ ತಂಡ ಆಕ್ರಮಣಕಾರಿ ನಿರ್ವಹಣೆ ತೋರುತ್ತಿದ್ದರೆ 8 ಬಾರಿ ಚಾಂಪಿಯನ್ ತಂಡ ಸಂಪೂರ್ಣ ನಿಸ್ತೇಜವಾಯಿತು.

    ಇದನ್ನೂ ಓದಿ: VIDEO: ಟೋಕಿಯೊದಲ್ಲಿ ಕ್ರೀಡಾಹಬ್ಬ ಆರಂಭ ; ಸೂರ್ಯ ಉದಯಿಸುವ ನಾಡಲ್ಲಿ ಒಲಿಂಪಿಕ್ಸ್ ಶುರು, 

    ಭಾರತಕ್ಕೆ ಮುಂದಿನ ಎದುರಾಳಿ: ಸ್ಪೇನ್
    ಯಾವಾಗ: ಭಾನುವಾರ

    * 49: ಭಾರತ ತಂಡ ಒಲಿಂಪಿಕ್ಸ್‌ನಲ್ಲಿ 49 ವರ್ಷಗಳಿಂದ ಆಸ್ಟ್ರೇಲಿಯಾ ಎದುರು ಜಯದಾಖಲಿಸಿಲ್ಲ. 1972 ಮ್ಯೂನಿಚ್ ಕೂಟದಲ್ಲಿ ಭಾರತ 3-1 ರಿಂದ ಜಯ ದಾಖಲಿಸಿತ್ತು. 1976ರ ಮಾಂಟ್ರಿಲ್ ಕೂಟದಲ್ಲಿ ಭಾರತ 1-6 ರಿಂದ ಆಸೀಸ್‌ಗೆ ಶರಣಾಗಿತ್ತು. ಭಾರತ ಒಲಿಂಪಿಕ್ಸ್‌ನಲ್ಲಿ ಇದುವರೆಗೂ ಆಸೀಸ್ ಎದುರು ಅನುಭವಿಸಿದ ಅತ್ಯಂತ ಹೀನಾಯ ಸೋಲು ಇದಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts